Yadgir: ಜೋಳ ತೆನೆ ಬಿಡುವ ಸಿಹಿತಿನಿ ತಿಂದು ಏಂಜಾಯ್ ಮಾಡಿದ ಯುವಕರು
ಸಿಹಿತಿನಿ ಅಂದ್ರೆ ಜೋಳ ಹಾಲ್ದೆನೆ ಅಂತ ಕರೆಯುತ್ತಾರೆ. ಇದು ಚಳಿಗಾಲದಲ್ಲಿ ಕೇವಲ ಚಳಿಗೆ ಬೆಳೆಯುವ ಬೆಳೆಯಾಗಿದೆ. ಈ ಹಿಂದೆ ಹಿರಿಯರು ಜನೇವರಿ-ಪೆಬ್ರುವರಿ ಮಧ್ಯೆ ಜೋಳದ ತೆನೆ ಬಿಡುವ ವೇಳೆ ಚುಮುಚುಮ ಚಳಿಯ ಮಧ್ಯೆ ಬಿಸಿ ಕಾಯಿಸಿಕೊಳ್ಳಲು ಬೆಂಕಿ ಹಚ್ಚಿ ಅದಕ್ಕೆ ಜೋಳದ ಹಾಲ್ದೆನೆಯನ್ನು ಸುಟ್ಟು ತಿನ್ನುತ್ತಿದ್ದರು. ಇದು ಎಲ್ಲಿಲ್ಲದ ರುಚಿಯನ್ನು ಹೊಂದಿರುತ್ತದೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಫೆ.14): ಜಗತ್ತು ಮುಂದುವರೆದಿದೆ. ಬಹುತೇಕ ಯುವಕರನ್ನು ಹೊಂದಿರುವ ದೇಶ ಭಾರತ. ನಮ್ಮ ದೇಶದ ಆಸ್ತಿ ಯುವಕರು. ಈಗ ಹಲವು ದುಷ್ಚಟಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ. ಆದ್ರೆ ಹಳೆ ಕಾಲದ ಜನರು ದಷ್ಟುಪುಷ್ಟರಾಗಿರಲು ಪ್ರಮುಖ ಕಾರಣವೇ ಜವಾರಿ ಊಟ. ಕಾಲಕ್ಕೆ ತಕ್ಕಂತೆ ಬರುವ ಎಲ್ಲಾ ಹಣ್ಣು-ಹಂಪಲು, ಬೆಳೆಗಳನ್ನು ತಿನ್ನಬೇಕು ಅದು ಆರೋಗ್ಯಕ್ಕೆ ಒಳೆಯದು. ಅದಕ್ಕಾಗಿ ಈಗ ಚಳಿಗಾಲದಲ್ಲಿ ಸಿಹಿತಿನಿ ಸ್ವಾದದ ಬಗ್ಗೆ ಯುವಕರು ತಿಳಿದುಕೊಳ್ಳಬೇಕಾಗಿದೆ.
ಸಿಹಿತಿನಿ ಅಂದ್ರೆ ಏನು.? ಅದನ್ನು ಯಾವ ರೀತಿ ತಿನ್ನಬೇಕು ಗೊತ್ತಾ?
ಸಿಹಿತಿನಿ ಅಂದ್ರೆ ಜೋಳ ಹಾಲ್ದೆನೆ ಅಂತ ಕರೆಯುತ್ತಾರೆ. ಇದು ಚಳಿಗಾಲದಲ್ಲಿ ಕೇವಲ ಚಳಿಗೆ ಬೆಳೆಯುವ ಬೆಳೆಯಾಗಿದೆ. ಈ ಹಿಂದೆ ಹಿರಿಯರು ಜನೇವರಿ-ಪೆಬ್ರುವರಿ ಮಧ್ಯೆ ಜೋಳದ ತೆನೆ ಬಿಡುವ ವೇಳೆ ಚುಮುಚುಮ ಚಳಿಯ ಮಧ್ಯೆ ಬಿಸಿ ಕಾಯಿಸಿಕೊಳ್ಳಲು ಬೆಂಕಿ ಹಚ್ಚಿ ಅದಕ್ಕೆ ಜೋಳದ ಹಾಲ್ದೆನೆಯನ್ನು ಸುಟ್ಟು ತಿನ್ನುತ್ತಿದ್ದರು. ಇದು ಎಲ್ಲಿಲ್ಲದ ರುಚಿಯನ್ನು ಹೊಂದಿರುತ್ತದೆ. ಅದೇ ಜೋಳದ ಹೊಲದಲ್ಲಿರುವ ತೊಗರಿ, ಹತ್ತಿ ಕಟ್ಟಿಗೆಯಲ್ಲಿ ಒಂದು ತಗ್ಗು(ಗುಂಡಿ) ತೋಡಿ ಅದರಲ್ಲಿ ಈ ಹಾಲ್ದೆನೆಯ ಜೋಳದ ತೆನೆಗಳನ್ನು ಇಟ್ಟು ಸುಡಬೇಕು. ನಂತರ ಅದನ್ನು ಕಟ್ಟಿಗೆಯನ್ನು ಬಡಿದು ಆರಿಸಿ ತಿನ್ನಬೇಕು. ಯಾದಗಿರಿ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಈಗಲು ಹಲವು ಯುವಕರು ಸಿಹಿತಿನಿ ತಿಂದು ಏಂಜಾಯ್ ಮಾಡ್ತಿದ್ದಾರೆ.
ಖಾಲಿ ಹೊಟ್ಟೇಲಿ ಮಕ್ಕಳಿಗೆ ಈ ಫುಡ್ ಕೊಟ್ಟು, ಮ್ಯಾಜಿಕ್ ನೋಡಿ!
