Asianet Suvarna News Asianet Suvarna News

ಜಯಮಹಲ್‌ ರಸ್ತೆ ವಿಸ್ತರಣೆ: 112 ಮರಕ್ಕೆ ಕೊಡಲಿ?

2.8 ಕಿ.ಮೀ. ಮೇಖ್ರಿ ವೃತ್ತದಿಂದ ದಂಡು ರೈಲ್ವೆ ನಿಲ್ದಾಣದವರೆಗಿನ ಉದ್ದ

112 Trees To Be Axed for Widening Jayamahal Road

ಬೆಂಗಳೂರು (ಫೆ.06): ನಗರದ ಮೇಖ್ರಿ ವೃತ್ತದಿಂದ ದಂಡು ರೈಲ್ವೆ ನಿಲ್ದಾಣದವರೆಗಿನ ಜಯಮಹಲ್‌ ರಸ್ತೆಯ ವಿಸ್ತರಣೆ ವೇಳೆ ವಿವಿಧ ಪ್ರಬೇಧದ 112 ಮರಗಳನ್ನು ಕತ್ತರಿಸಬೇಕಾಗುತ್ತದೆ ಎಂಬ ಅಂಶ ಬಿಬಿಎಂಪಿ ಅರಣ್ಯ ವಿಭಾಗದಿಂದ ನಡೆಸಿದ ಟೋಟಲ್‌ ಸ್ಟೇಷನ್‌ ಸರ್ವೆಯಿಂದ ಬೆಳಕಿಗೆ ಬಂದಿದೆ.

ಬಳ್ಳಾರಿ ಹಾಗೂ ಜಯಮಹಲ್‌ ರಸ್ತೆಗಳಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಎರಡೂ ರಸ್ತೆಗಳ ವಿಸ್ತರಣೆಗೆ ಕೈಗೆತ್ತಿಕೊಳ್ಳುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲು ಪಾಲಿಕೆ ಮುಂದಾಗಿತ್ತು. ಅದರ ಹಿನ್ನೆಲೆಯಲ್ಲಿ ರಸ್ತೆಗಳ ವಿಸ್ತರಣೆ ವೇಳೆ ಅನಿವಾರ್ಯವಾಗಿ ಕಡಿಯಲೇಬೇಕಾದ ಮರಗಳು, ವಿಸ್ತರಣೆಯಾಗಲಿರುವ ಜಾಗದಲ್ಲಿನ ಮರಗಳ ಸಂಖ್ಯೆ, ಉಳಿಸಬಹುದಾದ ಮರಗಳ ಸಂಖ್ಯೆ ಹೀಗೆ ಹಲವಾರು ವಿಚಾರಗಳ ಕುರಿತು ಸಮಗ್ರ ವರದಿ ನೀಡಲು ಬಿಬಿಎಂಪಿ ಅರಣ್ಯ ವಿಭಾಗದಿಂದ ಟೋಟಲ್‌ ಸ್ಪೇಷನ್‌ ಸರ್ವೆ ನಡೆಸಲಾಗಿತ್ತು. ಜಯಮಹಲ್ ರಸ್ತೆಯ ವಿಸ್ತರಣೆಗೆ ಬಿಬಿಎಂಪಿ ಯೋಜನೆ ರೂಪಿಸಿದ್ದು, ವಿಸ್ತರಣೆ ವೇಳೆ ರಸ್ತೆಯಲ್ಲಿರುವ ನೂರಾರು ಮರಗಳು ಧರೆಗೆ ಉರುಳುವ ಸಾಧ್ಯತೆಯಿದೆ.

