ಮೈಸೂರು(ಫೆ.05): ಕೊರೋನಾ ವೈರಸ್‌ ಭೀತಿ ಕರ್ನಾಟಕದ ಗಡಿ ಭಾಗದವರೆಗೂ ವ್ಯಾಪಿಸಿರುವ ಆತಂಕ ಎದುರಾಗಿರುವಾಗಲೇ, ಕರ್ನಾಟಕದ ಕೆಲವು ಯೋಗ ಶಿಕ್ಷಕರು ಸುರಕ್ಷಿತವಾಗಿ ಹಿಂದಿರುಗಿದ್ದಾರೆ.

ಮೈಸೂರು, ನಂಜನಗೂಡು ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಮತ್ತು ಭಾರತದ ಇತರೆ ರಾಜ್ಯಗಳಿಂದ ತೆರಳಿದ್ದ ಶಿಕ್ಷಕರ ಪೈಕಿ ಕೆಲವರು ಮೊನ್ನೆಯಷ್ಟೇ ತವರಿಗೆ ಹಿಂದಿರುಗಿದ್ದಾರೆ. ಚೀನಾದ ಬೀಜಿಂಗ್‌, ಕ್ಷಾಮನ್‌ ಸಿಟಿ, ಶಾಂಗೈ ಸೇರಿದಂತೆ ವಿವಿಧೆಡೆ ಯೋಗ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ತಂಡ ರಜೆಯ ಹಿನ್ನೆಲೆಯಲ್ಲಿ ಭಾರತಕ್ಕೆ ಹಿಂದಿರುಗಿದ್ದಾರೆ.

ಹಾಡಹಗಲೇ ಸ್ವಂತ ಮಗನನ್ನು ಕಿಡ್ನ್ಯಾಪ್ ಮಾಡಿದ ತಂದೆ..!

ಕೊರೋನಾ ಭೀತಿ ಹೆಚ್ಚಾದಂತೆ ಚೀನಾ ಸರ್ಕಾರ ಅನೇಕ ಶಾಲಾ- ಕಾಲೇಜಿಗೆ ರಜೆ ಘೋಷಿಸಿದೆ. ರೋಗ ನಿಯಂತ್ರಣಕ್ಕೆ ಬರುವವರೆಗೆ ಅನಗತ್ಯವಾಗಿ ಯಾರೊಬ್ಬರೂ ಮನೆಯಿಂದ ಹೊರ ಬರದಂತೆ ಸೂಚಿಸಿದೆ. ಹೀಗೆ ಶಾಲೆಗೆ ರಜೆ ನೀಡಿರುವುದರಿಂದ ಶಿಕ್ಷಕರು ಭಾರತಕ್ಕೆ ವಾಪಸ್ಸಾಗುತ್ತಿದ್ದಾರೆ.

ಮೈಸೂರು ಸೇರಿದಂತೆ ವಿವಿಧೆಡೆಯಿಂದ ಯೋಗ ಶಿಕ್ಷಕರಾಗಿ ತೆರಳಿದ ಸುಮಾರು 25 ರಿಂದ 30 ಮಂದಿಯ ಪೈಕಿ ನಂಜನಗೂಡಿನವರೇ 10 ರಿಂದ 15 ಮಂದಿ ಇದ್ದಾರೆ. ಇವರಲ್ಲಿ ಮೊನ್ನೆ ಚೀನಾದಿಂದ ಬಂದ ರಾಜಶೇಖರ್‌ ಮಾತನಾಡಿ, ಸದ್ಯಕ್ಕೆ ಚೀನಾದಲ್ಲಿ ಕನ್ನಡಿಗರಿಗೆ ಯಾವುದೇ ಆತಂಕ ಇಲ್ಲ. ಅಲ್ಲಿನ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿ, ಅಗತ್ಯ ಸೌಲಭ್ಯ ಕಲ್ಪಿಸಿದೆ. ರಜೆ ಇರುವುದರಿಂದ ನಾವು ಊರಿಗೆ ಬಂದಿದ್ದೇವೆ.

