ಕೂದಲೂ, ಕಣ್ಣುಗಳೂ ಇಲ್ಲದ ಬೆಕ್ಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಒಂಚೂರು ರೋಮವಿಲ್ಲದ ಈ ಬೆಕ್ಕನ ತಟ್ಟನೆ ನೋಡಿದ್ರೆ ಭಯವಾಗೋದು ಖಂಡಿತ. ಈ ಫೋಟೋ ನೋಡಿದ್ರೆ 80ರ ದಶಕದ ಹಾರರ್ ಸಿನಿಮಾ ದೃಶ್ಯ ನೆನಪಾಗಬಹುದೇನೋ.. ಆದ್ರೆ ಇದು ಸಿನಿಮಾ, ಡ್ರಾಮಾ ಏನೂ ಅಲ್ಲ, ಜೀವಂತ ಬೆಕ್ಕು.

ಕೂದಲೇ ಇಲ್ಲದ ಬೆಕ್ಕಿಗೆ ಕಣ್ಣಿನ ರಚನೆ ಇದೆ, ಆದ್ರೆ ಕಣ್ಣುಗಳೇ ಇಲ್ಲ. ಇದರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡ್ತಿವೆ. ಇನ್‌ಸ್ಟಾಗ್ರಾಂ, ಟಿಕ್‌ಟಾಕ್, ಫೇಸ್‌ಬುಕ್‌ನಲ್ಲೆಲ್ಲಾ ಜಾಸ್ಪೆರ್ ಫೋಟೋ ವೈರಲ್ ಆಗ್ತಿದೆ.

ಬೆಕ್ಕಿನ ಮೇಲೆ ಫೈರಿಂಗ್ ನಡೆಸಿ ಹತ್ಯೆ!

ಜಾಸ್ಪರ್ ಮಾಲೀಕ ಅದನ್ನು ದತ್ತು ಪಡೆದಾಗ ಅದರ ವಯಸ್ಸು 2 ವರ್ಷ. ನೋಡುವುದಕ್ಕೆ ಇದು ಆರೋಗ್ಯವಾಗಿತ್ತು. ಕೆಲವು ವರ್ಷದ ನಂತರ ಫೆಲಿನ್ ಹರ್ಪಸ್ ವೈರಸ್‌ನಿಂದ ಡಯಾಗ್ನಿಸಿಸ್ ಮಾಡಲಾಯಿತು. ನಂತರ ಜಾಸ್ಪರ್ ಬಲಗಣ್ಣಲ್ಲಿ ಅಲ್ಸಾರ್ ಆಯಿತು. ನಂತರದ ಕೆಲವು ತಿಂಗಲ್ಲಿ ಇದರ ಸ್ಥಿತಿ ಇನ್ನೂ ಗಂಭೀರವಾಯ್ತು.

ನಂತರ ಅದರ ಕಣ್ಣಿನ ಸ್ಥಿತಿ ಹದೆಗೆಡುತ್ತಲೇ ಹೋಯಿತು. 2018ರಲ್ಲಿ ಇನ್ಫೆಕ್ಷನ್ ಇನ್ನಷ್ಟು ಹೆಚ್ಚಾಗುವುದನ್ನು ತಡೆಯಲು ಕಣ್ಣನ್ನು ತೆಗೆಯಲಾಯಿತು. ಜಾಸ್ಪರ್ ಇದಕ್ಕೂ ಹೊಂದಿಕೊಂಡಿತು. ಹಾಗೆಯೇ ಸ್ವಲ್ಪ ಸಮಯದಲ್ಲೇ ಬೆಕ್ಕು ವೈರಲ್ ಅಯ್ತು.

ಬೆಕ್ಕಷ್ಟೇ ಅಲ್ಲ, ಈ ಪ್ರಾಣಿಗಳು ಅಡ್ಡಬಂದರೂ ಅಪಶಕುನ!

2019ರಲ್ಲಿ ಮೈಲ್ ಸ್ಟ್ರೋಕ್ ಆದ್ರೂ ಈ ಬೆಕ್ಕು ಮತ್ತೆ ರಿಕವರಿಯಾಗಿದೆ. ಇದೀಗ ಬೆಕ್ಕಿಗೆ 12 ವರ್ಷ. ಜಾಸ್ಪರ್‌ಗೆ ಇನ್‌ಸ್ಟಾಗ್ರಾಂನಲ್ಲಿ 72900 ಫಾಲೋವರ್ಸ್,ಟಿಕ್‌ಟಾಕ್‌ನಲ್ಲಿ 50 ಸಾವಿರ , ಫೇಸ್‌ಬುಕ್‌ನಲ್ಲಿ 12 ಸಾವಿರ ಫಾಲೋವರ್ಸ್ ಇದ್ದಾರೆ.