Asianet Suvarna News Asianet Suvarna News

ಸುಷ್ಮಾ ಸ್ವರಾಜ್ ಅವರೇ ನೀವು ಕಾನೂನಿಗಿಂತ ದೊಡ್ಡವರಲ್ಲ: ಆರ್’ಎಸ್’ಎಸ್ ಮುಖಂಡ

ಹಿಂದೂ-ಮುಸ್ಲಿಂ ದಂಪತಿ ಎನ್ನುವ ಕಾರಣಕ್ಕೆ ಪಾಸ್’ಪೋರ್ಟ್ ನೀಡಲು ನಿರಾಕರಿಸಿದ್ದಾರೆ ಎನ್ನುವ ಆರೋಪವನ್ನು  ಆರ್ ಎಸ್ ಎಸ್ ಮುಖಂಡ ರಾಜೀವ್ ತುಲಿ ಅಲ್ಲಗಳೆದಿದ್ದಾರೆ. 

ಅಂತರ್ ಧರ್ಮೀಯರು ಎನ್ನುವ ಕಾರಣಕ್ಕೆ ಅವಮಾನಿಸಿದ್ದಾರೆ  ಎನ್ನುವ ಹೇಳಿಕೆಯನ್ನು ಖಂಡಿಸುತ್ತಾ, ಸುಷ್ಮಾ ಸ್ವರಾಜ್ ಅವರೇ ನೀವು ಕಾನೂನಿಗಿಂತ ದೊಡ್ಡವರಲ್ಲ.  ಅಧಿಕಾರಿ ವಿಕಾಸ್ ಮಿಶ್ರಾರವರ ಮಾತನ್ನು ಕೇಳಿ ಎಂದು  ಆರ್ ಎಸ್ ಎಸ್ ಮುಖಂಡ ರಾಜೀವ್ ತುಲಿ ಟ್ವಿಟರ್’ನಲ್ಲಿ ಬರೆದುಕೊಂಡಿದ್ದಾರೆ. 
 

'Sushma Swaraj Not Above the Law': RSS Leader Seeks 'Justice' for Passport Officer Accused of Harassing Couple

ನವದೆಹಲಿ (ಜೂ. 22): ಹಿಂದೂ-ಮುಸ್ಲಿಂ ದಂಪತಿ ಎನ್ನುವ ಕಾರಣಕ್ಕೆ ಪಾಸ್’ಪೋರ್ಟ್ ನೀಡಲು ನಿರಾಕರಿಸಿದ್ದಾರೆ ಎನ್ನುವ ಆರೋಪವನ್ನು  ಆರ್ ಎಸ್ ಎಸ್ ಮುಖಂಡ ರಾಜೀವ್ ತುಲಿ ಅಲ್ಲಗಳೆದಿದ್ದಾರೆ. 

ಅಂತರ್ ಧರ್ಮೀಯರು ಎನ್ನುವ ಕಾರಣಕ್ಕೆ ಅವಮಾನಿಸಿದ್ದಾರೆ  ಎನ್ನುವ ಹೇಳಿಕೆಯನ್ನು ಖಂಡಿಸುತ್ತಾ, ಸುಷ್ಮಾ ಸ್ವರಾಜ್ ಅವರೇ ನೀವು ಕಾನೂನಿಗಿಂತ ದೊಡ್ಡವರಲ್ಲ.  ಅಧಿಕಾರಿ ವಿಕಾಸ್ ಮಿಶ್ರಾರವರ ಮಾತನ್ನು ಕೇಳಿ ಎಂದು  ಆರ್ ಎಸ್ ಎಸ್ ಮುಖಂಡ ರಾಜೀವ್ ತುಲಿ ಟ್ವಿಟರ್’ನಲ್ಲಿ ಬರೆದುಕೊಂಡಿದ್ದಾರೆ. 

 

 

ಏನಿದು ಪ್ರಕರಣ? 
ಮಹಮ್ಮದ್ ಅನಸ್ ಸಿದ್ದಿಕಿ ಎನ್ನುವವರು 2007 ರಲ್ಲಿ ತನ್ವಿ ಸೇಠ್ ಎನ್ನುವವರನ್ನು ವಿವಾಹವಾಗಿದ್ದಾರೆ. ಇದೇ ಜೂ. 19 ರಂದು ಇವರು ಪಾಸ್’ಪೋರ್ಟ್’ಗೆ ಅಪ್ಲೆ ಮಾಡಿದ್ದು ಜೂ. 20 ಕ್ಕೆ ಇಂಟರ್’ವ್ಯೂ ಇತ್ತು. ಎರಡು ಹಂತದ ಸಂದರ್ಶನ ಮುಗಿಸಿದ ಬಳಿಕ ಅಧಿಕಾರಿಗಳ ಜೊತೆ ಮೂರನೇ ಹಂತದ ಸಂದರ್ಶನವಿತ್ತು. 

ನನ್ನ ಪತ್ನಿ ಸಂದರ್ಶನದ ವೇಳೆ ಪತಿ ಅಂತರ್ ಧರ್ಮೀಯ ಎಂದು ನೋಡಿದ ಅಧಿಕಾರಿ ಹೆಸರನ್ನು ಬದಲಾಯಿಸಿಕೊಂಡು ಬರಲು ಸೂಚಿಸಿದ್ದಾರೆ. ಇದಕ್ಕೆ ನನ್ನ ಪತ್ನಿ ಒಪ್ಪಲಿಲ್ಲ. ಆಕೆಯ ದಾಖಲೆಗಳನ್ನು ಎಪಿಒ ಕಚೇರಿಗೆ ಕಳುಹಿಸಿದರು. ನಂತರ ನನ್ನನ್ನು ಕರೆದು ಅವಮಾನಿಸಿದರು. ಹಿಂದೂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದರು. ಇಲ್ಲದಿದ್ದರೆ ನಿಮ್ಮಿಬ್ಬರ ಮದುವೆಯನ್ನು ಒಪ್ಪಲಾಗುವುದಿಲ್ಲ ಎಂದರು ಎಂದು ಸಿದ್ದಿಕಿ ಹೇಳಿಕೊಂಡಿದ್ದಾರೆ. 

ವಿದೇಶಾಂಗ ಇಲಾಖೆ ಅಧಿಕಾರಿಗೆ ಶೋಕಾಸ್ ನೊಟೀಸ್ ನೀಡಿದೆ. 

 

Follow Us:
Download App:
  • android
  • ios