ಗರ್ಭಿಣಿ ರಕ್ಷಿಸಿದ್ದ ಕಮಾಂಡರ್ ಗೆ ಕುಟುಂಬಸ್ಥರ ಧನ್ಯವಾದ! ಮಹಡಿ ಮೇಲೆ ಥ್ಯಾಂಕ್ಸ್ ಎಂದು ಪೇಂಟ್ ಮಾಡಿದ ಕುಟುಂಬಸ್ಥರು! ಅರ್ಧ ಗಂಟೆಯಲ್ಲಿ ಗರ್ಭಿಣಿ ಸಜಿತಾ ರಕ್ಷಿಸಿದ್ದ ಕಮಾಂಡರ್! ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಸಜಿತಾ 

ಅಲುವಾ(ಆ.20): ಕೇವಲ ಅರ್ಧ ಗಂಟೆಯಲ್ಲಿ ಗರ್ಭಿಣಿಯನ್ನು ಪ್ರವಾಹದಿಂದ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಕಮಾಂಡರ್​ಗೆ ಆ ಕುಟುಂಬದ ಸದಸ್ಯರು ಧನ್ಯವಾದ ಸಲ್ಲಿಸಿದ್ದಾರೆ.

ಮಹಾಮಳೆಗೆ ಕೇರಳ ರಾಜ್ಯವೇ ತತ್ತರಿಸಿ ಹೋಗಿದೆ. ಪ್ರವಾಹದಿಂದಾಗಿ ಎರ್ನಾಕುಲಂ ಜಿಲ್ಲೆಯ ಅಳುವ ಗ್ರಾಮ ನೀರಿನಲ್ಲಿ ಮುಳುಗಿದೆ. ಇದೇ ವೇಳೆ ಗರ್ಭಿಣಿ ಸಜಿತಾ ಮತ್ತು ಆಕೆಯ ಕುಟುಂಬ ಕೂಡ ಪ್ರವಾಹಕ್ಕೆ ಸಿಲುಕಿತ್ತು. ಆಗಸ್ಟ್​ 17ರಂದು ಸಜಿತಾಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಸುದ್ದಿ ರಕ್ಷಣಾ ತಂಡವನ್ನ ಮುಟ್ಟಿತ್ತು.

Scroll to load tweet…

ಕೂಡಲೇ ಗರ್ಭಿಣಿ ಸಜಿತಾ ರಕ್ಷಣೆಗೆ ವೈದ್ಯರೊಬ್ಬರ ಜೊತೆ ಚಾಪರ್​​​ ಪೈಲಟ್​ ಕಮಾಂಡರ್​ ವಿಜಯ ಮತ್ತು ಅವರ ತಂಡ ದೌಡಾಯಿಸಿತ್ತು. ಸಜಿತಾಳನ್ನು ತಮ್ಮೊಂದಿಗೆ ಕರೆದ್ಯೊಯ್ದ ರಕ್ಷಣಾ ತಂಡ, ಕೊಚ್ಚಿಯ ಐಎನ್​ಎಚ್​ಎಸ್​ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿತ್ತು. ಸಜಿತಾ ಆಸ್ಪತ್ರೆಗೆ ದಾಖಲಿಸಿದ ಕೇವಲ ಅರ್ಧ ಗಂಟೆಯಲ್ಲಿ ಸಜಿತಾ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು.

Scroll to load tweet…

ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸಜಿತಾ, ತಮ್ಮ ಹಾಗು ಮಗುವಿನ ಪ್ರಾಣ ಉಳಿಸಿದ ನೌಕಾ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಸಜಿತಾ ಕುಟುಂಬಸ್ಥರು ಮನೆಯ ಮಹಡಿ ಮೇಲೆ ಥ್ಯಾಂಕ್ಸ್​ ಎಂದು ಬಣ್ಣ ಬಳಿಯುವ ಮೂಲಕ ಕಮಾಂಡರ್​ ವಿಜಯ್​ ಮತ್ತು ಅವರ ರಕ್ಷಣಾ ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.