ಕೋಲ್ಕತ್ತಾ(ಜು.25): ಮಾನಸಿಕ ಅಸ್ವಸ್ಥ ಮಹಿಳೆಯ ಹೊಟ್ಟೆಯಿಂದ ವೈದ್ಯರು ಬರೋಬ್ಬರಿ 1.5 ಕೆಜಿ ಚಿನ್ನವನ್ನು ಹೊರತೆಗದ ಘಟನೆ ಪ.ಬಂಗಾಳದ ಬಿರ್’ಬುಮ್ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ 26 ವರ್ಷದ ಮಾನಸಿಕ ಅಸ್ವಸ್ಥೆಯ ಹೊಟ್ಟೆಯ ಸ್ಕ್ಯಾನ್ ಮಾಡಿದಾಗ ಆಕೆಯ ಹೊಟ್ಟೆಯಲ್ಲಿ ಹಲವು ವಸ್ತುಗಳು ಇರುವುದು ಗೊತ್ತಾಯಿತು. ಆಕೆಯ ಆಪರೇಶನ್ ಮಾಡಿದಾಗ 5 ಹಾಗೂ 10 ರೂ. ನಾಣ್ಯಗಳು, 1.5 ಕೆಜಿ ತೂಕದ ಚಿನ್ನ, ಕೈಗಡಿಯಾರ ಸೇರಿದಂತೆ ಹಲವು ವಸ್ತುಗಳು ದೊರೆತವು ಎಂದು ವೈದ್ಯ ಸಿದ್ಧಾರ್ಥ ಬಿಸ್ವಾಸ್ ತಿಳಿಸಿದ್ದಾರೆ.

ಮನೆಯಲ್ಲಿರುವ ಚಿನ್ನದ ವಸ್ತುಗಳು ಮಾಯವಾಗುತ್ತಿರುವುದನ್ನು ಗಮನಿಸಿದ್ದ ಮಾನಸಿಕ ಅಸ್ವಸ್ಥೆಯ ತಾಯಿ, ತಮ್ಮ ಮಗಳನ್ನು ವೈದ್ಯರ ಬಳಿ ಕರೆತಂದಾಗ ಆಕೆಯ ಹೊಟ್ಟೆಯಲ್ಲಿ ಈ ವಸ್ತುಗಳಿರುವುದು ಪತ್ತೆಯಾಯಿತು ಎನ್ನಲಾಗಿದೆ.