ಬೆಳಗಾವಿ: 100 ಅಡಿ ಪ್ರಪಾತಕ್ಕೆ ಬಿದ್ದರೂ ಬದುಕಿ ಬಂದ ಯುವಕ..!
ಗೋವಾ ಗಡಿಭಾಗದಲ್ಲಿರುವ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಚಿಕಲೆ ಫಾಲ್ಸ್ ನೋಡಲು ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದ ಮೇಲೆ ತೆರಳಿದ್ದಾನೆ. ದ್ವಿಚಕ್ರ ವಾಹನ ಮೇಲೆ ಹೋಗುತ್ತಿದ್ದಾಗ ಆಯತಪ್ಪಿ ಸುಮಾರು 100 ಅಡಿ ಪ್ರಪಾತಕ್ಕೆ ದ್ವಿಚಕ್ರ ವಾಹನ ಸಮೇತ ಬಿದ್ದಿದ್ದಾನೆ. ಮುಖ, ಕಾಲಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್ ವಿನಾಯಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬೆಳಗಾವಿ(ಫೆ.21): ಫಾಲ್ಸ್ ನೋಡಲು ಹೋದ ಯುವಕನೊರ್ವ ದ್ವಿಚಕ್ರ ವಾಹನ ಸಮೇತ 100 ಅಡಿ ಪ್ರಪಾತಕ್ಕೆ ಬಿದ್ದರೂ ಪವಾಡ ಸದೃಶ ಬದುಕಿ ಬಂದ ಘಟನೆ ಖಾನಾಪೂರ ತಾಲೂಕಿನ ಚಿಕಲೆ ಫಾಲ್ಸ್‌ನಲ್ಲಿ ಸೋಮವಾರ ನಡೆದಿದೆ.
ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದ ನಿವಾಸಿ ವಿನಾಯಕ ಬುತ್ತುಲ್ಕರ್ (26) ಪ್ರಪಾತಕ್ಕೆ ಬಿದ್ದು ರಕ್ಷಣೆಗೊಂಡ ಯುವಕ. ಗೋವಾ ಗಡಿಭಾಗದಲ್ಲಿರುವ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಚಿಕಲೆ ಫಾಲ್ಸ್ ನೋಡಲು ಸ್ನೇಹಿತರೊಂದಿಗೆ ದ್ವಿಚಕ್ರ ವಾಹನದ ಮೇಲೆ ತೆರಳಿದ್ದಾನೆ. ದ್ವಿಚಕ್ರ ವಾಹನ ಮೇಲೆ ಹೋಗುತ್ತಿದ್ದಾಗ ಆಯತಪ್ಪಿ ಸುಮಾರು 100 ಅಡಿ ಪ್ರಪಾತಕ್ಕೆ ದ್ವಿಚಕ್ರ ವಾಹನ ಸಮೇತ ಬಿದ್ದಿದ್ದಾನೆ.
ಬೆಳಗಾವಿ: ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ, ಕಾಮುಕರ ಹೆಡೆಮುರಿ ಕಟ್ಟಿದ ಪೊಲೀಸರು
ಮುಖ, ಕಾಲಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್ ವಿನಾಯಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈತನೊಂದಿಗೆ ತೆರಳಿದ್ದ ಸ್ನೇಹಿತರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಘಟನಾಸ್ಥಳಕ್ಕೆ ಆಗಮಿಸಿದ ಖಾನಾಪುರ ಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ಯುವಕನ ರಕ್ಷಣೆ ಮಾಡಲಾಗಿದೆ.