ಲೋಕಸಭಾ ಚುನಾವಣೆ : ಮಂಡ್ಯದಿಂದ ಅಂಬರೀಷ್ ಸ್ಪರ್ಧೆ..?

'Rebel Star' Ambarish not to contest Loksabha Poll
Highlights

ಮುಂಬರುವ ಲೋಕಸಭಾ ಉಪ ಚುನಾವಣೆ ಅಥವಾ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೂ  ತಾವು ಸ್ಪರ್ಧಿಸಲ್ಲ ಎಂದು ಮಾಜಿ ಸಚಿವ ಅಂಬರೀಷ್ ಸ್ಪಷ್ಟಪಡಿಸಿದರು. 

ಮಂಡ್ಯ/ಶ್ರೀರಂಗಪಟ್ಟಣ: ಮುಂಬರುವ ಲೋಕಸಭಾ ಉಪ ಚುನಾವಣೆ ಅಥವಾ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೂ ಸ್ಪರ್ಧಿಸಲ್ಲ ಎಂದು ಮಾಜಿ ಸಚಿವ ಅಂಬರೀಷ್ ಸ್ಪಷ್ಟಪಡಿಸಿದರು. 

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುತ್ತಿರಲಿಲ್ಲ.

ಈ ಚುನಾವಣೆ ಫಲಿತಾಂಶ ಗಮನಿಸಿದರೆ ನಾನು ಈಗಲೂ ಕಾಂಗ್ರೆಸ್‌ಗೆ ಅನಿವಾರ್ಯ ಎಂಬುದನ್ನು ತೋರಿಸುತ್ತದೆ ಎಂದರು.

loader