Asianet Suvarna News Asianet Suvarna News

ದಸರಾ ಪ್ರವಾಸಿಗರ ಮೊಬೈಲ್, ಹಣ ಸುಲಿಗೆ

ದಸರಾ ಜಂಬೂಸವಾರಿ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರ ಮೊಬೈಲ್ ಮತ್ತು ಹಣ ಸುಲಿಗೆ ಮಾಡಿರುವ ಘಟನೆ ಮೈಸೂರು ಜಗನ್ಮೋಹನ ಅರಮನೆ ಬಳಿ ನಡೆದಿದೆ. ಜಂಬೂಸವಾರಿ ವೀಕ್ಷಣೆ ವೇಳೆ ತಮ್ಮ ಮೊಬೈಲ್, ಪರ್ಸ್ ಸೇರಿದಂತೆ ವಿವಿಧ ವಸ್ತುಗಳು ಕಳ್ಳತನವಾಗಿದೆ ಎಂದು 55 ಹೆಚ್ಚಿನ ಮಂದಿ ದೂರು ನೀಡಿದ್ದಾರೆ.

theft incidents during dasara in mysore
Author
Bangalore, First Published Oct 12, 2019, 10:45 AM IST

ಮೈಸೂರು(ಅ.12): ದಸರಾ ಜಂಬೂಸವಾರಿ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರ ಮೊಬೈಲ್ ಮತ್ತು ಹಣ ಸುಲಿಗೆ ಮಾಡಿರುವ ಘಟನೆ ಮೈಸೂರು ಜಗನ್ಮೋಹನ ಅರಮನೆ ಬಳಿ ನಡೆದಿದೆ.

ಕಿರಣ್, ಶಿವಕುಮಾರ್ ಮತ್ತು ರಾಘವೇಂದ್ರ ಎಂಬವರು ಜಂಬೂಸವಾರಿ ವೀಕ್ಷಣೆಗಾಗಿ ಮಂಗಳವಾರ ಬಂದಿದ್ದು, ಲಾಡ್ಜ್‌ನಲ್ಲಿ ರೂಂ ಸಿಗದ ಕಾರಣ ಜಗನ್ಮೋಹನ ಅರಮನೆ ರಸ್ತೆಯಲ್ಲಿರುವ ಟೀ ಅಂಗಡಿ ಎದುರು ಮಲಗಿದ್ದರು.

ಮೈಸೂರು: ಕಾಲಿಗೆ ಬೀಳಲು ಬಂದ ಶಾಸಕನನ್ನು ತಡೆದ ರಾಷ್ಟ್ರಪತಿ

ಈ ವೇಳೆ ಮೂರು ಜನ ಖದೀಮರು ಇವರ ಮೇಲೆ ಹಲ್ಲೆ ನಡೆಸಿ, ಮೊಬೈಲ್ ಮತ್ತು ಹಣವನ್ನು ಕಿತ್ತು ಪರಾರಿಯಾಗಿದ್ದಾರೆ. ಈ ಸಂಬಂಧ ಕಿರಣ್ ನೀಡಿರುವ ದೂರಿನಂತೆ ದೇವರಾಜ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

55 ಹೆಚ್ಚಿನ ದೂರು ದಾಖಲು:

ಇನ್ನೂ ಜಂಬೂಸವಾರಿ ವೀಕ್ಷಣೆ ವೇಳೆ ತಮ್ಮ ಮೊಬೈಲ್, ಪರ್ಸ್ ಸೇರಿದಂತೆ ವಿವಿಧ ವಸ್ತುಗಳು ಕಳ್ಳತನವಾಗಿದೆ ಎಂದು 55 ಹೆಚ್ಚಿನ ಮಂದಿ ದೇವರಾಜ, ಲಷ್ಕರ್ ಮತ್ತು ಮಂಡಿ ಠಾಣೆಯಲ್ಲಿ ನೇರವಾಗಿ ಹಾಗೂ ಆನ್‌ಲೈನ್ ಮೂಲಕ ದೂರು ನೀಡಿದ್ದಾರೆ. ದೇವರಾಜ ಠಾಣೆಯಲ್ಲಿ 35, ಲಷ್ಕರ್ ಠಾಣೆಯಲ್ಲಿ 15 ಮತ್ತು ಮಂಡಿ ಠಾಣೆಯಲ್ಲಿ 5 ಸೇರಿದಂತೆ 55 ಹೆಚ್ಚಿನ ಪ್ರಕರಣಗಳು ದಾಖಲಾಗಿವೆ  

theft incidents during dasara in mysoreಮೈಸೂರು: ಚಾಮುಂಡಿಗೆ ರಾಷ್ಟ್ರಪತಿ ನಮನ

Follow Us:
Download App:
  • android
  • ios