ಎಲ್ಲಾ ರಂಗದಲ್ಲೂ ಯುವಕರು ಉತ್ಸಾಹ ತೋರುತ್ತಿದ್ದಾರೆ: ಎಚ್. ಗೋವಿಂದ
ಯುರೋಪ್ ಮತ್ತು ಅಮೆರಿಕ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಯುವಕರು ಎಲ್ಲಾ ರಂಗದಲ್ಲಿಯೂ ಉತ್ಸುಕತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಈ ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕು ಎಂದು ರಾಜ್ಯ ಸರ್ಕಾರಿ ಉಗ್ರಾಣ ಮತ್ತು ತರಬೇತಿ ಕೇಂದ್ರದ ಶೈಕ್ಷಣಿಕ ಮತ್ತು ಹಣಕಾಸು ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಮೆಕ್ಯಾನಿಕಲ್ ವಿಭಾಗದ ಹಳೆಯ ವಿದ್ಯಾರ್ಥಿ ಎಚ್. ಗೋವಿಂದ ವತ್ಸಾ ಹೇಳಿದರು.
ತುಮಕೂರು : ಯುರೋಪ್ ಮತ್ತು ಅಮೆರಿಕ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಯುವಕರು ಎಲ್ಲಾ ರಂಗದಲ್ಲಿಯೂ ಉತ್ಸುಕತೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಈ ಮಾನವ ಸಂಪನ್ಮೂಲದ ಸದ್ಬಳಕೆಯಾಗಬೇಕು ಎಂದು ರಾಜ್ಯ ಸರ್ಕಾರಿ ಉಗ್ರಾಣ ಮತ್ತು ತರಬೇತಿ ಕೇಂದ್ರದ ಶೈಕ್ಷಣಿಕ ಮತ್ತು ಹಣಕಾಸು ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಹಾಗೂ ಮೆಕ್ಯಾನಿಕಲ್ ವಿಭಾಗದ ಹಳೆಯ ವಿದ್ಯಾರ್ಥಿ ಎಚ್. ಗೋವಿಂದ ವತ್ಸಾ ಹೇಳಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಸಮಾಗಮ-2023 ‘ಸೇತುಬಂಧ’ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬೇರೆ ದೇಶದ ಉತ್ಪನ್ನಗಳನ್ನು ಹೆಚ್ಚಾಗಿ ನಮ್ಮ ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದ್ದವು. ಆದರೆ ತಾಂತ್ರಿಕತೆ ಮತ್ತು ಆಧುನಿಕತೆಯ ಸಮರ್ಪಕ ಬಳಕೆಯಿಂದಾಗಿ ದೇಶದಲ್ಲಿ ಈಗ ರಫ್ತಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದರು.
ಬೆಂಗಳೂರಿನ ಇಸ್ರೋ ವಿಜ್ಞಾನಿ ಸಿ.ಕೆ. ಗೌರಿಶಂಕರ್ ಮಾತನಾಡಿ, ಹೆಳೆಯ ವಿದ್ಯಾರ್ಥಿಗಳ ಸಮ್ಮಿಲನವು ಎರಡನೇ ಹಂತದ ಪೀಳಿಗೆಗೆ ನಿದರ್ಶನ ಹಾಗೂ ಮಾರ್ಗದರ್ಶನವಾಗಿದೆ ಎಂದರು.
ಕ್ರಿಯಾತ್ಮವಾಗಿ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳಿಗೆ ಇಸ್ರೋದಲ್ಲಿ ವಿಫುಲವಾದ ಅವಕಾಶಗಳಿವೆ ಎಂದು ಹೇಳಿದರು.
ಪ್ರಾಂಶುಪಾಲ ಡಾ.ಎಂ.ಎಸ್. ರವಿ.ಪ್ರಕಾಶ್ ಮಾತನಾಡಿ, ಹಳೇ ಬೇರು ಹೊಸ ಚಿಗುರಿನಂತೆ ಹಳೆಯ ವಿದ್ಯಾರ್ಥಿಗಳು ಹೊಸ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಾಹೆ ರಿಜಿಸ್ಟರ್ ಡಾ.ಎಂ.ಜೆಡ್. ಕುರಿಯನ್, ಡೀನ್ ಡಾ.ಎಸ್. ರೇಣುಕಾಲತಾ, ಅಲುಮಿನಿ ಅಸೋಸಿಯೇಶನ್ ಜಂಟಿ ಕಾರ್ಯದರ್ಶಿ ಕೋಮಲ ಕೆ., ಉಪಾಧ್ಯಕ್ಷ ಡಾ.ಬಿ.ಎಸ್. ರವಿಕಿರಣ್, ಖಜಾಂಚಿ ಎಂ.ಪ್ರದೀಪ್ ಮುಂತಾದವರು ಹಾಜರಿದ್ದರು.
