ಲಾಕ್‌ಡೌನ್ ಉಲ್ಲಂಘನೆ: ಪ್ರಶ್ನಿಸಿದ ಪೊಲೀಸರ ಮೇಲೆ ಯುವಕರ ಹಲ್ಲೆ
ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಮೈದಾನದಲ್ಲಿ ವಾಲಿಬಾಲ್ ಆಟವಾಡುತ್ತಿದ್ದವರಿಗೆ ಬುದ್ಧಿ ಹೇಳಲು ತೆರಳಿದ ಪೊಲೀಸ್ ಪೇದೆಗಳ ಮೇಲೆ ಯುವಕರು ಹಲ್ಲೆ ನಡೆಸಿದ ಘಟನೆ ಸಿದ್ದಾಪುರ ಸಮೀಪದ ಹುಂಡಿ ಗ್ರಾಮದಲ್ಲಿ ನಡೆದಿದೆ.
ಸಿದ್ದಾಪುರ(ಏ.21): ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಮೈದಾನದಲ್ಲಿ ವಾಲಿಬಾಲ್ ಆಟವಾಡುತ್ತಿದ್ದವರಿಗೆ ಬುದ್ಧಿ ಹೇಳಲು ತೆರಳಿದ ಪೊಲೀಸ್ ಪೇದೆಗಳ ಮೇಲೆ ಯುವಕರು ಹಲ್ಲೆ ನಡೆಸಿದ ಘಟನೆ ಸಿದ್ದಾಪುರ ಸಮೀಪದ ಹುಂಡಿ ಗ್ರಾಮದಲ್ಲಿ ನಡೆದಿದೆ.
ಮಾಲ್ದಾರೆಯ ಹುಂಡಿ ಗ್ರಾಮದಲ್ಲಿ ಅದೇ ಗ್ರಾಮದ ಕೆಲವು ಯುವಕರು ತೆರೆದ ಪ್ರದೇಶದ ಮೈದಾನದಲ್ಲಿ ಲಾಕ್‌ಡೌನ್ ಉಲ್ಲಂಘಿಸಿ ವಾಲಿಬಾಲ್ ಆಟವಾಡುತ್ತಿದ್ದ ಮಾಹಿತಿ ದೊರೆತು ಸ್ಥಳಕ್ಕೆ ತೆರಳಿದ ಸಿದ್ದಾಪುರ ಪೊಲೀಸ್ ಪೇದೆಗಳಾದ ವಸಂತ, ಮಲ್ಲಪ್ಪ ಮತ್ತು ಸ್ವಾಮಿ, ಯುವಕರಿಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೊರಗೆ ಆಟವಾಡದಂತೆ ಎಚ್ಚರಿಕೆ ನೀಡಿದ್ದಾರೆ.
ಬಡವರ ನೆರವಿಗೆ ಅರ್ಧ ತಿಂಗಳ ವೇತನ ನೀಡಿದ ಪೊಲೀಸ್
ಇದರಿಂದ ಆಕ್ರೋಶಗೊಂಡ ಯುವಕರು, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಂತರ ಸ್ಥಳದಿಂದ ಪರಾರಿಯಾದರು. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಯುವಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.