ಮೈಸೂರು [ಅ.28]:  ಎಟಿಎಂ ಕೇಂದ್ರದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. 

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ತಾಂಡವಪುರದ ಎಬಿಬಿಎ ಕಾರ್ಖಾನೆ ಬಳಿಯ ಎಟಿಎಂ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. 

HDFC ಬ್ಯಾಂಕಿಂಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಏಕಾ ಏಕಾ ಕಾಣಿಸಿಕೊಂಡ ಬೆಂಕಿಯಿಂದ ಮಶಿನ್ ಸಂಪೂರ್ಣ ಭಸ್ಮವಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಎಟಿಎಂನಲ್ಲಿ ಎಷ್ಟು ಹಣವಿತ್ತು. ಎನ್ನುವುದು ಇನ್ನಷ್ಟೇ ತಿಳಿಯವೇಕಿದೆ. ಸದ್ಯ ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.