ನಗದು ಬಹುಮಾನ: ಪ್ರಸಕ್ತ 2022-23 ನೇ ಸಾಲಿನಲ್ಲಿ ಅಗ್ರಶೇಯಾಂಕಿತರಾದ ಮೆಕಾನಿಕಲ್ ವಿಭಾಗದ ಸಂಜಯ್ ಬಂಗೇಶ್ವರ ಹಗ್ಗಡೆ ಮತ್ತು ಅಖಿಬ್ ಖಾನ್ ಅವರಿಗೆ 1979-84 ನೇ ಸಾಲಿನ ಪ್ರಾಯೋಜಿತ ನಗದು ಪುರಸ್ಕಾರ ನೀಡಲಾಯಿತು. ಸಿವಿಲ್ ವಿಭಾಗದಲ್ಲಿ ಮೌಲ್ಯ ಮತ್ತು ಅನನ್ಯ ಅವರಿಗೆ ನಗದು ಪ್ರಶಸ್ತಿ ವಿತರಿಸಲಾಯಿತು.
ಡಾ. ಸತ್ತೂರು ರಾಘವೇಂದ್ರ ರಾವ್ ಪ್ರತಿಷ್ಠಾನದ ಪ್ರಾಯೋಜಿತ ಗೌರವಕ್ಕೆ ಅರ್ಚನಾ ಬಿ.ಎಸ್ ಮತ್ತು ಮೋಹಿತ್ ಎಂ.ಸಿ ಪಾತ್ರರಾದರು. ಪೂರ್ಣಿಮಾ ಲಕ್ಷಣ ಅವರ ಪ್ರಾಯೋಜಿತ ೨೫ ಸಾವಿರ ರು. ನಗದು ಪುರಸ್ಕಾರಕ್ಕೆ ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ವಿಭಾಗದ ಅಖಿಲಾ ಕೆ.ಎಸ್ ಮತ್ತು ಮನುಶ್ರೀ ಪಿ. ಪಾತ್ರರಾದರು. 15 ಸಾವಿರ ರು. ನಗದು ಪುರಸ್ಕಾರವನ್ನು ಲಿಖಿತಾ ಯು. ಮತ್ತು ಪಲ್ಲವಿ ಎನ್. ಅವರು ಪಡೆದರು.
ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ವೈ.ಎಂ. ರೆಡ್ಡಿ ಅವರು ಪ್ರಾಯೋಜಿತ ನಗದು ಪುರಸ್ಕಾರವನ್ನು ಮೆಕಾನಿಕಲ್ ವಿಭಾಗದ ವಿದ್ಯಾರ್ಥಿ ಸಂಜಯ್ ಬಂಗೇಶ್ವರ ಹಗ್ಗಡೆ ಗೆ ವಿತರಿಸಲಾಯಿತು.
1999ರ ಬ್ಯಾಚ್‌ನ ಎಲ್ಲ ಹಳೆ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಗೌರವಿಸಿ-ಸತ್ಕರಿಸಲಾಯಿತು. ಇದೇ ಮೊದಲ ಬಾರಿಗೆ ಕಾಲೇಜಿನ ಎಲ್ಲ ವಿಭಾಗಗಳ ಹಳೆ ವಿದ್ಯಾರ್ಥಿಗಳ ಸಮಾಗಮ ನಡೆಯಿತು. ಹೊಸ ವಿದ್ಯಾರ್ಥಿಗಳು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಯ ಜೊತೆ ಬೆರತು ತಮ್ಮ ಅವಿಸ್ಮರಣೀ ಕ್ಷಣಗಳನ್ನು ಮೆಲುಕು ಹಾಕುವಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಮುಂದಾದರು.