ಮೈಸೂರು (ಮಾ. 01):  ನಮ್ಮ ನೆಲದ ವೀರ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತಿದೆ. ಅವರ ಸಾಹಸ, ಕೆಚ್ಚೆದೆ, ಧೀರತನದ ಬಗ್ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.  

ಇಂದಿನಿಂದ ಮೈಸೂರಿನಲ್ಲಿ ಆರಂಭವಾದ ಛಾಯಾಚಿತ್ರ ಪ್ರದರ್ಶನದಲ್ಲಿ ದರ್ಶನ್ ಮಾತನಾಡುತ್ತಾ, ಅಭಿನಂದನ್ ನಿಜವಾದ ಹೀರೋ, ನಾವು ಅವರ ಮುಂದೆ ಡಮ್ಮಿ ಎಂದು ವಿಂಗ್ ಕಮಾಂಡರ್ ಅಭಿನಂದನ್‌ಗೆ ಸಲ್ಯೂಟ್ ಸಲ್ಲಿಸಿದ್ದಾರೆ. 

ಇನ್ನೊಬ್ಬರ ನೆಲದಲ್ಲಿ ನಿಂತು ಮಾತನಾಡಲೂ ಗಟ್ಸ್ ಬೇಕು. ನಾನು ಅವರ ಮಾತುಗಳನ್ನು ಕೇಳಿದ್ದೇನೆ. ಅವರೇ ನಿಜವಾದ ಹೀರೋ. ಅಭಿನಂದನ್ ಸುರಕ್ಷಿತಾಗಿ ಬರುತ್ತಿರುವುದು ಸಂತೋಷವಾಗುತ್ತಿದೆ ಎಂದಿದ್ದಾರೆ. 

"