ರಾಮದುರ್ಗ(ಮೇ.22): ಟಿಕ್‌ಟಾಕ್ ನಲ್ಲಿ ರಾಷ್ಟ್ರೀಯ ಪಕ್ಷಿ ನವಿಲನ್ನು ಜನಪದ ಗೀತೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಬೋಚಬಾಳ ಯುವಕ ಜೈಲು ಪಾಲಾದ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಗುರುವಾರ ನಡೆದಿದೆ.

ರಾಷ್ಟ್ರೀಯ ಪಕ್ಷಿ ನವಿಲಿನ ಎಡಗಾಲಿಗೆ ಸೀರೆಯನ್ನು ಕಟ್ಟಿ ವಿಡಿಯೋ ಮಾಡಿ ಟಿಕ್ ಟಾಕ್‌ನಲ್ಲಿ ಹರಿಬಿಟ್ಟ ಬೋಚಬಾಳ ಗ್ರಾಮದ ಯುವಕ ಮಂಜು ವೆಂಕಪ್ಪ ಹೊನ್ನೊಕೊಳ್ಳ (24) ವಿರುದ್ಧ ವನ್ಯ ಜೀವಿ ಕಾಯ್ದೆ 1972 ರಡಿ ಪ್ರಕರಣ ದಾಖಲಿಸಿದ ಪ್ರಾದೇಶಿಕ ವಲಯ ಅರಣ್ಯಧಿಕಾರಿಗಳು ಆರೋಪಿಯನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

ಬೆಳಗಾವಿ: ಹೋಂ ಕ್ವಾರಂಟೈನ್ ಮಾಡದಿದ್ದರೆ ಆತ್ಮಹತ್ಯೆ ಬೆದರಿಕೆ, ತಬ್ಬಿಬ್ಬಾದ ಅಧಿಕಾರಿಗಳು..!

ಟಿಕ್ ಟಾಕ್‌ನಲ್ಲಿ ವಿಡಿಯೋ ಬಿಟ್ಟ ಕುರಿತು ಅರಣ್ಯ ಸಂಚಾರಿದಳ ಬೆಂಗಳೂರಿನಿಂದ ಬಂದ ಮಾಹಿತಿಯನ್ನಾಧರಿಸಿ ಗೋಕಾಕ ಉಪ ಅರಣ್ಯಸಂರಕ್ಷಣಾಧಿಕಾರಿಗಳು, ರಾಮದುರ್ಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಮೃತ್ಯುಂಜಯ ಗಣಾಚಾರಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಆರೋಪಿಯನ್ನು ಅವನ ಗ್ರಾಮದಲ್ಲಿ ಪತ್ತೆ ಹಚ್ಚಿಮೃತ್ಯುಂಜಯ  ಬಂಧಿಸಿದ್ದಾರೆ.  ಕಾರ್ಯಾಚರಣೆಯಲ್ಲಿ ಬಿ.ಜಿ.ಕಮತರ, ಡಿಆರ್‌ಎಫ್‌ಒ ಎಚ್.ಆರ್. ಹೊರಕೇರಿ, ಆರ್.ಎಸ್.ಹೊಸಮನಿ, ಬೋಚಬಾಳ ಅರಣ್ಯ ರಕ್ಷಕಿ ಫಾತಿಮಾ ಉಪಸ್ಥಿತರಿದ್ದರು.