ಕೋಲಾರದ ಕೆಜಿಎಫ್‌ನಲ್ಲಿ ರೈತರು ಕುರಿಗಳೊಡನೆ ಸೇರಿ ಪ್ರತಿಭಟನೆ ಮಾಡಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಸೋಲಾರ್‌ ಘಟಕ ಸ್ಥಾಪಿಸುತ್ತಿರುವುದನ್ನು ವಿರೋಧಿಸಿದ ರೈತರು ತಮ್ಮ ಕುರಿಗಳನ್ನೂ ಸೇರಿಸಿಕೊಂಡು ಪ್ರತಿಭಟಿಸಿದ್ದಾರೆ.

ಕೆಜಿಎಫ್‌(ಅ.16):  ಸರ್ಕಾರಿ ಜಮೀನಿನಲ್ಲಿ ಸೋಲಾರ್‌ ಘಟಕ ಸ್ಥಾಪಿಸುತ್ತಿರುವುದನ್ನು ವಿರೋಧಿಸಿ ವಿರುದ್ಧ ರೈತ ಸಂಘದ ಕಾರ್ಯಕರ್ತರು ಕೆಜಿಎಫ್‌ನ ತಾಲೂಕು ಕಚೇರಿ ಮುಂಭಾಗದಲ್ಲಿ ಕುರಿಗಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.

ಏಷ್ಯನ್‌ ಪೆಪ್‌ಟೆಕ್‌ ಎಂಬ ಸಂಸ್ಥೆ ಗುಂಡುತೋಪಿನಲ್ಲಿ ಅಕ್ರಮವಾಗಿ ಖಾಸಗಿ ಸೋಲಾರ್‌ ಘಟಕವನ್ನು ಸ್ಥಾಪಿಸುತ್ತಿದೆ. ಸಂಸ್ಥೆಯ ವಿರುದ್ಧ ಕ್ರಮ ಕೈಗೊಂಡು ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.

ಗೋಮಾಳ ಅಕ್ರಮ ಮಂಜೂರು

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸರ್ಕಾರಿ ಜಮೀನುಗಳನ್ನು ಉಳಿಸುವಲ್ಲಿ ತಾಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗುತ್ತಿವೆ ಎಂದು ಆರೋಪಿಸಿದ್ದಾರೆ.

ಕೋಟಿಲಿಂಗೇಶ್ವರದಲ್ಲಿ ಪ್ರಸಾದ ವಿನಿಯೋಗ ರದ್ದು

ಜನ ಸಾಮಾನ್ಯರ ಅಭಿವೃದ್ಧಿಗೆ ಸರ್ಕಾರದಿಂದ ಮಂಜೂರಾಗುವ ಕಟ್ಟಡ ಕಾಮಗಾರಿಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳ ಜನರ ಕುರಿಗಾಯಿಗಳಿಗೆ ಮೇಯಿಸಲು ಜಮೀನು ಮಂಜೂರು ಮಾಡಲು ಸ್ಥಳದ ಸಮಸ್ಯೆ ನೆಪ ಅಧಿಕಾರಿಗಳು ಹೇಳುತ್ತಾರೆ. ಆದರೆ ಇಂದು ರಾಜರೋಷವಾಗಿ ಕಾರ್ಪೊರೇಟ್‌, ರಿಯಲ್‌ ಎಸ್ಟೇಟ್‌ ಮಾಫಿಯಕೋರರಿಗೆ ರಾತ್ರೋರಾತ್ರಿ ಮಂಜೂರು ಮಾಡುತ್ತಿದ್ದಾರೆ ಎಂದು ದೂರಿದರು.

ಕುರಿ ಮೇಯಲು ಮೀಸಲಿಡಿ

ತಾಲೂಕು ಅಧ್ಯಕ್ಷ ಕ್ಯಾಸಂಬಳ್ಳಿ ಪ್ರತಾಪ್‌ ಮಾತನಾಡಿ, ಕೆ.ಜಿ.ಎಫ್‌ ತಾಲೂಕು ಕ್ಯಾಸಂಬಳ್ಳಿ ಹೋಬಳಿ ಖಾಜಿಮಿಟ್ಟಹಳ್ಳಿ ಗ್ರಾಮದಲ್ಲಿ ಸುಮಾರು 60 ಎಕರೆ ಗುಂಡು ತೋಪು ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡು ಸೋಲಾರ್‌ ಕಂಪನಿ ಸ್ಥಾಪನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮೇಲಧಿಕಾರಿಗಳ ಗಮನಕ್ಕೆ

ಮನವಿ ಸ್ವೀಕರಿಸಿ ಮಾತನಾಡಿದ ಆರ್‌.ಐ ರಘುರಾಮ್‌ಸಿಂಗ್‌ರವರು ಹಿರಿಯ ಅಧಿಕಾರಿಗಳ ಗಮಕ್ಕೆ ವಿಷಯ ತರುವುದಾಗಿ ತಿಳಿಸಿದರು. ಜಿಲ್ಲಾಧ್ಯಕ್ಷ ಮರಗಲ್‌ ಶ್ರೀನಿವಾಸ್‌, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಹ.ಸೇ.ತಾ.ಅಧ್ಯಕ್ಷ ವಡ್ಡಹಳ್ಳಿ ಮಂಜುನಾಥ, ಗಣೇಶ್‌, ಟೈಗರ್‌ ಮಂಜು, ಮೀಸೆ ರಾಮಚಂದ್ರಪ್ಪ, ಮಂಗಸಂದ್ರ ತಿಮ್ಮಣ್ಣ, ಮಂಜುನಾಥ್‌, ಚಂದ್ರಪ್ಪ, ಬೂದಿಕೋಟೆ ಹರೀಶ್‌, ಸುಪ್ರಿಂಚಲ, ಸಾಗರ್‌, ರಂಜೀತ್‌ಕುಮಾರ್‌ ಮುಂತಾದವರಿದ್ದರು.

ಬಂಗಾರಪೇಟೆಯಿಂದ ಯಲಹಂಕಕ್ಕೆ ಹೊಸ ರೈಲು