Asianet Suvarna News Asianet Suvarna News

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ: ಜೀವದ ಹಂಗು ತೊರೆದು ಅಜ್ಜಿ ರಕ್ಷಿಸಿದ ಯುವಕ..!

ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ 75 ವರ್ಷದ ಬಾಳಮ್ಮ ನಾವಲಗಿ, ಯುವಕನ ಸಾಹಸಕ್ಕೆ ಸಾರ್ವಜನಿಕರ ಮೆಚ್ಚುಗೆ

Young Man Rescued Who Old Age Woman Attempt to Suicide in Belagavi grg
Author
First Published Oct 7, 2022, 12:00 AM IST

ಬೆಳಗಾವಿ(ಅ.07):  ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ 75 ವರ್ಷದ ವೃದ್ಧೆಯನ್ನು ಯುವಕನೋರ್ವ ಜೀವದ ಹಂಗು ತೊರೆದು ನದಿಗೆ ಹಾರಿ ರಕ್ಷಿಸಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದ ಬಳಿ ನಿನ್ನೆ(ಗುರುವಾರ) ನಡೆದಿದೆ.

75 ವರ್ಷದ ಬಾಳಮ್ಮ ನಾವಲಗಿ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಇದನ್ನ ಗಮನಿಸಿದ ಅದೇ ಗ್ರಾಮದ ಐಜಾಜ್ ಮಾರಿಹಾಳ ನದಿಗೆ ಹಾರಿ ವೃದ್ಧೆ ಬಾಳಮ್ಮ ನಾವಲಗಿಯನ್ನು ರಕ್ಷಿಸಿದ್ದಾನೆ. 

ಲಕ್ಷ್ಮಣ ಸವದಿಗೆ ಸಿಎಂ ಆಗುವ ಸಾಮರ್ಥ್ಯವಿದೆ: ನಟ ವಿಜಯ ರಾಘವೇಂದ್ರ

ಅಸ್ವಸ್ಥಗೊಂಡಿದ್ದ ಅಜ್ಜಿ ಬಾಳಮ್ಮಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ. ಪಾರಿಶ್ವಾಡ ಗ್ರಾಮದ ಯುವಕ ಐಜಾಜ್ ಮಾರಿಹಾಳ ಸಾಹಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೃದ್ಧೆ ಆತ್ಮಹತ್ಯೆಗೆ ಯತ್ನಿಸಲು ನಿಖರ ಕಾರಣ ತಿಳಿದು ಬಂದಿಲ್ಲ.
 

Follow Us:
Download App:
  • android
  • ios