ನವದೆಹಲಿ[ಅ.01]+: ಅಕ್ಟೋಬರ್‌ನಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬಗಳು ಇರುವುದರಿಂದ ಬಂಪರ್‌ ರಜೆಗಳು ಸಿಗಲಿದೆ. ಅದೇ ರೀತಿ ಅಕ್ಟೋಬರ್‌ನಲ್ಲಿ ಬ್ಯಾಂಕುಗಳಿಗೂ 11 ದಿನಗಳ ಕಾಲ ರಜೆ ಇರಲಿದೆ.

ಅ.6ರಿಂದ ಅ.8ರವರೆಗೆ ಮೂರು ದಿನ ಹಾಗೂ ಅ.26ರಿಂದ ಅ.29ರ ವರೆಗೆ ಸತತ 4 ದಿನ ಬ್ಯಾಂಕುಗಳು ಬಾಗಿಲು ಮುಚ್ಚಲಿವೆ. ಹೀಗಾಗಿ ಎಟಿಎಂ ವಹಿವಾಟು ವ್ಯತ್ಯಯವಾಗುವ ಸಾಧ್ಯತೆ ಇದೆ. ಒಂದು ವೇಳೆ ಬ್ಯಾಂಕುಗಳಲ್ಲಿ ಅಗತ್ಯ ಕಾರ್ಯಗಳಿದ್ದರೆ ಅದನ್ನು ಮುಂಚಿತವಾಗಿಯೇ ಮುಗಿಸಿಕೊಳ್ಳುವುದು ಒಳಿತು.

ರಜೆಗಳು ಯಾವಾಗ?

ಅ.2ರಂದು ಗಾಂಧಿ ಜಯಂತಿ, ಅ.6 ಭಾನುವಾರ, ಅ.7 ನವರಾತ್ರಿ, ಅ.8 ದಸರಾ. ಅ.12 ಎರಡನೇ ಶನಿವಾರ, ಅ.13 ಭಾನುವಾರ, ಅ.20 ಭಾನುವಾರ, ಅ.26 ನಲ್ಕನೇ ಶನಿವಾರ, ಅ.27 ದೀಪಾವಳಿ, ಅ.28 ನರಕ ಚತುರ್ದಶಿ, ಅ.29 ಬಲಿ ಪಾಡ್ಯದ ನಿಮಿತ್ತ ಬ್ಯಾಂಕುಗಳಿಗೆ ರಜೆ ಇರಲಿದೆ.