ಶಿವಮೊಗ್ಗ [ಡಿ.06] : ಫೇಸ್‌ಬುಕ್‌ನಲ್ಲಿ ನಕಲಿ ಅಕೌಂಟ್‌ ತೆರೆದು ಮಹಿಳೆಯೊಬ್ಬ​ರ ಅಶ್ಲೀಲ ಫೋಟೊಗಳನ್ನು ಅಪ್‌ಲೋಡ್‌ ಮಾಡುತ್ತಿದ್ದ ಯುವಕನನ್ನು ಸಿಇಎನ್‌ ಪೊಲೀಸರು ಬಂಧಿ​ಸಿ​ದ್ದಾರೆ. 

ಹರಮಘಟ್ಟದ ಉಮೇಶ ಬಿನ್‌ ಹನುಮಂತಪ್ಪ (19) ಬಂಧಿತ ಆರೋಪಿಯಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋ​ಪಿ ಮಹಿಳೆಯ ಫೋಟೋಗಳೊಂದಿಗೆ ಅಶ್ಲೀಲ ಫೋಟೋಗಳನ್ನು ಎಡಿಟ್‌ ಮಾಡಿ ಅದನ್ನು ಅಪ್‌ಲೋಡ್‌ ಮಾಡಿ ಕಿರುಕುಳ ನೀಡುತ್ತಿದ್ದ. 

ಈ ಬಗ್ಗೆ ನೊಂದ ಮಹಿಳೆ ನೀಡಿದ ದೂರಿನ ಅನ್ವಯ ಶಿವಮೊಗ್ಗ ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾ​ಗಿತ್ತು. ಸಿಇಎನ್‌ ಕ್ರೈಂ ಪೊಲೀಸ್‌ ಠಾಣೆಯ ಪಿ.ಐ. ಗುರುರಾಜ್‌ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿ ಕಾರ್ಯಾಚಣೆ ನಡೆಸಿದ್ದು, ಸದರಿ ತಂಡ ಆರೋಪಿಯನ್ನು ಬಂಧಿ​ಸಿ​ದೆ.

ಈ ಹಿಂದೆಯೂ ಕೂಡ ಶಿವಮೊಗ್ಗದಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಯುವಕನೋರ್ವನನ್ನು ಬಂಧಿಸಲಾಗಿತ್ತು. ಇದೀಗ ಮತ್ತೊಂದು ಇಂತಹದ್ದೇ ಪ್ರಕರಣ ನಡೆದಿದೆ. ಇದೀಗ ಯುವಕನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.