ಗರ್ಭಿಣಿ, ವೃದ್ಧ, ದಿವ್ಯಾಂಗ.. ಯಾರಿಗೆ ಸೀಟು ಬಿಡಬೇಕು? ಟ್ವಿಟರ್ ಪೋಸ್ಟ್ ವೈರಲ್
ನಮ್ಮ ಜೀವನದಲ್ಲೂ ಪ್ರತಿ ನಿತ್ಯ ಇಂಥ ಅನೇಕ ಗೊಂದಲ ಬರ್ತಿರುತ್ತದೆ. ಆಗ ನಮ್ಮ ಮನಸ್ಸಿಗೆ ತೋಚಿದ ನಿರ್ಧಾರ ತೆಗೆದುಕೊಳ್ತೇವೆ. ಕೆಲವೊಂದು ನಮ್ಮ ಪ್ರಕಾರ ಸರಿಯಾಗಿದ್ರೆ ಬೇರೆಯವರಿಗೆ ತಪ್ಪೆನ್ನಿಸುತ್ತೆ. ಆದ್ರೆ ಅದ್ರಲ್ಲಿ ಯಾವುದೂ ತಪ್ಪು, ಸರಿ ಅನ್ನೋದು ಸ್ಪಷ್ಟವಾಗಿ ಇರೋದಿಲ್ಲ.
ಪ್ರತಿ ನಿತ್ಯ ನಾವು ಸಾಕಷ್ಟು ನೈತಿಕ ಸಂದಿಗ್ಧತೆಗಳನ್ನು ಎದುರಿಸುತ್ತಿರುತ್ತೇವೆ. ಇದನ್ನು ನಮ್ಮ ಜೀವನದ ಅವಿಭಾಜ್ಯ ಅಂಗ ಎನ್ನಬಹುದು. ಅನೇಕ ಗೊಂದಲಗಳು ನಮ್ಮ ಮುಂದಿರುತ್ತವೆ. ಯಾವುದು ಸರಿ, ಯಾವುದು ತಪ್ಪು, ಯಾರಿಗೆ ನ್ಯಾಯ ನೀಡ್ಬೇಕು, ಯಾರಿಗೆ ಅಧಿಕಾರ ನೀಡ್ಬೇಕು, ಯಾವುದು ಯಾರ ಹಕ್ಕು ಹೀಗೆ ಅನೇಕ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಸಿಗೋದು ಕಷ್ಟ. ಯಾಕೆಂದ್ರೆ ಪ್ರತಿಯೊಬ್ಬನ ಮನುಷ್ಯನ ಸ್ವಭಾವ, ಆತನ ಆಲೋಚನೆ, ಆತನ ಜೀವನ ಶೈಲಿ ಎಲ್ಲವೂ ಭಿನ್ನವಾಗಿರುತ್ತವೆ. ಒಬ್ಬ ವ್ಯಕ್ತಿ ಒಂದು ವಸ್ತುವನ್ನು ತನ್ನದೇ ದೃಷ್ಟಿಯಲ್ಲಿ ನೋಡ್ತಾನೆ. ಅದು ಇನ್ನೊಬ್ಬನಿಗೆ ತಪ್ಪೆನಿಸಬಹುದು.
ಸಾಮಾಜಿಕ ಜಾಲತಾಣ (Social Networks) ಗಳಲ್ಲಿ ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಡೆಯುತ್ತಿರುತ್ತದೆ. ಈಗ ಐಎಎಸ್ (IAS) ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಒಂದು ಸಂದಿಗ್ಥತೆಯನ್ನು ಹಂಚಿಕೊಂಡಿದ್ದಾರೆ. ಅವರ ಪ್ರಶ್ನೆಗೆ ಟ್ವೀಟರ್ (Tweeter) ಬಳಕೆದಾರರು ಉತ್ತರ ನೀಡುವ ಪ್ರಯತ್ನ ನಡೆಸಿದ್ದಾರೆ. ಐಎಎಸ್ ಅಧಿಕಾರಿ ಕೇಳಿದ ಪ್ರಶ್ನೆ ಯಾವುದು, ಅದಕ್ಕೆ ಸಿಕ್ಕ ಉತ್ತರವೇನು ಎಂಬುದನ್ನು ನಾವಿಂದು ಹೇಳ್ತೇವೆ.