ಸಂಪುಟದಲ್ಲಿರವರ ಬಗ್ಗೆ ಸಂಜೆ ಮಾಹಿತಿ ಬರಲಿದೆ: ಸಿಎಂ ಬಿ.ಎಸ್. ಯಡಿಯೂರಪ್ಪ

ನಾವು ಚೀನಾದಿಂದ ಹೊರಡುವಾಗ ಚೀನಾ ಏರ್‌ಪೋರ್ಟ್‌ನಲ್ಲಿ ನಮ್ಮ ದೇಹದ ಉಷ್ಣತೆ ಪರೀಕ್ಷೆ ನಡೆಸಿ, ಯಾವುದೇ ಸೋಂಕು ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ಕಳುಹಿಸಿಕೊಟ್ಟಿದ್ದಾರೆ. ಅಂತೆಯೇ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೂ ಉಷ್ಣತೆ ಪರೀಕ್ಷೆ ನಡೆಸಿದ ಬಳಿಕ ಕಳುಹಿಸಿಕೊಟ್ಟರು. ಜೊತೆಗೆ ಮಾÓ್ಕ… ಬಳಸುವುದು, ಆಗಾಗ್ಗೆ ಹ್ಯಾಂಡ್‌ ವಾಶ್‌ ಮಾಡುವಂತೆ, ಮನೆಯಿಂದ ಹೊರ ಬರದಂತೆ ಸೂಚಿಸಿದ್ದಾರೆ ಎಂದಿದ್ದಾರೆ.

ಉಳಿದ ಕೆಲವರು ಇಂದು ಅಥವಾ ಎರಡು ದಿನಗಳಲ್ಲಿ ಊರಿಗೆ ಬರಬಹುದು. ಸದ್ಯಕ್ಕಂತು ಚೀನಾದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಆನ್‌ಲೈನ್‌ ಶಾಪಿಂಗ್‌ ಅಥವಾ ಸಮೀಪದ ಸೂಪರ್‌ ಮಾರ್ಕೆಟ್‌ಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದೇವು. ಶಾಮನ್‌ ಪೂಜೇನ್‌ ಎಂಬ ಗ್ರೂಪ್‌ ಇದೆ. ಈ ಗ್ರೂಪ್‌ನಲ್ಲಿ ಭಾರತದಿಂದ ತೆರಳಿದ ನೂರಾರು ಮಂದಿ ಇದ್ದಾರೆ. ನಾವೆಲ್ಲರೂ ರಜೆ ಹಿನ್ನೆಲೆಯಲ್ಲಿ ಊರಿಗೆ ತೆರಳಲು ತೀರ್ಮಾನಿಸಿದೆವು. ಈ ಪೈಕಿ ಕೆಲವರು ಮಾತ್ರ ಹಿಂದಿರುಗಿದ್ದೇವೆ. ಇನ್ನೂ ಕೆಲವರು ಅಲ್ಲಿಯೇ ಇದ್ದಾರೆ ಎಂದಿದ್ದಾರೆ.

ಸೆಕ್ಸ್‌ಗೆ ಸಹಕರಿಸದ ಚಿಕ್ಕಮ್ಮನನ್ನೇ ಕೊಂದ ಕಾಮುಕ..!

ಚೀನಾದಲ್ಲಿ ಕೊರೋನಾ ವೈರಸ್‌ ಭೀತ ಕಡಿಮೆಯಾಗಿದೆ. ಅಲ್ಲಿನ ಸರ್ಕಾರ ಎಲ್ಲ ಕ್ರಮ ಕೈಗೊಂಡು ನಿಯಂತ್ರಣಕ್ಕೆ ತಂದಿದೆ. ನಾವು ಕೂಡ ಸುರಕ್ಷಿತವಾಗಿ ಇದ್ದೇವೆ. ಯಾವುದೇ ಭೀತಿ ಇಲ್ಲ. ಕರ್ನಾಟಕದ ಇನ್ನೂ ಕೆಲವರು ಸದ್ಯದಲ್ಲಿಯೇ ಹಿಂದಿರುಗಲಿದ್ದಾರೆ ಎಂದು ಯೋಗ ಶಿಕ್ಷಕ ರಾಜಶೇಖರ್‌ ಹೇಳಿದ್ದಾರೆ.