100 ವರ್ಷಗಳನ್ನು ಪೂರೈಸಿರುವ ಪ್ರಪ್ರಥಮ ನೋಟು ಎಂಬ ಹೆಗ್ಗಳಿಕೆಯನ್ನೂ ಹೊಂದಿರುವ 1 ರು. ನೋಟು ಕಿಂಗ್ ಜಾರ್ಜ್ 5 ಅವರ ಫೋಟೊದೊಂದಿಗೆ ಮುದ್ರಿತವಾಗಿತ್ತು.

ಮುಂಬೈ(ಡಿ.1):  ಇತ್ತೀಚಿನ ದಿನಗಳಲ್ಲಿ 1 ರು. ಮುಖ ಬೆಲೆಯ ನೋಟುಗಳು ಚಲಾವಣೆಯಲ್ಲಿ ಸಿಗುವುದು ಬಲು ಅಪರೂಪ. ಆದರೆ ಒಂದು ಕಾಲದಲ್ಲಿ ಭಾರೀ ಚಲಾವಣೆಯಲ್ಲಿದ್ದ 1 ರು. ಮುಖ ಬೆಲೆಯ ನೋಟಿಗೆ ಇದೀಗ ಶತಮಾನದ ಸಂಭ್ರಮ.

ಹೌದು, ಮೊದಲನೇ ವಿಶ್ವಯುದ್ಧದ ಸಂದರ್ಭ ಆಗಿನ ವಸಾಹತುಶಾಹಿ ಆಡಳಿತಕ್ಕೆ ಬೆಳ್ಳಿ ನಾಣ್ಯವನ್ನು ಮುದ್ರಿಸಲು ಸಾಧ್ಯವಾಗದೆ, 1917 ನ. 30ರಂದು 1 ರು. ನೋಟು ಮುದ್ರಣ ಅನಿವಾರ್ಯವಾಗಿತ್ತು. 100 ವರ್ಷಗಳನ್ನು ಪೂರೈಸಿರುವ ಪ್ರಪ್ರಥಮ ನೋಟು ಎಂಬ ಹೆಗ್ಗಳಿಕೆಯನ್ನೂ ಹೊಂದಿರುವ 1 ರು. ನೋಟು ಕಿಂಗ್ ಜಾರ್ಜ್ 5 ಅವರ ಫೋಟೊದೊಂದಿಗೆ ಮುದ್ರಿತವಾಗಿತ್ತು.