ಪ್ರಧಾನಿ ಮೋದಿ ಮನೆ ಮೇಲೆ ಯುಎಫ್‌ಒ : ಭಾರೀ ಆತಂಕ

news | Friday, June 15th, 2018
Suvarna Web Desk
Highlights

 ಪ್ರಧಾನಿ ಮೋದಿ ಅವರನ್ನು, ಹತ್ಯೆಗೈಯಲು ನಕ್ಸಲರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವರದಿಗಳ ಬೆನ್ನಲ್ಲೇ, ದೆಹಲಿಯಲ್ಲಿನ ಮೋದಿ ಮನೆ ಮೇಲೆ ಇತ್ತೀಚಿಗೆ ಯುಎಫ್‌ಒ (ಅನ್‌ ಐಡೆಂಡಿಫೈಡ್‌ ಫ್ಲೈಯಿಂಗ್‌ ಆಬ್ಜೆಕ್ಟ್ - ಗುರುತಿಸಲಾಗದ ಹಾರಾಡುತ್ತಿದ್ದ ವಸ್ತು) ಪತ್ತೆಯಾಗಿ ಭಾರೀ ಆತಂಕ ಸೃಷ್ಟಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ನವದೆಹಲಿ: ಪ್ರಧಾನಿ ಮೋದಿ ಅವರನ್ನು, ಹತ್ಯೆಗೈಯಲು ನಕ್ಸಲರು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವರದಿಗಳ ಬೆನ್ನಲ್ಲೇ, ದೆಹಲಿಯಲ್ಲಿನ ಮೋದಿ ಮನೆ ಮೇಲೆ ಇತ್ತೀಚಿಗೆ ಯುಎಫ್‌ಒ (ಅನ್‌ ಐಡೆಂಡಿಫೈಡ್‌ ಫ್ಲೈಯಿಂಗ್‌ ಆಬ್ಜೆಕ್ಟ್ - ಗುರುತಿಸಲಾಗದ ಹಾರಾಡುತ್ತಿದ್ದ ವಸ್ತು) ಪತ್ತೆಯಾಗಿ ಭಾರೀ ಆತಂಕ ಸೃಷ್ಟಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುಎಫ್‌ಒ ಪತ್ತೆಯಾದ ಬೆನ್ನಲ್ಲೇ ಇಡೀ ಪ್ರದೇಶದಲ್ಲಿ ಹೈಅಲರ್ಟ್‌ ಘೋಷಿಸಿ, ತಪಾಸಣೆ ನಡೆಸಲಾಗಿದ್ದು, ಈ ವೇಳೆ ಯಾವುದೇ ಅಪಾಯಕಾರಿ ವಸ್ತುಗಳು ಕಂಡುಬಂದಿಲ್ಲ ಎಂದು ದೆಹಲಿ ಪೊಲೀಸ್‌ ಮೂಲಗಳು ತಿಳಿಸಿವೆ.

ಯುಎಫ್‌ಒ ಪತ್ತೆಯಾಗಿದ್ದನ್ನು ದೆಹಲಿ ಪೊಲೀಸರು ಖಚಿತಪಡಿಸಿದ್ದರೂ, ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಏನಾಗಿತ್ತು?: ಪ್ರಧಾನಿ ಮನೆ ಸುತ್ತಮುತ್ತಲಿನ 2 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಹಾರಾಟ ನಿಷಿದ್ಧ ವಲಯ ಎಂದು ಘೋಷಿಸಲಾಗಿದೆ. ಆಧರೆ ಜೂನ್‌ 7ರಂದು ಸಂಜೆ 7.30ರ ವೇಳೆ ಮೋದಿ ಮನೆ ಮೇಲೆ ಯುಎಫ್‌ಒ ಹಾರಾಟ ಕಂಡುಬಂದಿತ್ತು. ಕೂಡಲೇ ಪ್ರಧಾನಿ ಭದ್ರತೆಯ ಉಸ್ತುವಾರಿ ಹೊತ್ತಿರುವ ಎಸ್‌ಪಿಜಿ ಸಿಬ್ಬಂದಿ ದೆಹಲಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅವರು ಸ್ಥಳಕ್ಕೆ ಧಾವಿಸುವುದರ ಒಳಗೆ ಯುಎಫ್‌ಒ ನಾಪತ್ತೆಯಾಗಿತ್ತು.

ಆದರೂ ತಕ್ಷಾಣವೇ ಇಡೀ ಪ್ರದೇಶದಲ್ಲಿ ಹೈಅಲರ್ಟ್‌ ಘೋಷಿಸಿ, ಎನ್‌ಎಸ್‌ಜಿ, ಸಿಐಎಸ್‌ಎಫ್‌, ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮಕ್ಕೆ ಮಾಹಿತಿ ರವಾನಿಸಲಾಯ್ತು. ಮೋದಿ ನಿವಾಸದ ಸುತ್ತಮುತ್ತಲ ಪ್ರದೇಶಕ್ಕೆ ಹೆಚ್ಚಿನ ಪೊಲೀಸ್‌ ಪಡೆಯನ್ನು ರವಾನಿಸಲಾಯ್ತು. ನಂತರ ಇಡೀ ಪ್ರದೇಶವನ್ನು ತಪಾಸಣೆ ಮಾಡಿದ್ದು, ಈ ವೇಳೆ ಯಾವುದೇ ಅಪಾಯಕಾರಿ ವಸ್ತು ಕಂಡುಬರಲಿಲ್ಲ. ಬಳಿಕ ಅಧಿಕಾರಿಗಳು ನಿರುಮ್ಮಳರಾದರು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ 2017ರಲ್ಲೂ ಸಂಸತ್‌ ಆವರಣದ ಬಳಿ ಇಂಥದ್ದೇ ಯುಎಫ್‌ಒ ಪತ್ತೆಯಾಗಿತ್ತು.

Comments 0
Add Comment

  Related Posts

  Modi is taking revenge against opposition parties

  video | Thursday, April 12th, 2018

  What is the reason behind Modi protest

  video | Thursday, April 12th, 2018

  Modi is taking revenge against opposition parties

  video | Thursday, April 12th, 2018
  Sujatha NR