Asianet Suvarna News Asianet Suvarna News

ವಿದ್ಯುತ್ ಮಗ್ಗಗಳಿಗೂ ಶೂನ್ಯ ವಿದ್ಯುತ್ ಬಿಲ್: ನೇಕಾರರು ಫುಲ್ ಖುಶ್‌..!

ರಾಜ್ಯ ಸರ್ಕಾರ ಶೂನ್ಯ ವಿದ್ಯುತ್ ಬಿಲ್ ನೀಡಲು ಹೆಸ್ಕಾಂಗೆ ಆದೇಶಿದ್ದರಿಂದ ಇದೀಗ ಶೂನ್ಯ ವಿದ್ಯುತ್ ಬಿಲ್ ವಿತರಿಸಲಾಗುತ್ತಿದೆ. ಇದರಿಂದ ಬೆಲೆ ಏರಿಕೆ ಬವಣೆಯಿಂದ ತತ್ತರಿಸಿದ್ದ ನೇಕಾರ ವರ್ಗಕ್ಕೆ ಕೊಂಚ ಉಸಿರು ತುಂಬಿದಂತಾಗಿದೆ. 

Zero Electricity Bill for Electric Looms too in Bagalkot grg
Author
First Published Dec 2, 2023, 11:00 PM IST

ಶಿವಾನಂದ ಪಿ.ಮಹಾಬಲಶೆಟ್ಟಿ

ರಬಕವಿ-ಬನಹಟ್ಟಿ(ಡಿ.03):  ಕರ್ನಾಟಕ ರಾಜ್ಯ ನೇಕಾರರ ಸೇವಾ ಸಂಘಟನೆ ಸೇರಿದಂತೆ ರಾಜ್ಯಾದ್ಯಂತ ಇರುವ ಹಲವಾರು ನೇಕಾರ ಸಂಘಟನೆಗಳು ವಿದ್ಯುತ್ ಚಾಲಿತ ಮಗ್ಗಗಳಿಗೆ ರಾಜ್ಯ ಸರ್ಕಾರ ಉಚಿತ ವಿದ್ಯುತ್ ವಿತರಿಸುವಂತೆ ಆಗ್ರಹಿಸಿ ಹೋರಾಟ ನಡೆಸಿದ್ದವು. ಬಹು ವರ್ಷಗಳ ನೇಕಾರರ ಬೇಡಿಕೆಗೆ ಮನ್ನಣೆ ನೀಡಿರುವ ರಾಜ್ಯ ಸರ್ಕಾರ ಡಿ.೧ ರಂದು ರಬಕವಿ-ಬನಹಟ್ಟಿ ವಿದ್ಯುತ್ ಮಗ್ಗಗಳಿಗೆ ಶೂನ್ಯ ವಿದ್ಯುತ್ ಬಿಲ್ ವಿತರಿಸುವ ಮೂಲಕ ನೇಕಾರ ಸಮುದಾಯಕ್ಕೆ ಹರ್ಷವುಂಟು ಮಾಡಿದೆ.

ಜಿಲ್ಲೆಯಲ್ಲೇ ಅತ್ಯಧಿಕ ನೇಕಾರರನ್ನು ಹೊಂದಿರುವ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ನೇಕಾರಿಕೆ ಉದ್ಯಮ ತನ್ನ ಹಿಂದಿನ ವೈಭವ ಕಳೆದುಕೊಂಡಿದೆ. ಜವಳಿ ಉದ್ಯಮಕ್ಕೆ ಬೇಕಾದ ಕಚ್ಚಾ ನೂಲು ಮತ್ತು ಕಚ್ಚಾ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದರಿಂದ ಉತ್ಪಾದನೆ ವೆಚ್ಚದಾಯಕವಾಗಿದ್ದು, ಸೀರೆಗಳ ಉತ್ಪಾದನೆಗೆ ನೇಕಾರರು ಹರಸಾಹಸ ಪಡುವಂತಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೇಕಾರಿಕೆ ಉಳಿಸಲು ಬೆಲೆಗಳಲ್ಲಿ ಇಳಿಕೆ ಮಾಡದೇ ಇರುವುದರಿಂದ ಮತ್ತು ಸಾಲದೆಂಬಂತೆ ವಿದ್ಯುತ್ ಬಿಲ್ ಬರೆಯಿಂದಾಗಿ ನೇಕಾರ ನಿತ್ರಾಣಗೊಂಡಿದ್ದ. ಆದರೆ ಇದೀಗ ರಾಜ್ಯ ಸರ್ಕಾರ ಶೂನ್ಯ ವಿದ್ಯುತ್ ಬಿಲ್ ನೀಡಲು ಹೆಸ್ಕಾಂಗೆ ಆದೇಶಿದ್ದರಿಂದ ಡಿ.೧ರಂದು ಅವಳಿ ನಗರದಲ್ಲಿ ಶೂನ್ಯ ವಿದ್ಯುತ್ ಬಿಲ್ ವಿತರಿಸಲಾಗುತ್ತಿದೆ. ಇದರಿಂದ ಬೆಲೆ ಏರಿಕೆ ಬವಣೆಯಿಂದ ತತ್ತರಿಸಿದ್ದ ನೇಕಾರ ವರ್ಗಕ್ಕೆ ಕೊಂಚ ಉಸಿರು ತುಂಬಿದಂತಾಗಿದೆ. ೧೦ಎಚ್‌ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ನೇಕಾರರ ಮಗ್ಗಗಳಿಗೆ ಈ ಸೌಲಭ್ಯ ಸಿಗುವುದರಿಂದ ನೇಕಾರಿಕೆಗೆ ನೆರವಾಗುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.

