ಕೂಡ್ಲಿಗಿ(ಏ.05): ಕುಡಿಯಲು ಹಣಕ್ಕಾಗಿ ಪೀಡಿಸುತ್ತಿದ್ದ ಅಣ್ಣನನ್ನೇ ತಮ್ಮನು ಕೊಲೆಗೈದಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ. 

ಮಲ್ಲಿಕಾರ್ಜುನ (20) ತಮ್ಮನಿಂದ ಕೊಲೆಯಾದವರು. ಗಂಗಾಧರ ಕೊಲೆ ಆರೋಪಿ. ದುಡಿದ ಹಣವನ್ನು ಕುಡಿಯಲು ಮಲ್ಲಿಕಾರ್ಜುನ ನಿತ್ಯವೂ ತಮ್ಮನನ್ನು ಪೀಡಿಸುತ್ತಿದ್ದ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ. 

ಕೊರೋನಾಗೆ ನೂರರಲ್ಲಿ ಇಬ್ಬರು ಸತ್ತರೆ, ಕುಡಿತದ ಹಿಂತೆಗೆತಕ್ಕೆ ಒಬ್ಬರು ಸಾಯಬಹುದು!

ಇದರಿಂದ ರೋಸಿ ಹೋಗಿದ್ದ ತಮ್ಮ ಗಂಗಾಧರ ರಾತ್ರಿ ಮಲಗಿದ್ದ ವೇಳೆ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ನಡೆಸಿದ್ದಾನೆ ಎಂದು ಮೃತನ ತಾಯಿ ನಾಗರತ್ಮಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.