ಜಯಮಹಲ್‌ ರಸ್ತೆ ವಿಸ್ತರಣೆಗಾಗಿ ನಡೆಸಿದ ಟೋಟಲ್‌ ಸ್ಟೇಷನ್‌ ಸರ್ವೆಯಲ್ಲಿ 112 ಮರಗಳನ್ನು ಗುರುತಿಸಲಾಗಿದೆ. ಮರಗಳನ್ನು ಕತ್ತರಿಸಲು ವೃಕ್ಷ ಅಧಿಕಾರಿಯಿಂದ ಅನುಮತಿ ಪಡೆದು, ಒಂದೊಮ್ಮೆ ಅಧಿಕಾರಿ 112 ಮರಗಳನ್ನು ಕತ್ತರಿಸಲು ಅನುಮತಿ ನೀಡಲು ನಿರಾಕರಿಸಿದರೆ ಬಿಬಿಎಂಪಿ ಅದನ್ನು ಪ್ರಶ್ನಿಸಿ ವೃಕ್ಷ ಪ್ರಾಧಿಕಾರದ ಮೊರೆ ಹೋಗಬಹುದಾಗಿದೆ. ವೃಕ್ಷ ಪ್ರಾಧಿಕಾರ ನೀಡುವ ಆದೇಶ ಅಂತಿಮವಾಗಿರುತ್ತದೆ.
ಅಪ್ಪುರಾವ್‌ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ

ಸರ್ವೆ ಕಾರ್ಯ ಪೂರ್ಣಗೊಳಿಸಿರುವ ಅರಣ್ಯ ವಿಭಾಗದ ಅಧಿಕಾರಿಗಳು ಜಯಮಹಲ್‌ ರಸ್ತೆ ವಿಸ್ತರಣೆಗೆ 112 ಮರಗಳ ಹರಣ ಮಾಡಬೇಕಿದೆ ಎಂದು ತಿಳಿಸಿದೆ. ಇದರೊಂದಿಗೆ ಬಳ್ಳಾರಿ ರಸ್ತೆಯಲ್ಲಿ ಕಡಿಯಬೇಕಾದ ಮರಗಳ ಸಂಖ್ಯೆಯನ್ನು ಗುರುತಿಸಲಾಗಿದೆ. ಆದರೆ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ ಉಕ್ಕಿನ ಸೇತುವೆ ಸಂಬಂಧ ಪ್ರಕರಣ ಬಾಕಿಯಿರುವ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆಯ ವಿಸ್ತರಣೆ ಕಾಮಗಾರಿಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಆಕ್ಷೇಪಣೆಗಳ ಸ್ವೀಕಾರ: ಜಯಮಹಲ್‌ ರಸ್ತೆ ವಿಸ್ತರಣೆ ವೇಳೆ 112 ಮರಗಳನ್ನು ಕತ್ತರಿಸುವುದು ಅನಿವಾರ್ಯವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿ ಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಲು ಬಿಬಿಎಂಪಿ ಮುಂದಾಗಿದೆ. ಅದರಂತೆ ಶೀಘ್ರವೇ ಪ್ರಕಟಣೆ ಹೊರಡಿಸಲಿರುವ ಬಿಬಿಎಂಪಿ ಮರ ಕತ್ತರಿಸುವ ಕುರಿತಂತೆ ಸಾರ್ವಜನಿಕರಿಗೆ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಕೋರಲಿದೆ. ಸಾರ್ವಜನಿಕರಿಂದ ಬರುವ ಆಕ್ಷೇ​ಪಣೆಗಳನ್ನು ಪರಿಗಣನೆಗೆ ತೆಗೆದು ಕೊಂಡು ನಂತರ ರಸ್ತೆ ವಿಸ್ತರಣೆ ಕಾರ್ಯ ಆರಂಭಿಸ ಲಾ​ಗುವುದು ಎಂದು ಬಿಬಿಎಂಪಿ ಅರಣ್ಯ ವಿಭಾಗದ ಅಧಿ​ಕಾ​ರಿ​ಯೊಬ್ಬರು ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

ವೃಕ್ಷ ಸಮಿತಿಯ ಕಡೆಗಣನೆ: ನಗರದಲ್ಲಿ ಯಾವುದೇ ಯೋಜನೆ ಕೈಗೊಳ್ಳುವಾಗ 50ಕ್ಕಿಂತ ಹೆಚ್ಚು ಮರಗಳನ್ನು ಕಡಿಯಬೇಕಾದರೆ, ಸಾರ್ವಜನಿಕರ ಅಹವಾಲು ಸ್ವೀಕರಿಸಬೇಕು ಎಂದು 2011ರಲ್ಲಿ ಹೈಕೋರ್ಟ್‌ ಆದೇಶ ಹೊರಡಿಸಿದೆ. ಹೈಕೋರ್ಟ್‌ ಆದೇಶದ ಅನ್ವಯ ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆ 1976ಕ್ಕೆ 2015ರಲ್ಲಿ ತಿದ್ದುಪಡಿ ತರಲಾಗಿದ್ದು, ಕಾಯ್ದೆಯ ಪ್ರಕಾರ ಮರಗಳನ್ನು ಕಡಿಯಬೇಕಾದರೆ ಸಾರ್ವಜನಿಕರ ಅಹವಾಲು ಮತ್ತು ಮರ ಕಡಿಯಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ವೃಕ್ಷ ಸಮಿತಿ ನೇಮಿಸಬೇಕು ಎಂಬ ನಿಯಮವಿದೆ. ಇದರೊಂದಿಗೆ ಯಾವುದೇ ಅಭಿವೃದ್ಧಿ ಕಾಮಗಾರಿಗೆ 50ಕ್ಕೂ ಹೆಚ್ಚಿನ ಮರಗಳನ್ನು ಕಡಿಯಬೇಕಾಗಿ ಬಂದಾಗ ಸಮಿತಿ ತೀರ್ಮಾನ ಅಂತಿಮವಾಗಿರುತ್ತದೆ. ಆದರೆ, ಜಯಮಹಲ್‌ ರಸ್ತೆಯಲ್ಲಿ 112 ಮರಗಳನ್ನು ಕಡಿಯಲು ಗುರುತಿಸಲಾಗಿದ್ದರೂ ವೃಕ್ಷ ಸಮಿತಿ ನಿರ್ಲಕ್ಷಿಸಿ ಮುಂದಡಿಯಿಟ್ಟಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ವೃಕ್ಷ ಸಮಿತಿ ಉದ್ದೇಶ?: ನಗರದಲ್ಲಿ ಮರಗಳನ್ನು ಕಡಿಯಬೇಕಾಗಿ ಬಂದಾಗ ವೃಕ್ಷ ಸಮಿತಿಯ ನಿರ್ಧಾರವೇ ಅಂತಿಮ. ಹೀಗಾಗಿ ಯಾವುದೇ ಯೋಜನೆ ಕೈಗೆತ್ತಿಕೊಳ್ಳುವ ವೇಳೆ ಕಡಿಯಲು ಅಂದಾಜಿಸಿರುವ ಮರಗಳ ಸಂಖ್ಯೆ ಸರಿಯೇ, ಎಷ್ಟುಮರಗಳನ್ನು ಉಳಿಸಿಕೊಂಡು ಕಾಮಗಾರಿ ನಡೆಸಬ ಹುದು ಎಂಬ ಸಲಹೆಗಳನ್ನು ವೃಕ್ಷ ಸಮಿತಿ ನೀಡುತ್ತ ದೆ. ಇದರೊಂದಿಗೆ ಅಂದಾಜಿಸಿರುವ ಮರಗಳಲ್ಲಿ ಅಪರೂಪದ ಪ್ರಬೇಧದ ಮರಗಳಿದ್ದಾರೆ ಅವುಗಳ ನ್ನು ರಕ್ಷಿಸುವುದು ಹೇಗೆ ಎಂಬುದರ ಕುರಿತು ಸಮಿತಿ ಮಾಹಿತಿ ನೀಡುತ್ತದೆ.

Follow Us:
Download App:
  • android
  • ios