ಬಾಗಲಕೋಟೆ: ಬರಗಾಲದ ಮಧ್ಯೆ ಬೆಳೆ ಕಾಯೋಕೆ ಹೊಲದಲ್ಲಿಯೇ ಟೆಂಟ್​ ಹಾಕಿದ ಅನ್ನದಾತರು..!

ನೇಕಾರರ ಕೂಗಿಗೆ ಸಿಗಬೇಕಿದೆ ಮನ್ನಣೆ : ವೃತ್ತಿಪರ ನೇಕಾರರು ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ವ್ಯೂಹದಿಂದ ನರಳುವಂತಾಗಿದ್ದು, ನೆರೆಯ ರಾಜ್ಯಗಳಲ್ಲಿ ನೇಕಾರರಿಗೆ ನೀಡಿರುವ ಸೌಲಭ್ಯಗಳನ್ನು ತಮಗೂ ನೀಡುವ ಮೂಲಕ ಉದ್ಯೋಗ ರಕ್ಷಣೆಗೆ ಮುಂದಾಗಲು ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದಾರೆ. ತೆರಿಗೆ ಪ್ರಮಾಣ ಕಡಿತಗೊಳಿಸುವ ಮೂಲಕ ಜವಳಿ ಉದ್ದಿಮೆಗೆ ಬೇಕಾಗುವ ಕಚ್ಚಾ ವಸ್ತುಗಳ ಬೆಲೆ ನಿಯಂತ್ರಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಮುಂದಾದಲ್ಲಿ ನಮ್ಮ ನೇಕಾರರೂ ಮಾರುಕಟ್ಟೆಯಲ್ಲಿ ಇತರೆ ರಾಜ್ಯಗಳ ಜವಳಿ ಉತ್ಪನ್ನಗಳ ಜೊತೆ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಸರ್ಕಾರಗಳು ಈ ಕ್ರಮಕ್ಕೆ ಮುಂದಾಗದ ಕಾರಣ ನೇಕಾರಿಕೆ ಆಶ್ರಿತ ಕುಟುಂಬಗಳು ಹೊಟ್ಟೆ ಹೊರೆದುಕೊಳ್ಳಲೂ ಪರದಾಡುವಂತಾಗಿದೆ. ವೃತ್ತಿ ಪರ ನೇಕಾರರನ್ನು ಕಾರ್ಮಿಕರೆಂದು ಪರಿಗಣಿಸಿ, ಅವರಿಗೆ ಸಿಗುವ ಸೌಲಭ್ಯಗಳನ್ನು ನೇಕಾರರಿಗೂ ವಿಸ್ತರಿಸಿದಲ್ಲಿ ಆರೋಗ್ಯ ಸೇರಿದಂತೆ ವಿವಿಧ ಸೌಲಭ್ಯಗಳು ದೊರೆತು ನೇಕಾರರು ನಿರಾಳ ಬದುಕು ಸಾಗಿಸಲು ಸಾಧ್ಯವಾಗುತ್ತದೆ. ವೃದ್ಧ ನೇಕಾರರು ಜೀವನದ ಸಂಧ್ಯಾ ಸಮಯದಲ್ಲಿ ಕೊಂಚವಾದರೂ ನೆಮ್ಮದಿ ಬದುಕು ನಡೆಸಲು ಪಿಂಚಣಿ ನೀಡುವತ್ತ ಸರ್ಕಾರ ಮುಂದಾಗಬೇಕು. ಇವೇ ಮೊದಲಾದ ಬೇಡಿಕೆಗಳ ಮುಂದಿಟ್ಟುಕೊಡು ದಶಕಗಳ ಕಾಲ ನೇಕಾರರು ಸರ್ಕಾರಕ್ಕೆ ಮನವಿ ಸಲ್ಲಿಸುತ್ತ ಹೋರಾಟ ನಡೆಸುತ್ತಿದ್ದರೂ ಇದೂವರೆಗೆ ಅವರ ಬೇಡಿಕೆಗಳಿಗೆ ಸ್ಪಂದನೆ ದೊರೆತಿಲ್ಲವಾದ್ದರಿಂದ ನೇಕಾರಿಕೆ ಉದ್ಯಮ ನೀರಸವಾಗೇ ಸಾಗಿದೆ.

ಕೈಮಗ್ಗ ನೇಕಾರರಿಗೆ ದೇವರೇ ದಿಕ್ಕು : ಪವರ್‌ಲೂಂ ನೇಕಾರಿಕೆಯ ಕಥೆ ಹೀಗಿದ್ದರೆ, ಕೈಮಗ್ಗ ನೇಕಾರರ ವ್ಯಥೆಭರಿತ ಬದುಕು ಊಹಿಸಲಾಗದಂತಿದೆ. ಕೈಮಗ್ಗ ಅಭಿವೃದ್ದಿ ನಿಗಮ ಕಚೇರಿ ಬನಹಟ್ಟಿಯಲ್ಲೇ ಇದೆಯಾದರೂ ಇದೂವರೆಗೆ ಕೈಮಗ್ಗ ನೇಕಾರರ ಸಮಸ್ಯೆಗೂ ತನಗೂ ಸಂಬAಧವೇ ಇಲ್ಲ ಎಂಬAತಿದೆ. ದುಡಿಯುವ ಕೈಗಳಿಗೆ ಉದ್ಯೋಗವಿಲ್ಲ. ನಿತ್ಯ ಬದುಕು ಸಾಗಿಸಲು ಹರಸಾಹಸ ಪಡುವ ಕೈಮಗ್ಗ ನೇಕಾರರು ಬೇರೆ ಉದ್ಯೋಗದತ್ತ ಮುಖ ಮಾಡಬೇಕೆಂದರೆ ಅವರಿಗೆ ನೂಲಿನ ಹೊರತಾಗಿ ಬೇರೇನೂ ಗೊತ್ತಿಲ್ಲವಾದ್ದರಿಂದ ನಿತ್ಯ ತುತ್ತಿನ ಚೀಲ ತುಂಬಿಕೊಳ್ಳಲು ಪರದಾಡುವಂತಾಗಿದೆ. ದುಡಿದ ಮಜೂರಿ ನೀಡದ, ದುಡಿಯಲೇ ಬೇಕೆಂಬ ತುಡಿತವಿರುವ ನೇಕಾರರಿಗೆ ಕಚ್ಚಾ ನೂಲು ನೀಡದ ಸರ್ಕಾರದ ನೀತಿಯಿಂದ ಕೈಮಗ್ಗ ನೇಕಾರರು ದಿಕ್ಕುತಪ್ಪಿದಂತಿದ್ದಾರೆ. ಸೂಕ್ಷö್ಮ ನೂಲಿನ ಎಳೆಯ ಕಾಯಕದಿಂದಾಗಿ ಸಣ್ಣ ವಯಸ್ಸಿನಲ್ಲೇ ದೃಷ್ಠಿದೋಷಗಳಿಂದ ನರಳುತ್ತಿರುವ ಕೈಮಗ್ಗ ನೇಕಾರರ ಬದುಕು ಬವಣೆಗಳಿಂದ ತುಂಬಿದೆ. ರಾಜ್ಯ ಸರ್ಕಾರ ಕೈಮಗ್ಗ ನೇಕಾರರಿಗೆ ನಿರಂತರ ಉದ್ಯೋಗ ಕೊಡಲು ಕೈಮಗ್ಗ ಅಭಿವೃದ್ದಿ ನಿಗಮ ಸ್ಥಾಪಿಸಿದ್ದರೂ ಬಡ ಕೈಮಗ್ಗ ನೇಕಾರರಿಗೆ ಯಾವುದೇ ನ್ಯಾಯ ದೊರಕುತ್ತಿಲ್ಲ. ಮಾರುಕಟ್ಟೆ ಕೊರತೆ ನೆಪವಿಟ್ಟುಕೊಂಡು ಸರ್ಕಾರ ನೇಕಾರರಿಗೆ ನೂಲು ವಿತರಿಸುತ್ತಿಲ್ಲ. ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿ ಸಮವಸ್ತçಕ್ಕೆ, ಶಾಲಾ ಮಕ್ಕಳ ಸಮವಸ್ತçಗಳಿಗೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಕೆಯಾಗುವುದಕ್ಕೆ ನಿಗಮದ ನೇಕಾರರ ಉತ್ಪನ್ನಗಳನ್ನು ಉಪಯೋಗಿಸದೇ ತಮ್ಮ ಹಿತಾಸಕ್ತಿಗಾಗಿ ಬೇರೆ ರಾಜ್ಯಗಳ ವಿತರಕರಿಂದ ಬಟ್ಟೆ ಖರೀದಿಗೆ ಮುಂದಾಗುವುದರಿಂದ ಕೈಮಗ್ಗ ಅಭಿವೃದ್ದಿ ನಿಗಮ ಮತ್ತದನ್ನು ನಂಬಿಕೊAಡಿರುವ ಕೈಮಗ್ಗ ನೇಕಾರರು ತಮ್ಮದಲ್ಲದ ತಪ್ಪಿಗೆ ನ್ಯಾಯಿಕವಲ್ಲದ ಶಿಕ್ಷೆ

ಅನುಭವಿಸುವಂತಾಗಿರುವದು ಅಕ್ಷರಶಃ ಸತ್ಯ!

ಕರ್ನಾಟಕದ ಮ್ಯಾಂಚೇಸ್ಟರ್ ಎಂಬ ಖ್ಯಾತಿಗೆ ಭಾಜನವಾಗಿದ್ದ ರಬಕವಿ-ಬನಹಟ್ಟಿ ಪ್ರದೇಶದಲ್ಲಿನ ನೇಕಾರರು ಇಂದು ಸಂಪೂರ್ಣ ಅತಂತ್ರರಾಗಿದ್ದಾರೆ. ನೇಕಾರನ್ನು ಕಾರ್ಮಿಕ ಇಲಾಖೆ ವ್ಯಾಪ್ತಿಗೆ ಸೇರಿಸಿದರೆ ಅವರಿಗೆ ನ್ಯಾಯೋಚಿತವಾಗಿ ಸೌಲಭ್ಯಗಳು ದೊರಕುತ್ತವೆ. ಮೂಗಿಗೆ ತುಪ್ಪ ಸವರುವ ಸರ್ಕಾರದ ಕ್ರಮದಿಂದ ನೇಕಾರಿಕೆಗೆ ಬಲ ಬರದು. ಬದಲಾಗಿ ಸರ್ಕಾರ ನೇಕಾರಿಕೆ ಉದ್ಯಮ ಉಳಿಸಲು ಕಚ್ಚಾವಸ್ತುಗಳ ಬೆಲೆ ಇಳಿಕೆ, ನೇಕಾರರಿಗೆ ಇತರೆ ರಾಜ್ಯಗಳು ಕಲ್ಪಿಸಿರುವ ಸೌಲಭ್ಯಗಳನ್ನು ನೀಡುವ ಮೂಲಕ ಕುಸಿದಿರುವ ಜವಳಿ ಉದ್ಯಮಕ್ಕೆ ಕಾಯಕಲ್ಪ ನೀಡಲು ಪ್ರಾಮಾಣಿಕ ಯತ್ನ ಮಾಡಬೇಕಿದೆ ಎಂದು ರಬಕವಿ-ಬನಹಟ್ಟಿ ನಗರಸಭೆ ಮಾಜಿ ನಗರಾಧ್ಯಕ್ಷ ಸಂಜಯ ವೀರಪ್ಪ ತೆಗ್ಗಿ ತಿಳಿಸಿದ್ದಾರೆ.  

