ಪ್ರಾಯೋಗಿಕ ಪಾತ್ರ ಮಾಡೋಕೆ ಹೆಚ್ಚು ಇಷ್ಟಪಡೋ ಅಮಿತಾಭ್ ಬಚ್ಚನ್ ಸದ್ಯ ಪುಲ್ ಬ್ಯುಜಿ.

ಮುಂಬೈ(ಡಿ.11): ಅಮಿತಾಭ್ ಬಚ್ಚನ್ ಗೆ ಈಗ 74 ವರ್ಷ. ಆದರೆ, 102 ವರ್ಷ ಇರೋ ಪಾತ್ರ ಮಾಡುತ್ತಿದ್ದಾರೆ. ಚಿತ್ರಕ್ಕೆ 102 ನಾಟ್ ಔಟ್ ಅಂತಲೇ ಶೀರ್ಷಿಕೆ ಇದೆ. ಪ್ರಾಯೋಗಿಕ ಪಾತ್ರ ಮಾಡೋಕೆ ಹೆಚ್ಚು ಇಷ್ಟಪಡೋ ಅಮಿತಾಭ್ ಬಚ್ಚನ್ ಸದ್ಯ ಪುಲ್ ಬ್ಯುಜಿ. ಸರ್ಕಾರ್-3 ಚಿತ್ರದ ಶೂಟಿಂಗ್ ನಲ್ಲಿರೋ ಅಮಿತಾಭ್, ನಿರ್ದೇಶಕ ಉಮೇಶ್ ಶುಕ್ಲಾ ಅವರ 102 ನಾಟ್ ಔಟ್ ಚಿತ್ರ ಒಪ್ಪಿಕೊಂಡಿದ್ದಾರೆ. ಪರೇಶ್ ರಾವಲ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. 2017 ಫೆಬ್ರವರಿ ತಿಂಗಳಲ್ಲಿ ಚಿತ್ರ ಶುರು ಆಗುತ್ತಿದೆ.