ಪಿಯುಸಿಯಲ್ಲಿ ಕಾಪಿ ಹೊಡೆದ 1000 ವಿದ್ಯಾರ್ಥಿಗಳು ಡಿಬಾರ್‌

1000 Students Dibar In Bihar
Highlights

ನಕಲು ದಂಧೆಯಲ್ಲಿ ಕುಖ್ಯಾತಿ ಪಡೆದಿರುವ ಬಿಹಾರದಲ್ಲಿ ಪಿಯುಸಿ ಪರೀಕ್ಷೆ ವೇಳೆ ಕಾಪಿ ಹೊಡೆಯುತ್ತಿದ್ದ ಸುಮಾರು 1000 ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಲಾಗಿದೆ.

ಪಟನಾ: ನಕಲು ದಂಧೆಯಲ್ಲಿ ಕುಖ್ಯಾತಿ ಪಡೆದಿರುವ ಬಿಹಾರದಲ್ಲಿ ಪಿಯುಸಿ ಪರೀಕ್ಷೆ ವೇಳೆ ಕಾಪಿ ಹೊಡೆಯುತ್ತಿದ್ದ ಸುಮಾರು 1000 ವಿದ್ಯಾರ್ಥಿಗಳನ್ನು ಡಿಬಾರ್‌ ಮಾಡಲಾಗಿದೆ.

ಬಿಹಾರ ಪರೀಕ್ಷಾ ಮಂಡಳಿ ಅಧ್ಯಕ್ಷ ಆನಂದ್‌ ಕಿಶೋರ್‌ ಮಾತನಾಡಿ, ಶುಕ್ರವಾರ ನಡೆಯುತ್ತಿದ್ದ ಸೆಕಂಡ್‌ ಪಿಯುಸಿ ಪರೀಕ್ಷೆಯಲ್ಲಿ ನಕಲು ಮಾಡಿರುವುದು ಪತ್ತೆಯಾಗಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಸಹಕರಿಸುತ್ತಿದ್ದ 25 ನಕಲಿ ಪರೀಕ್ಷಕರು ಮತ್ತು ಪೋಷಕರ ಮೇಲೂ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಈ ಬಾರಿ ರಾಜ್ಯಾದ್ಯಂತ 1,384 ಕೇಂದ್ರಗಳಲ್ಲಿ 1,12,07,986 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಶುಕ್ರವಾರದಿಂದ ಪರೀಕ್ಷೆ ಆರಂಭವಾಗಿದೆ.

loader