ಖಾಸಗಿ ವೈದ್ಯನ ನಿರ್ಲಕ್ಷ್ಯದಿಂದ ಯುವಕ ಸಾವು ಆರೋಪ ಕ್ಲಿನಿಕ್‌ ಮುಂದೆ ಶವ ಇಟ್ಟು ಯುವಕನ ಕುಟುಂಬಸ್ಥರು ಆಕ್ರೋಶ ಮಂಡ್ಯದ ವಿಸಿ ಫಾರಂ ಬಳಿ ಇರುವ ಕ್ಲಿನಿಕ್ 

ಮಂಡ್ಯ (ಆ.12):  ಖಾಸಗಿ ವೈದ್ಯನ ನಿರ್ಲಕ್ಷ್ಯದಿಂದ ಯುವಕ ಸಾವನ್ನಪ್ಪಿದ್ದಾಗಿ ಆರೋಪಿಸಿ ಕ್ಲಿನಿಕ್‌ ಮುಂದೆ ಶವ ಇಟ್ಟು ಯುವಕನ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. 

ಮಂಡ್ಯದ ಚಂದಗಾಲು ಗ್ರಾಮದ 17 ವರ್ಷದ ನಿಶಾಂತ್ ಮೃತಪಟ್ಟಿದ್ದು ಮಂಡ್ಯದ ವಿಸಿ ಫಾರಂ ಬಳಿ ಇರುವ ಕ್ಲಿನಿಕ್ ಮುಂದೆ ಶವ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ 2 ದಿನಗಳ ಹಿಂದೆ ಜ್ವರಕ್ಕಾಗಿ ಖಾಸಗಿ ಕ್ಲಿನಿಕ್ ವೈದ್ಯರೋರ್ವರ ಬಳಿ ಚುಚ್ಚುಮದ್ದು ಪಡೆದಿದ್ದ ನಿಶಾಂತ್ಗೆ ಬಳಿಕ ಜ್ವರ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿತ್ತು. 

ಶಾರ್ಟ್ ಸರ್ಕ್ಯೂಟ್ ಘೋರ ದುರಂತ ಹೇಗಾಯಿತು? ಕುಟುಂಬಸ್ಥರ ಕಣ್ಣೀರು

ಬಳಿಕ ಜ್ವರ ಹೆಚ್ಚಾದ ಹಿನ್ನೆಲೆ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಯೂ ಚಿಕಿತ್ಸೆ ಪಲಿಸದೆ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ jssಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಅದರೆ ಅಲ್ಲಿಯೂ ಚಿಕಿತ್ಸೆ ಫಲಿಸದೆ ಯುವಕ ಮೃತಪಟ್ಟಿದ್ದು, ಹೀಗಾಗಿ ಖಾಸಗಿ ಕ್ಲಿನಿಕ್ ವೈದ್ಯನ ನಿರ್ಲಕ್ಷ್ಯದಿಂದ ಹೀಗಾಗಿದೆ ಎಂದು ಆರೋಪಿಸಿ ಕ್ಲಿನಿಕ್ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಲಾಗಿದೆ. 

ಪೋಷಕರನ್ನು ಮನವೋಲಿಸಿ ಕಳುಹಿಸಿದ ಪೊಲೀಸರು ಬಳಿಕ ಮೃತ ದೇಹವನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. 

ಮಂಡ್ಯದ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.