ಬಾಗಲಕೋಟೆ: ಬರಗಾಲದ ಮಧ್ಯೆ ಬೆಳೆ ಕಾಯೋಕೆ ಹೊಲದಲ್ಲಿಯೇ ಟೆಂಟ್​ ಹಾಕಿದ ಅನ್ನದಾತರು..!

ಬಹು ವರ್ಷಗಳ ನೇಕಾರರ ಬೇಡಿಕೆಗಳಲ್ಲಿ ಒಂದಾಗಿದ್ದ ಉಚಿತ ವಿದ್ಯುತ್ ನೀಡಿಕೆಯತ್ತ ರಾಜ್ಯ ಸರ್ಕಾರ ಹೆಜ್ಜೆ ಇರಿಸಿದ್ದು, ಸ್ವಾಗತಾರ್ಹ. ಅವನತಿಯತ್ತ ಸಾಗುತ್ತಿರುವ ನೇಕಾರಿಕೆ ಉದ್ಯಮ ಉಳಿಸಲು ಪವರ್‌ಲೂಂ ಮತ್ತು ಕೈಮಗ್ಗ ಅಭಿವೃದ್ಧಿ ನಿಗಮಗಳಿಗೆ ಶಕ್ತಿ ತುಂಬಿ, ಸರ್ಕಾರದ ವಿವಿಧ ಇಲಾಖೆಗಳಿಗೆ ಬೇಕಾದ ಸಮವಸ್ತç ನಮ್ಮ ರಾಜ್ಯದ ನೇಕಾರರಿಂದಲೇ ಖರೀದಿಸುವ ಮೂಲಕ ಸರ್ಕಾರ ಉದ್ಯಮ ಉಳಿಸಲು ದಿಟ್ಟ ನಿರ್ಧಾರ ಕೈಗೊಳ್ಳಬೇಕು. ನೇಕಾರರಿಗೂ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ಸಿಗುವಂತೆ ಕ್ರಮ ವಹಿಸಬೇಕು ಆಗ ಮಾತ್ರ ಜವಳಿ ಉದ್ಯಮ ಸಕ್ಷಮಗೊಳ್ಳಲು ಸಾಧ್ಯ ಎಂದು ರಬಕವಿಯ ಹಿರಿಯ ನೇಕಾರ ಶಂಕರ ಕೊಕಟನೂರ ಹೇಳಿದ್ದಾರೆ. 

ನಾನು ಕೆಎಚ್‌ಡಿಸಿ ಅಧ್ಯಕ್ಷನಾಗಿದ್ದಾಗ ಒಂದು ದಿನವೂ ನೇಕಾರರಿಗೆ ಉದ್ಯೋಗ ತಪ್ಪದಂತೆ ಕಚ್ಚಾ ನೂಲು ಪೂರೈಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿAದ ಕೈಮಗ್ಗ ನೇಕಾರರು ಕನಿಷ್ಠ ಕೂಲಿಯಾದರೂ ಪಡೆಯುಂತಾಗಿತ್ತು. ಆದರೆ ಇದೀಗ ಹೃದಯಹೀನ ಸರ್ಕಾರ ರಾಜ್ಯದಲ್ಲಿರುವುದರಿಂದ ಬಡ ನೇಕಾರರ ಮಜೂರಿ ಹೆಚ್ಚಳಗೊಳಿಸದೇ ಈ ಹಿಂದೆ ದುಡಿದ ಮಜೂರಿ ಕೊಡದೇ ಮತ್ತು ದುಡಿಯುವ ಕೈಗಳಿಗೆ ಕೆಲಸ ನೀಡದೇ ಬಡ ಕೈಮಗ್ಗ ನೇಕಾರರು ಬದುಕಲೂ ಆಗದೇ, ಸಾಯಲೂ ಆಗದೇ ಇರುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಅಗ್ಗದ ಪ್ರಚಾರಕ್ಕೆ ಮುಂದಾಗದೇ ದುಡಿಯುವ ಕೈಗಳಿಗೆ ಕೆಲಸ ನೀಡಲು ಮುಂದಾಗಬೇಕು ಎಂದು ಮಾಜಿ ಅಧ್ಯಕ್ಷರು ಕೆಎಚ್‌ಡಿಸಿ, ಶಾಸಕ ಸಿದ್ದು ಸವದಿ ತಿಳಿಸಿದ್ದಾರೆ. 

Follow Us:
Download App:
  • android
  • ios