43 ವರ್ಷದ ಹಿಂದೆ ಗುಲಾಬ್ ಜಾಮೂನು ಬೆಲೆಯೆಷ್ಟು ಚೀಪಾಗಿತ್ತು ನೋಡಿ..ರಾಶಿ ಹಾಕ್ಕೊಂಡು ತಿನ್ಬೋದಿತ್ತು!
ಐಎಎಸ್ ಅಧಿಕಾರಿ ಹೇಳಿದ ಪ್ರಶ್ನೆ ಏನು ಗೊತ್ತಾ? : ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಐಎಎಸ್ ಅಧಿಕಾರಿ ಅವನೀಶ್ ಶರಣ್ (Awanish Sharan )ಪೋಸ್ಟ್ ಹಾಕಿದ್ದಾರೆ. ಅದಕ್ಕೆ ಉತ್ತರಿಸುವಂತೆ ಬಳಕೆದಾರರನ್ನು ಕೇಳಿದ್ದಾರೆ. ಕಾರ್ಟೂನ್ ಚಿತ್ರವನ್ನು ಅವಿನೀಶ್ ಪೋಸ್ಟ್ ಮಾಡಿದ್ದಾರೆ. ಅದ್ರಲ್ಲಿ ಯುವಕನೊಬ್ಬ ಸಾರ್ವಜನಿಕ ಸಾರಿಗೆ ಸೀಟ್ ಮೇಲೆ ಕುಳಿತಿದ್ದಾನೆ. ಅವನ ಪಕ್ಕದಲ್ಲಿ ನಾಲ್ಕು ಮಂದಿ ನಿಂತಿದ್ದಾರೆ. ಕೈನಲ್ಲಿ ಮಗು ಹಿಡಿದು, ಹಿಂದೆ ಬ್ಯಾಗ್ ಹಾಕಿರುವ ಮಹಿಳೆ ಮೊದಲಿದ್ದಾಳೆ. ಆಕೆ ಹಿಂದೆ ಊರುಗೋಲು ಹಿಡಿದಿರುವ ವಯಸ್ಸಾದ ವೃದ್ಧೆ ನಿಂತಿದ್ದಾಳೆ. ಆಕೆ ಹಿಂದೆ ಕಾಲಿಗೆ ಪ್ಲಾಸ್ಟರ್ ಹಾಕಿರುವ, ಸಹಾಯಕ್ಕೆ ಕೋಲು ಹಿಡಿದಿರುವ ಒಬ್ಬ ಗಾಯಾಳು ವ್ಯಕ್ತಿ ನಿಂತಿದ್ದಾನೆ. ಆತನ ಹಿಂದೆ ದೈಹಿಕವಾಗಿ ಅಪೌಷ್ಟಿಕತೆ ಹೊಂದಿರುವ ವ್ಯಕ್ತಿ ನಿಂತಿದ್ದಾನೆ. ಕುಳಿತವರು ನೀವಾಗಿದ್ದರೆ, ನೀವು ಎ,ಬಿ,ಸಿ,ಡಿ ಈ ನಾಲ್ಕು ಮಂದಿಯಲ್ಲಿ ಯಾರಿಗೆ ಸೀಟು ಬಿಟ್ಟುಕೊಡುತ್ತೀರಿ ಎಂಬ ಪ್ರಶ್ನೆ ಕೇಳಲಾಗಿದೆ.
ಪೋಸ್ಟ್ ಜೊತೆ ಅವಿನೀಶ್, ಯಾರು ಈ ಸೀಟಿಗೆ ಅರ್ಹರು, ಹಾಗೆ ಯಾಕೆ ಎಂಬ ಶೀರ್ಷಿಕೆಯನ್ನು ಹಾಕಿದ್ದಾರೆ.
ಈ ಪ್ರಶ್ನೆಗೆ ಉತ್ತರ ನೀಡಿದ ಟ್ವೀಟರ್ ಬಳಕೆದಾರರು : ಐಎಎಸ್ ಅಧಿಕಾರಿ ಅವಿನೀಶ್ ಪ್ರಶ್ನೆಗೆ ಟ್ವೀಟರ್ ಬಳಕೆದಾರರು ಉಲ್ಲಾಸದಿಂದ ಉತ್ತರ ನೀಡಿದ್ದಾರೆ. ಒಬ್ಬೊಬ್ಬರ ಉತ್ತರ ಭಿನ್ನವಾಗಿದೆ.
