ಬಾಗಲಕೋಟೆ (ಫೆ.15):  ವ್ಯಾಲೆಂಟೈನ್ಸ್‌ ಡೇ ದಿನ ಪ್ರೇಮಿಗಳೆಲ್ಲ ಸೇರಿ ತಮಗಿಷ್ಟವಾದ ಜಾಗದಲ್ಲಿ ಸುತ್ತಾಡಿ, ಶುಭಾಶಯ ತಿಳಿಸಿ, ಪಾರ್ಟಿ ಮಾಡಿ ಎಂಜಾಯ್‌ ಮಾಡುತ್ತಿದ್ದರೆ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ತನಗೆ ಕೊಡಿಸುವಂತೆ ಎಸ್ಪಿ ಕಚೇರಿಗೆ ಮೊರೆ ಇಟ್ಟಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 

ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದ ಶಂಭು ಎಂಬ ಯುವಕ ಹೀಗೆ ಮನವಿ ಮಾಡಿ​ರುವ ಪ್ರೇಮಿ. ಕಳೆದ 8 ವರ್ಷಗಳಿಂದ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದ ಪೂಜಾ ಎಂಬವಳನ್ನ ಪ್ರೀತಿಸುತ್ತಿದ್ದೇನೆ ನಮ್ಮಿಬ್ಬರ ಜಾತಿ ಬೇರೆಯಾಗಿರುವುದರಿಂದ ಮದುವೆ ಮಾಡಿಕೊಳ್ಳಲು ಇಬ್ಬರ ಹೆತ್ತ​ವ​ರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

ಪ್ರೀತಿ ಉಳಿಸಿಕೊಳ್ಳಲು ಐದು ಸೂತ್ರಗಳು! ...

ವ್ಯಾಲೆಂಟೈನ್‌ ಡೇಯವತ್ತು ಆಕೆಯ ಮದುವೆಯಾಗಲು ನಿರ್ಧರಿಸಿದ್ದೆ. ಇದು ಆಕೆಯ ಕುಟುಂಬ​ಸ್ಥ​ರಿಗೆ ತಿಳಿಯುತ್ತಿದ್ದಂತೆ ಪೂಜಾಳನ್ನು ಬೇರ್ಪಡಿಸಿ ಕರೆದೊಯ್ದಿದ್ದಾರೆ. ಸಾಲದ್ದಕ್ಕೆ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿ​ಸಿ​ದ್ದರು ದಯ​ವಿಟ್ಟು ನನ್ನ ಪ್ರೇಯ​ಸಿ​ಯನ್ನು ನನಗೆ ಕೊಡಿಸಿ ಎಂದು ಮನವಿ ಮಾಡಿ​ದ್ದಾನೆ.

ಇತನ ಬೆಂಬಲಕ್ಕೆ ಕೆಲವು ಸಂಘಟನೆಗಳು ನಿಂತಿದ್ದು ಪ್ರೇಮಿಗಳಿಬ್ಬರೂ ಒಂದಾಗುವಂತೆ ಸಹಕರಿಸಬೇಕೆಂದು ಯುವತಿಯ ಪೋಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.