ಪ್ರೀತಿ ಮಾಯೆ. ಅದ್ಯಾವಗ ಹುಟ್ಟುತ್ತೋ, ಸಾಯುತ್ತೋ ಗೊತ್ತಿಲ್ಲ. ಪ್ರೀತಿ ನಿವೇದಿಸಿಕೊಂಡಾಗ ಅವಳು ಒಪ್ಪಿಲ್ಲ. ಆದರೆ, ಬೇರೆ ಹುಡುಗನನ್ನು ಮದುವೆಯಾಗಲು ಮುಂದಾಗಿ, ಆ ಮದುವೆ ಮುರಿದಾಗ ಮತ್ತೆ ಒಪ್ಪಿಕೊಂಡಿದ್ದಾಳೆ. ಮತ್ತೆ ಇನ್ನೊಬ್ಬನನ್ನು ವರಿಸಲು ಮುಂದಾಗುತ್ತಿರುವ ಈ ಹುಡುಗಿಗೆ ಏನೆಂದು ಹೆಸರಿಡೋಣ?
ನಾನು ಒಂದು ಹುಡುಗಿಯನ್ನು 4 ವರ್ಷದಿಂದ ಪ್ರೀತಿಸುತ್ತಿದ್ದೆ. ಆದರೆ ಅವಳು ಮಾತ್ರ ಒಪ್ಪಿಕೊಂಡಿರಲಿಲ್ಲ. 6 ತಿಂಗಳ ಮೊದಲು ಅವಳಿಗೆ ಮದುವೆ ನಿಶ್ಚಯವಾಯಿತು. ಅದೇ ನೋವಿನಲ್ಲಿ ನಾನು ಸುಮ್ಮನಿದ್ದೆ. ಆದರೆ ನಿಶ್ಚಿತಾರ್ಥ ಆದ ನಂತರ ಯಾವುದೋ ಕಾರಣಕ್ಕೆ ಮದುವೆ ಮುರಿದು ಹೋಯಿತು. ವಿಷಯ ತಿಳಿದು ಮತ್ತೆ ಪ್ರೀತಿ ನಿವೇದನೆ ಮಾಡಿಕೊಂಡೆ. ಅವಳು ಒಪ್ಪಿ ಮದುವೆಯಾಗುವುದಾಗಿ ಮಾತು ಕೊಟ್ಟಳು.
ಈಗ ಕರೆ ಮಾಡಿ ಮನೆಯಲ್ಲಿ ಬೇರೆ ಹುಡುಗನನ್ನು ನೋಡಿದ್ದಾರೆ. ನನಗೆ ನನ್ನ ಕುಟುಂಬ ಮೊದಲು. ದಯವಿಟ್ಟು ನನ್ನ ಮರೆತುಬಿಡಿ ಎನ್ನುತ್ತಿದ್ದಾಳೆ. ಹಾಗಾದರೆ ನನ್ನ ನಾಲ್ಕು ವರ್ಷದ ಪ್ರೀತಿಗೆ ಬೆಲೆಯೇ ಇಲ್ಲವೇ? ಏನಾದರೂ ಸಲಹೆ ನೀಡಿ ಪ್ಲೀಸ್.
- ಹೆಸರು ಬೇಡ
ನಿಮ್ಮ ಸಲಹೆಗಳನ್ನು suvarnanewsindia@gmail.comಗೆ ಕಳುಹಿಸಿ.

Last Updated 20, Jun 2018, 3:07 PM IST