ಬಿಜೆಪಿ ಮುಕ್ತ ಭಾರತಕ್ಕೆ ಚಿದಂಬರಂ ಕರೆಕಾಂಗ್ರೆಸ್ ಪ್ರಶ್ನಾತೀತ ರಾಜಕೀಯ ಪಕ್ಷದೇಶವನ್ನು ಬಿಜೆಪಿ ಮುಕ್ತಗೊಳಿಸಲು ಸಲಹೆಪಕ್ಷದ ಕಾರ್ಯಕರ್ತರಿಗೆ ಚಿದಂಬರಂ ಕರೆತಳಮಟ್ಟದಿಂದ ಪಕ್ಷ ಕಟ್ಟಲು ಸಲಹೆ 

ಬೆಂಗಳೂರು[ಜು.೨೮]: ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಘೋಷಣೆಗೆ ಹೆದರಬೇಡಿ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 

ಒಂದು ವೇಳೆ ಮುಕ್ತ ಭಾರತ ಅಂತ ಇರೋದಾದರೆ ಅದು ಬಿಜೆಪಿ ಮುಕ್ತ ಭಾರತ ಎಂದು ಹೇಳಿರುವ ಚಿದಂಬರಂ, ಭಾರತದಲ್ಲಿ ಕಾಂಗ್ರೆಸ್ ಪ್ರಶ್ನಾತೀತ ರಾಜಕೀಯ ಪಕ್ಷವಾಗಿದೆ ಎಂದು ಗುಡುಗಿದ್ದಾರೆ. 

ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ಹಲವು ಬದಲಾವಣೆಗಳು ಆಗಿದ್ದು, ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಅಗತ್ಯವಿದೆ ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಪಕ್ಷವನ್ನು ತಳಮಟ್ಟವನ್ನು ಬಲಪಡಿಸುವ ಮೂಲಕ ಸ್ಪರ್ಧಿಸಬೇಕಿದೆ ಎಂದು ಕಾರ್ಯಕರ್ತರಿಗೆ ಚಿದಂಬರಂ ಧೈರ್ಯ ತುಂಬಿದರು. 

ಒಂದು ಕಾಲವಿತ್ತು ಅಂದು ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಹಾಗೂ ಇಂದಿರಾಗಾಂಧಿ ಹೆಸರನ್ನು ಹೇಳಿದರೆ ಸಾಕು ಲಕ್ಷಾಂತರ ಮತದಾರರು ಮತಗಟ್ಟೆಗೆ ಬಂದು ಕಾಂಗ್ರೆಸ್ ಪರವಾಗಿ ಮತ ಚಲಾಯಿಸುತ್ತಿದ್ದರು. ಅದೇ ರೀತಿ ಇಂದಿನ ಚುನಾವಣೆ ಬೂತ್ ಮಟ್ಟದ್ದಾಗಿದ್ದು ಅದಕ್ಕಾಗಿಯೇ ಪ್ರತಿ ಬೂತ್ ನಲ್ಲೂ ನಾವು ಇರಬೇಕು. ಪ್ರತಿ ಬೂತ್ ನಲ್ಲೂ ಸಾಕಷ್ಟು ಜನರನ್ನು ಹೊಂದಿರಬೇಕು ಎಂದು ಚಿದಂಬರಂ ಸಲಹೆ ನೀಡಿದರು. 

ಇಂದು ರಾಜಕೀಯದಲ್ಲಿ ಹಲವು ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಪ್ರಾದೇಶಿಕ ಪಕ್ಷಗಳು ಮುಂಚೂಣಿಯಲ್ಲಿರುವುದು ನಿಜವಾದರೂ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮಾತ್ರ ರಾಷ್ಟ್ರೀಯ ಹೆಜ್ಜೆ ಗುರುತನ್ನು ಹೊಂದಿವೆ ಎಂದು ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.