11 ಜನ ಸತ್ತ ಮನೆಯಲ್ಲಿ 11 ಪೈಪ್: ಏನಿದರ ರಹಸ್ಯ?

11 Pipes in Burari House Deepen Mystery of 11 Deaths
Highlights

11 ಜನ ಸತ್ತ ಮನೆಯಲ್ಲಿ 11 ಪೈಪ್

ಆತ್ಮ ಹೊರ ಹೋಗಲು ಪೈಪ್ ಅಳವಡಿಕೆ?

ಲಲಿತ್ ಭಾಟೀಯಾ ಡೈರಿಯಲ್ಲಿ ಏನಿದೆ?

ಬೆಚ್ಚಿ ಬೀಳಿಸಿದ ಸಾಯುವ ವಿಧಾನ ವಿವರಣೆ 

ನವದೆಹಲಿ[ಜು.3]: ಇಡೀ ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿರುವ ದೆಹಲಿಯ ಒಂದೇ ಕುಟುಂಬದ ೧೧ ಜನರ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಕಳೆದ ವಾರ ಬುರಾರಿಯಲ್ಲಿ ನಡೆದ 11 ಮಂದಿ ಸಾಮೂಹಿಕ ಆತ್ಮಹತ್ಯೆ ಪ್ರಕರಣ ದಿನೇ ದಿನೇ ಮತ್ತಷ್ಟು ನಿಗೂಢವಾಗುತ್ತಿದೆ. ದುರಂತ ಅಂತ್ಯ ಕಂಡ ಭಾಟಿಯಾ ಕುಟಂಬ ವಾಸಿಸುತ್ತಿದ್ದ ಮನೆ ಗೋಡೆಯಲ್ಲಿ 11 ಪೈಪ್ ಗಳು ಕಂಡುಬಂದಿದ್ದು 11 ಮಂದಿ ಸಾವಿಗೂ 11 ಪೈಪ್ ಗೂ ಏನಾದರೂ ಸಾಮ್ಯತೆ ಇದೆಯೇ ಎಂದು ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. 

ಮನೆ ಗೋಡೆಯಲ್ಲಿ ಕಂಡುಬಂದಿರುವ 11 ಪೈಪ್ ಗಿಳಗೂ 11 ಮಂದಿ ಸಾವಿಗೂ ಹೋಲಿಕೆ ಕಂಡುಬಂದಿದೆ. ಮೃತರಲ್ಲಿ 7 ಮಂದಿ ಮಹಿಳೆಯರಾಗಿದ್ದು 7 ಪೈಪ್ ಗಳು ಬಾಗಿವೆ. ಇನ್ನು ನಾಲ್ಕು ಪೈಪ್ ಗಳು ನೇರವಾಗಿದ್ದು, ಮೃತರಲ್ಲಿ ನಾಲ್ವರು ಪುರುಷರಾಗಿದ್ದಾರೆ. 

ಆತ್ಮಗಳು ಮುಕ್ತವಾಗಿ ಹೊರಹೋಗಲು ಈ ಪೈಪ್ ಗಳನ್ನು ಅಳವಡಿಸಿರಬಹುದು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಈ ಪೈಪ್ ಗಳು ಹಾಗೂ ಸಾಮೂಹಿಕ ಸಾವಿನ ನಡುವಿರುವ ಸಂಬಂಧವೇನು ಎಂಬುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಇನ್ನು ಮನೆಯಲ್ಲಿ ದೊರೆತ ಡೈರಿಯಲ್ಲಿ ಲಲಿತ್ ಭಾಟೀಯಾ ಸಾಯುವ ಬಗೆಯನ್ನು ಮನೆಯವರಿಗೆ ವಿವರಿಸಿದ ಕುರಿತು ಮಾಹಿತಿ ಇದೆ. ಸಾಯುವ ಮೊದಲೇ ಸತ್ತು ಸ್ವರ್ಗದಲ್ಲಿರುವ ತಮ್ಮ ತಂದೆ ಬಂದು ನಮ್ಮೆಲ್ಲರನ್ನೂ ಕಾಪಾಡುತ್ತಾರೆ ಎಂಬಂತಹ ವಿಷಯಗಳು ಈ ಡೈರಿಯಲ್ಲಿವೆ ಎನ್ನಲಾಗಿದೆ. ಲಲಿತ್ ಭಾಟೀಯಾ 2015ರಿಂದಲೇ ಈ ಡೈರಿ ಬರೆಯುತ್ತಿದ್ದು, ಲಲಿತ್ ಯೋಜನೆಗೆ ತಾಯಿ ನಾರಾಯಣ್ ದೇವಿ ಬೆಂಬಲ ಕೂಡ ಇರಬಹುದೆಂದು  ಪೊಲೀಸರು ಶಂಕಿಸಿದ್ದಾರೆ.

loader