ಜೋಳ ತಿಂದವ ತೋಳ, ರೊಟ್ಟಿ ತಿಂದವ ಗಟ್ಟಿ!
ಉತ್ತರ ಕರ್ನಾಟಕ ಜನರ ಪೆವರೀಟ್ ಪುಡ್ ಅಂದ್ರೆ ಜೋಳದ ರೊಟ್ಟಿ. ಅದಕ್ಕಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಒಂದು ಫೇವರಿಟ್ ಗಾದೆ ಇದೆ. ಅದು ಏನಂದ್ರೆ ಜೋಳ ತಿಂದ ತೋಳ, ರೊಟ್ಟಿ ತಿಂದವ ಗಟ್ಟಿ ಎಂಬುದು. ಜೋಳ ನಂಬಿದರೆ ಬಾಳೇ ಹಸನು ಎಂಬುವ ಮಾತು ಕೂಡ ಇದೆ. ಅಂದರೆ, ಬಾಲ್ಯದಿಂದಲೂ ನವಣೆ, ಊದಲು, ಸಾಮೆ, ಸಜ್ಜೆ, ರಾಗಿ, ಜೋಳದಂಥ ಸಿರಿಧಾನ್ಯಗಳಿಂದ ತಯಾರಿಸಿದ ವೈವಿಧ್ಯಮಯವಾದ ಆಹಾರವನ್ನು ತಿನ್ನುತ್ತಿದ್ದರೆ, ನಿಜಕ್ಕೂ ಆರೋಗ್ಯ ಹಸನಾಗಿರುತ್ತೆ. ಜೋಳ ತಿಂದವ ತೋಳ ಅಂದ್ರೆ ಜೋಳ ತಿಂದರೆ ಗಟ್ಟುಮುಟ್ಟಾಗಿ ಇರಹುದು ಎಂಬುದು ಹಳ್ಳಿಗಾಡಿಗರ ಮಾತಿನ ಅರ್ಥ. ಉತ್ತರ ಕರ್ನಾಟಕದ ಜಿಲ್ಲೆಗಳಾದ ದಾರವಾಢ, ಗದಗ, ವಿಜಯಪುರ, ಭಾಗಲಕೋಟೆ, ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಬಳ್ಳಾರಿ ಜನರ ಪ್ರಮುಖ ಆಹಾರ ಪದ್ಧತಿಯೇ ಈ ಜೋಳದ ರೊಟ್ಟಿಯಾಗಿದೆ.
ರೈಲಿನಲ್ಲಿ ಕಳಪೆ ಆಹಾರ, ಮನೆಯವ್ರಿಗೂ ಇಂಥಾ ಫುಡ್ ಕೊಡ್ತೀರಾ..ಅಧಿಕಾರಿಗಳಿಗೆ ಮಹಿಳೆಯ ಕ್ಲಾಸ್
ಸಿಹಿತಿನಿ ಜೊತೆ ಬೆಲ್ಲ ಸೇರಿಸಿ ತಿಂದ್ರೆ ಸ್ವರ್ಗಕ್ಕೆ ಸಮ
ಅಗ್ನಿ(ಬೆಂಕಿ)ಯಲ್ಲಿ ಹಸಿರಿನ ಹಾಲ್ದೆನೆಯ ಜೋಳದ ತೆನೆಗಳನ್ನು ಸುಟ್ಟು ಬಡಿದುಕೊಂಡು ಅದರ ಜೊತೆ ಬೆಲ್ಲವನ್ನೂ ಸೇರಿಸಿ ಸೇವಿಸಿದ್ರೆ ಅದು ಸ್ವರ್ಗಕ್ಕೆ ಸಮನಾಗಿರುತ್ತದೆ. ಅದರ ಎಳೆಯ ಹಾಲಿನ ಕಾಳುಗಳು ರುಚಿಯ ಹುಲಿನ ಹಾಲಿನ ಸೇವನೆಗೆ ಕೂಡ ಸಮನಾಗಿರುತ್ತದೆ ಅಂತಾರೆ ಹಿರಿಯರು. ಜೋಳ ಕೊಯ್ಲಿಗೆ ಬರುವ 10-15 ದಿನಗಳ ಮುಂಚೆ ಮಾಡುವ ಹಾಲ್ದೆನೆ ಖಾದ್ಯಗಳು ಬಹಳ ವಿಶೇಷ. ಇದೊಂದು ಪೌಷ್ಠಿಕಾಂಶಯುಕ್ತ ಅಹಾರವಾಗಿದೆ. ಇದನ್ನು ಈಗಿನ ಪೀಳಿಗೆಯ ಯುವಕರು ಸೇವಿಸಲೇಬೇಕಾಗಿದೆ. ಈ ಹಾಲ್ದೆನೆಯ ಸಿಹಿತಿನಿ ಸೇವಿಸುವುದರಿಂದ ಯುವಕರು ಬಲಾಢ್ಯರಾಗುತ್ತಾರೆ. ಜೊತೆಗೆ ಇದರಿಂದ ಗ್ರಾಮೀಣ ಭಾಗದಲ್ಲಿ ಪ್ರತಿ ವರ್ಷ ಗ್ರಾಮೀಣ ಕ್ರೀಡೆಗಳಾದ ಭಾರ ಎತ್ತುವ ಸ್ಪರ್ಧೆ, ಕುಸ್ತಿ, ಕಬ್ಬಡ್ಡಿ ಸೇರಿದಂತೆ ಹಲವುಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಬಹುದು.