Asianet Suvarna News Asianet Suvarna News

ಚುನಾವಣೆ ವೇಳೆ ಆಸ್ತಿ ವಿವರ ಸಲ್ಲಿಸದ 11 ಮಂದಿ ವಜಾ

ಆಸ್ತಿ ವಿವರ ಸಲ್ಲಿಸದ ರಾಜ್ಯದ 9 ಜಿಲ್ಲೆಗಳ 11 ಗ್ರಾಮ ಪಂಚಾಯಿತಿ ಸದಸ್ಯರ ಸದಸ್ಯತ್ವವನ್ನು ರಾಜ್ಯ ಚುನಾವಣಾ ಆಯೋಗ ರದ್ದುಗೊಳಿಸಿದೆ. 
 

11 Village Panchayat Members Dismiss
  • Facebook
  • Twitter
  • Whatsapp

ಮಂಡ್ಯ: ಆಸ್ತಿ ವಿವರ ಸಲ್ಲಿಸದ ರಾಜ್ಯದ 9 ಜಿಲ್ಲೆಗಳ 11 ಗ್ರಾಮ ಪಂಚಾಯಿತಿ ಸದಸ್ಯರ ಸದಸ್ಯತ್ವವನ್ನು ರಾಜ್ಯ ಚುನಾವಣಾ ಆಯೋಗ ರದ್ದುಗೊಳಿಸಿದೆ. 

2015-16 ಮತ್ತು 2016-17ನೇ ಸಾಲಿನಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಹಾಗೂ ಚುನಾಯಿತರಾದ ನಂತರವೂ ಈ 11 ಮಂದಿ ಸದಸ್ಯರು ಇದುವರೆಗೂ ತಮ್ಮ ಆಸ್ತಿ ವಿವರ ಸಲ್ಲಿಸದ ಕಾರಣ ಚುನಾವಣಾ ಆಯುಕ್ತರು ಈ ಕ್ರಮ ಕೈಗೊಂಡಿದ್ದಾರೆ. 

ಮಂಡ್ಯ ಜಿಲ್ಲೆಯ 1, ಹಾಸನದ 2, ಕೊಡಗಿನ 2, ಬೆಂಗಳೂರು ನಗರದ 1, ತುಮಕೂರಿನ 1, ದಾವಣಗೆರೆಯ 1, ಧಾರವಾಡದ 1, ಬೆಳಗಾವಿಯ 1 ಹಾಗೂ ಕಲಬುರಗಿ ಜಿಲ್ಲೆಯ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ.

Follow Us:
Download App:
  • android
  • ios