11 ಆಪಾದಿತರಲ್ಲಿ ಸಫ್ದಾರ್ ನಗೋರಿ ಕೂಡ ಒಬ್ಬ. ಸಿಮಿ ಸಂಘಟನೆಯ ಈತ ಅನೇಕ ಬಾಂಬ್ ಸ್ಫೋಟಗಳ ಮಾಸ್ಟರ್ ಮೈಂಡ್ ಆಗಿದ್ದಾನೆ.
ಇಂದೋರ್(ಫೆ. 27): ದೇಶದ ವಿವಿಧೆಡೆ ರಾಷ್ಟ್ರವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ 11 ಸಿಮಿ ಉಗ್ರರಿಗೆ ಇಂದೋರ್ ಜಿಲ್ಲಾ ನ್ಯಾಯಾಲಯವು ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿದೆ. ಈ ಹನ್ನೊಂದು ಮಂದಿ ಅಪಾಯಕಾರಿ ಶಸ್ತ್ರಾಸ್ತ್ರಗಳು, ಸ್ಫೋಟಕಗಳನ್ನು ಇಟ್ಟುಕೊಂಡಿದ್ದು ಹಾಗೂ ದೇಶವಿರೋಧಿ ಕೃತ್ಯಗಳಿಗೆ ಸಂಚು ರೂಪಿಸಿದ್ದು ನ್ಯಾಯಾಲಯದ ವಿಚಾರಣೆ ವೇಳೆ ಸಾಬೀತಾಗಿತ್ತು. 2008ರ ಮಾರ್ಚ್'ನಲ್ಲಿ ಎಸ್'ಟಿಎಫ್ ಪಡೆಯು ಈ 11 ಮಂದಿಯನ್ನು ಬಂಧಿಸಿತ್ತು. ಆ ಬಳಿಕ ಇಲ್ಲಿಯ ವಿಶೇಷ ಸಿಬಿಐ ಕೋರ್ಟ್'ನಲ್ಲಿ ಸುದೀರ್ಘ ವಿಚಾರಣೆ ನಡೆದಿದೆ.
11 ಆಪಾದಿತರಲ್ಲಿ ಸಫ್ದಾರ್ ನಗೋರಿ ಕೂಡ ಒಬ್ಬ. ಸಿಮಿ ಸಂಘಟನೆಯ ಈತ ಅನೇಕ ಬಾಂಬ್ ಸ್ಫೋಟಗಳ ಮಾಸ್ಟರ್ ಮೈಂಡ್ ಆಗಿದ್ದಾನೆ. 2008ರಲ್ಲಿ ವಿವಿಧ ನಗರಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಗಳ ಹಿಂದೆ ಈತನ ಕೈವಾಡ ಇರುವುದು ರುಜುವಾತಾಗಿದೆ.