ದೆಹಲಿ ಮೆಟ್ರೋ ಪ್ರಯಾಣಿಕರಂತೆ ಕಣ್ಣು ಮುಚ್ಚಿ ನಿದ್ರೆ ಮಾಡುವಂತೆ ನಟನೆ ಮಾಡಬೇಕು ಎಂದು ಬಳಕೆದಾರನೊಬ್ಬ ಬರೆದಿದ್ದಾನೆ.
ಅರೆ..ಹೀಗೂ ಮಾಡ್ತಾರಾ.ಬೆಂಗಳೂರಿನಲ್ಲಿ ಬಾಡಿಗೆ ಮನೆಗಾಗಿ ಕಿಡ್ನಿ ಮಾರಾಟಕ್ಕಿಟ್ಟ ವ್ಯಕ್ತಿ!
ಇನ್ನೊಬ್ಬ ಬಳಕೆದಾರ, ಮಹಿಳೆ ಹಾಗೂ ವೃದ್ಧರಿಗಾಗಿ ಪ್ರತ್ಯೇಕ ಸೀಟು ಮೀಸಲಿದೆ. ಹಾಗಾಗಿ ಅವರು ಆ ಸೀಟಿನಲ್ಲಿ ಕುಳಿತುಕೊಳ್ತಾರೆ. ಕೊನೆಯಲ್ಲಿರುವ ವ್ಯಕ್ತಿಗೆ ಶಕ್ತಿಯಿಲ್ಲ. ಆದ್ರೆ ಆತ ಇನ್ನೊಂದು ನಿಲ್ದಾಣ ಬರುವವರೆಗೆ ನಿಲ್ಲುವ ಸಾಮರ್ಥ್ಯ ಹೊಂದಿದ್ದಾನೆ. ಹಾಗಾಗಿ ಮಧ್ಯದಲ್ಲಿರುವ, ಗಾಯಗೊಂಡ ವ್ಯಕ್ತಿಗೆ ಸೀಟು ನೀಡ್ಬೇಕೆಂದು ಉತ್ತರ ನೀಡಿದ್ದಾನೆ.
ಇನ್ನೊಬ್ಬ ವ್ಯಕ್ತಿ, ಇಂಥ ಖತರ್ನಾಕ್ ಆಯ್ಕೆಯನ್ನು ಯಾರು ನೀಡ್ತಾರೆ ಎಂದು ಇನ್ನೊಬ್ಬ ಕೇಳಿದ್ರೆ, ಮತ್ತೊಬ್ಬ ಯಾರಿಗೂ ಸೀಟ್ ನೀಡ್ಬಾರದು. ಇಲ್ಲಿ ನಾನು ಕೂಡ ಪ್ರಯಾಣಿಕನಾಗಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದಾನೆ.
ಇದಕ್ಕೆ ಸ್ಪಷ್ಟ ಉತ್ತರವಿಲ್ಲ. ಪ್ರತಿಯೊಂದು ಆಯ್ಕೆಯು ತನ್ನದೇ ಆದ ಅರ್ಹತೆಯನ್ನು ಹೊಂದಿದೆ. ಇದೊಂದು ವಿಶಿಷ್ಟವಾದ ಎಥಿಕ್ಸ್ ಕೇಸ್ ಸ್ಟಡಿ. ಅಲ್ಲಿ ಸರಿ ಮತ್ತು ತಪ್ಪು ಇಲ್ಲ. ಆದಾಗ್ಯೂ ನಾನು ಎ ಆಯ್ಕೆಯನ್ನು ಆಯ್ಕೆ ಮಾಡುತ್ತದೆ. ಇದು ಇಬ್ಬರಿಗೆ ಆಸನವನ್ನು ನೀಡುತ್ತದೆ ಎಂದು ಇನ್ನೊಬ್ಬ ವ್ಯಕ್ತಿ ಬರೆದಿದ್ದಾನೆ.