ಪ್ರೀತಿ ಅಂದ ಮೇಲೆ ಅಲ್ಲಿ ಒಂದಷ್ಟು ರೋಮ್ಯಾನ್ಸ್, ತುಂಟಾಟ, ಜಗಳ, ಕಿಸ್, ಅಪ್ಪುಗೆ ಎಲ್ಲವೂ ಇರುತ್ತೆ. ಇರಲೇಬೇಕು. ಅದರಲ್ಲಿಯೂ  ಸಂಗಾತಿ ನೀಡೋ ಮುತ್ತಲ್ಲಿ ಏನೋ ಒಂದು ಮ್ಯಾಜಿಕಲ್ ಅನುಭವ ಇರುತ್ತದೆ. ಮತ್ತೆ ಮತ್ತೆ ಬೇಕೆನಿಸುವ ಚುಂಬಕ ಶಕ್ತಿ ಇರುವುದು ಚುಂಬನಕ್ಕೆ ಮಾತ್ರ... 

ಪ್ರೀತಿಯ ಆಳವನ್ನು ಮತ್ತಿನ ಮೂಲಕ ವ್ಯಕ್ತಪಡಿಸಬಹುದು. ಒಂದೊಂದು ರೀತಿಯ ಮುತ್ತಿಗೆ ಒಂದೊಂದು ಅರ್ಥವಿದೆ. ಏನವು?

- ಸಂಗಾತಿಯ ಕೆನ್ನೆ, ಹಣೆ, ಕೈ, ಮೂಗಿನ ಮೇಲೆ, ಕಣ್ಣಿನ ಮೇಲೆ ಕಿಸ್‌ ಮಾಡಿದರೆ ಅದು ತಾನು ಎಷ್ಟು ಕೇರ್ ತೆಗೆದುಕೊಳ್ಳುತ್ತೇನೆ ಎಂದು ಸೂಚಿಸುತ್ತದೆ.

- ಸಂಗಾತಿಗಳು ಆಗಾಗ ಕಿಸ್ ಮಾಡಿಕೊಳ್ಳುತ್ತಿದ್ದರೆ ಪ್ರೀತಿ ಹೆಚ್ಚುತ್ತದೆ. ಇಬ್ಬರ ಬಾಂಧವ್ಯ ಮತ್ತಷ್ಟು ವೃದ್ಧಿಸುತ್ತದೆ. ಈ ಪ್ರೀತಿಯನ್ನು ಎಕ್ಸ್‌ಪ್ರೆಸ್‌ ಮಾಡಲು  ಫ್ರೆಂಚ್‌ ಕಿಸ್‌, ಸ್ಮೂಚ್‌, ಕುತ್ತಿಗೆ ಮೇಲೆ ಕಿಸ್‌, ಕಿವಿಗೆ ಕಿಸ್‌ ಮಾಡಲಾಗುತ್ತದೆ. 

- ಕಂಟ್ರೋಲ್ ಇಲ್ಲದೆ ಸಂಗಾತಿಗೆ ನೀಡುವ ಸ್ಪೈಡರ್ ಮ್ಯಾನ್ ಕಿಸ್, ಬಟರ್ ಫ್ಲೈ ಕಿಸ್ ಇಬ್ಬರಲ್ಲೂ ಬಾಂಧವ್ಯವನ್ನು ಗಾಢಗೊಳಿಸುತ್ತದೆ.

- ಸಂಗಾತಿ ನಿಮ್ಮನ್ನು ತುಂಬಾ ಆಧರಿಸುವವನು, ರಕ್ಷಣೆ ಮಾಡಲು ಸದಾ ಸಿದ್ಧನಾಗಿದ್ದರೆ, ಕಣ್ಣು ಅಥವಾ ಹಣೆ ಮೇಲೆ ಮೃದುವಾಗಿ ಕಿಸ್ ಮಾಡುತ್ತಾರೆ. 

ಮುತ್ತಿನ ಗಮ್ಮತ್ತೇನು?
- ಪ್ರತಿದಿನ ಮುತ್ತು ಕೊಡೋದರಿಂದ ದಾಂಪತ್ಯದ ಕಲಹ ದೂರವಾಗುತ್ತದೆ. ಸಂಬಂಧ ಮಧುರವಾಗುತ್ತದೆ.
- ಕಿಸ್ ಮಾಡುವುದರಿಂದ ದಾಂಪತ್ಯದಲ್ಲಿ ಪ್ರೀತಿಗೆ ಹೆಚ್ಚುತ್ತದೆ. ಅನುಬಂಧ ಗಟ್ಟಿಯಾಗುತ್ತದೆ.
- ಯಾರೇ ಆಗಿರಲಿ ಫಸ್ಟ್ ಸೆಕ್ಸ್‌ಗಿಂತಲೂ ಮೊದಲ ಮುತ್ತನ್ನು ನೆನಪಿನಲ್ಲಿಟ್ಟುಕೊಂಡಿರುತ್ತಾರೆ.
- ಮಾತಲ್ಲಿ ಹೇಳಲಾಗದನ್ನು ಮುತ್ತು ಹೇಳುತ್ತೆ. ಬದುಕು ಬಂಗಾರವಾಗುತ್ತದೆ.
- ಮತ್ತನ್ನಿಡುವಾಗ ಮೆದುಳು ಆ್ಯಕ್ಟಿವ್ ಆಗಿರಲು ಕಣ್ಣು ಮುಚ್ಚುತ್ತಾರೆ. ಇದು ಸುಖದ ಪರಾಕಾಷ್ಟೆಯ ಅನುಭವ ನೀಡುತ್ತದೆ.
- ಮುತ್ತಿಡುವಾಗ ಹೃದಯ ಬಡಿತ ಹೆಚ್ಚಿ, ಮೆದುಳಿಗೆ ಆಮ್ಲಜನಕ ಪೂರೈಕೆ ಹೆಚ್ಚಾಗುತ್ತದೆ. ಇದರಿಂದ ಆರೋಗ್ಯ ಸುಧಾರಿಸುತ್ತದೆ. 
- ಒತ್ತಡ ನಿವಾರಣೆಗೆ ಮುತ್ತು ಸಹಕರಿಸುತ್ತದೆ. ಇದರಿಂದ ರಕ್ತದೊತ್ತಡ ಹಾಗೂ ಮಧುಮೇಹದಂಥ ಸಮಸ್ಯೆಗಳೂ ದೂರವಾಗುತ್ತದೆ.

ಈ ಸುದ್ದಿಗಳನ್ನೂ ಓದಿ