Asianet Suvarna News Asianet Suvarna News

'ಹಣ ಇದೆ ಅಂತ ಎಂಟಿಬಿ ಮೆರೀತಿದ್ದಾರೆ, ಎಲೆಕ್ಷನ್ ನಂತ್ರ ಆಟ ಬಂದ್‌'..!

ಹಣ ಬಲದಿಂದ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್‌ ಮೆರೆಯುತ್ತಿದ್ದಾರೆ. ಇವರ ಆಟ ಡಿಸೆಂಬರ್‌ 5ರ ತನಕ ಮಾತ್ರ. ಉಪಚುನಾವಣೆ ಬಳಿಕ ಎಲ್ಲ ಬಂದ್‌ ಆಗಲಿದೆ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಟೀಕಿಸಿದ್ದಾರೆ.

mtb nagaraj game will over after election says narayana swamy
Author
Bangalore, First Published Oct 17, 2019, 2:40 PM IST

ಕೋಲಾರ(ಅ.17): ಹಣ ಇದೆ ಅಂತ ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್‌ ಮೆರೆಯುತ್ತಿದ್ದಾರೆ. ಇವರ ಆಟ ಡಿಸೆಂಬರ್‌ 5ರ ತನಕ ಮಾತ್ರ. ಉಪಚುನಾವಣೆ ಬಳಿಕ ಎಲ್ಲ ಬಂದ್‌ ಆಗಲಿದೆ ಎಂದು ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಟೀಕಿಸಿದ್ದಾರೆ.

ಬಂಗಾರಪೇಟೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಣದಾಸೆಯಿಂದ ಬಿಜೆಪಿಗೆ ಶಾಸಕ ಸ್ಥಾನವನ್ನು ಅಡವಿಟ್ಟಿರುವ ಎಂ.ಟಿ.ಬಿ ನಾಗರಾಜ್‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ.

ಅಬಕಾರಿ ಪೂರ್ಣ ಸ್ವಾತಂತ್ರ್ಯ ಬಗ್ಗೆ ಮಾತಾಡಿದ್ರೆ ಕಾಂಟ್ರವರ್ಸಿ ಆಗುತ್ತೆ ಎಂದ ಸಚಿವ

ಸಿದ್ದರಾಮಯ್ಯ ದೊಡ್ಡ ಆಲದ ಮರ ಇದ್ದಂತೆ. ಅನರ್ಹ ಶಾಸಕ ನಾಗರಾಜ್‌ ಮರದ ಕೆಳಗಿರುವ ನೆರಳು ಅಷ್ಟೇ. ಡಿಸೆಂಬರ್‌ 5ರ ನಂತರ ಯಾರ ಬಲ ಎಷ್ಟಿದೆ ಎಂಬುದು ಬಹಿರಂಗವಾಗಲಿದೆ. ಸಿದ್ದರಾಮಯ್ಯ ಬೆಂಬಲ ಇಲ್ಲದಿದ್ದರೆ ಎಂ.ಟಿ.ಬಿ ನಾಗರಾಜ್‌ ಈ ಮಟ್ಟಿಗೆ ಎಲ್ಲಿ ಬೆಳೆಯುತ್ತಿದ್ದರೇ ಎಂದು ಪ್ರಶ್ನಿಸಿದ್ದಾರೆ.

ಅನರ್ಹರಿಗೆ ಸೋಲುವ ಭೀತಿ

ಎಂಟಿಬಿ, ಬೈರತಿ ಬಸವರಾಜ್‌, ಮುನಿತರ್ನ, ಸೋಮಶೇಖರ್‌ ಸಾಯೋತನಕ ಸಿದ್ದರಾಮಯ್ಯ ಅವರನ್ನು ಮರೆಯಬಾರದು. ಆದರೆ ಇವರೆಲ್ಲ ಸೇರಿ ಸಿದ್ದರಾಮಯ್ಯನವರ ಬೆನ್ನಿಗೆ ಚೂರಿ ಹಾಕಿದರು. ಯಾವುದೇ ಕಾರಣಕ್ಕೂ ಅನರ್ಹ ಶಾಸಕರನ್ನು ಮತ್ತೆ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದಿಲ್ಲ. ಎಲ್ಲವನ್ನು ಹೈಕಮಾಂಡ್‌ ತೀರ್ಮಾನ ಮಾಡಲಿದೆ. ಪಕ್ಷಕ್ಕೆ ದ್ರೋಹ ಮಾಡಿರುವ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಈಗಾಗಲೇ ಸೋಲುವ ಭೀತಿ ಉಂಟಾಗಿದೆ. ಈಗಲೇ ವಿಧಾನಸಭೆ ಚುನಾವಣೆ ನಡೆದರೂ ಕಾಂಗ್ರೆಸ್‌ 150 ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಲೂಕು ಕಚೇರಿಗೆ ಸಚಿವರ ದಿಢೀರ್‌ ಭೇಟಿ; ಬ್ಯಾಗ್, ಲಾಕರ್ ಚೆಕ್ ಮಾಡಿದ್ರು ಆರ್. ಅಶೋಕ್...

ರಾಜ್ಯ ಬಿಜೆಪಿ ನಾಯಕರಿಗೆ ಜನರ ಹಿತಕ್ಕಿಂತಲೂ ಅಧಿಕಾರ ಮುಖ್ಯವಾಗಿದೆ. ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ರೈತರ ಸಾಲ ಮನ್ನಾ ಮಾಡಲು ಮೀನಮೇಷ ಎಣಿಸುತ್ತಿದ್ದಾರೆಂದು ಖಂಡಿಸಿದರು.

ಸಭಾಧ್ಯಕ್ಷರ ನಡೆ ವಿರುದ್ದ ಕಿಡಿ

ವಿಧಾನಸಭೆ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ತಮಗೆ ಸಲಹೆಗಾರರನ್ನು ನೇಮಕ ಮಾಡಿಕೊಳ್ಳುವ ಮೂಲಕ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದಾರೆ. ಪ್ರಕಾಶ್‌ ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡಿರುವುದು ಸರಿಯಿಲ್ಲ ಎಂದು ಟೀಕಿಸಿದರು.

Follow Us:
Download App:
  • android
  • ios