ಪೆಟ್ರೋಲ್ ಬಂಕಲ್ಲಿ ಚಿಲ್ಲರೆ ಸಮಸ್ಯೆ ತಪ್ಪಿಸಲು 1 ಪೈಸೆ ನಾಣ್ಯ ಬಿಡುಗಡೆ!

1 paisa  coin released
Highlights

ಪೆಟ್ರೋಲ್ ದರ ಒಂದು ಪೈಸೆ ಇಳಿಕೆಯಾಗಿದ್ದರಿಂದ ಜನರಿಗೆ ಒಂದು ಪೈಸೆಯ ಮಹತ್ವ ಮನವರಿಕೆಯಾಗಿದೆ. ಹೀಗಾಗಿ ಒಂದು ಪೈಸೆ ಚಿಲ್ಲರೆಯನ್ನೂ ಕೊಡುವಂತೆ ಗ್ರಾಹಕರು ಕೇಳುತ್ತಿದ್ದಾರೆ. ಇದು ಪೆಟ್ರೋಲ್ ಬಂಕ್ ಮಾಲೀಕರನ್ನು ಚಿಂತೆಗೀಡುಮಾಡಿದೆ.

ಬೆಂಗಳೂರು (ಮೇ. 31): ಪೆಟ್ರೋಲ್ ದರ ಒಂದು ಪೈಸೆ ಇಳಿಕೆಯಾಗಿದ್ದರಿಂದ ಜನರಿಗೆ ಒಂದು ಪೈಸೆಯ ಮಹತ್ವ ಮನವರಿಕೆಯಾಗಿದೆ. ಹೀಗಾಗಿ ಒಂದು ಪೈಸೆ ಚಿಲ್ಲರೆಯನ್ನೂ ಕೊಡುವಂತೆ ಗ್ರಾಹಕರು ಕೇಳುತ್ತಿದ್ದಾರೆ. ಇದು ಪೆಟ್ರೋಲ್ ಬಂಕ್ ಮಾಲೀಕರನ್ನು ಚಿಂತೆಗೀಡುಮಾಡಿದೆ.

ಪೆಟ್ರೋಲ್ ದರವನ್ನು ಒಂದು ಪೈಸೆ ಏರಿಸಿದಾಗ ಮತ್ತು ಇಳಿಸಿದಾಗ  ಚಿಲ್ಲರೆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಿಂದ ಸರ್ಕಾರ ಒಂದು ಪೈಸೆ ನಾಣ್ಯವನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.  ಇನ್ನು ಒಂದೆರಡು ದಿನದಲ್ಲೇ ಒಂದು ಪೈಸೆ ನಾಣ್ಯಗಳು ಪ್ರತಿ ಪೆಟ್ರೋಲ್ ಬಂಕ್'ಗಳನ್ನು ತಲುಪಲಿವೆ. ಅಲ್ಲದೇ 2, 5 ಹಾಗೂ 10 ಪೈಸೆ ನಾಣ್ಯಗಳನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದ್ದು,  ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ. 

loader