Asianet Suvarna News Asianet Suvarna News

ಮಳೆಗೆ ಉತ್ತರ ಭಾರತ ತತ್ತರ; 11 ಮಂದಿ ಬಲಿ

ಜಮ್ಮು-ಕಾಶ್ಮೀರ, ಹರ್ಯಾಣ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ವರುಣನ ಅಬ್ಬರಕ್ಕೆ ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳ ಹಲವು ಭಾಗಗಳಲ್ಲಿ ಪ್ರವಾಹ ಮತ್ತು ಭೂಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

11 killed as rains pound north India
Author
New Delhi, First Published Sep 25, 2018, 7:40 AM IST
  • Facebook
  • Twitter
  • Whatsapp

ನವದೆಹಲಿ[ಸೆ.25]: ಜಮ್ಮು-ಕಾಶ್ಮೀರ, ಉತ್ತರಾಖಂಡ್‌, ಹರ್ಯಾಣ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದ ರಾಜ್ಯಗಳು ಧಾರಾಕಾರ ಮಳೆಯಿಂದ ಅಕ್ಷರಶಃ ತತ್ತರಿಸಿವೆ.

ಜಮ್ಮು-ಕಾಶ್ಮೀರ, ಹರ್ಯಾಣ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ. ವರುಣನ ಅಬ್ಬರಕ್ಕೆ ಜಮ್ಮು-ಕಾಶ್ಮೀರ ಮತ್ತು ಹಿಮಾಚಲ ಪ್ರದೇಶಗಳ ಹಲವು ಭಾಗಗಳಲ್ಲಿ ಪ್ರವಾಹ ಮತ್ತು ಭೂಕುಸಿತವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 

ಮಳೆಯಿಂದಾಗಿ ಗುಡ್ಡ ಕುಸಿದ ಕಾರಣ ಬೃಹತ್‌ ಬಂಡೆಗಳು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಬದ್ರಿನಾಥ, ಕೇದರನಾಥ ಮತ್ತು ಯಮುನೋತ್ರಿ ಯಾತ್ರೆಗೆ ತೊಡಕಾಗಿದೆ. ಹರ್ಯಾಣ ಮತ್ತು ಪಂಜಾಬ್‌ನಲ್ಲಿ ಸೋಮವಾರವೂ ಗುಡುಗು-ಸಿಡಿಲು ಸಹಿತವಾದ ಮಳೆ ಮುಂದುವರಿದಿದ್ದು, ಈ ಎರಡೂ ರಾಜ್ಯಗಳಲ್ಲಿ ಖಾರೀಫ್‌ ಬೆಳೆಗಳು ನಾಶವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇನ್ನು ಕಳೆದ 48 ಗಂಟೆಯಲ್ಲಿ ಹಿಮಾಚಲ ಪ್ರದೇಶದ ಪ್ರವಾಹದಲ್ಲಿ ಸಿಲುಕಿದ್ದ 21 ಮಂದಿಯನ್ನು ಭಾರತೀಯ ವಾಯು ಪಡೆ ತಂಡ ರಕ್ಷಣೆ ಮಾಡಿದೆ.

Follow Us:
Download App:
  • android
  • ios