ಉಡುಪಿ/ಮಂಗಳೂರು(ಜೂ.06): ಉಡುಪಿ ಜಿಲ್ಲಾದ್ಯಂತ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಆದರೆ ಶುಕ್ರವಾರ ಹಗಲಿನಲ್ಲಿ ದಟ್ಟಮೋಡ ಕವಿದ ವಾತಾವರಣ ಇದ್ದರೂ ಮಳೆಯಾಗಿಲ್ಲ.

ಹವಾಮಾನ ಇಲಾಖೆ ಪ್ರಕಾರ ಕರಾವಳಿಗೆ ಮುಂಗಾರು ಮಳೆ ಪ್ರವೇಶವಾಗಿದೆ. ಜತೆಗೆ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡಿರುವ ನಿಸರ್ಗ ಚಂಡಮಾರುತದ ಫಲವಾಗಿಯೂ ವಾರದಿಂದ ಕರಾವಳಿಯಲ್ಲಿ ಉತ್ತಮ ಮಳೆಯಾಗಿದೆ. ಇನ್ನೂ 2 ದಿನಗಳಿಗೆ ಜಿಲ್ಲೆಯಲ್ಲಿ ಹಳದಿ ಎಚ್ಚರಿಕೆಯನ್ನು ಘೋಷಿಸಲಾಗಿದೆ.

50 ಸಾವಿರ ಸೋಂಕಿತರಿಂದ ತುಳುಕುತ್ತಿರುವ ಮುಂಬೈನಿಂದ ಬಂತು ಗುಡ್‌ನ್ಯೂಸ್!

ದ.ಕ.-ಬಿಸಿಲು: 2-3 ದಿನಗಳಿಂದ ಮಳೆ ಸುರಿಯುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಪ್ರವೇಶದ 2ನೇ ದಿನವಾದ ಶುಕ್ರವಾರ ಮಳೆಯೇ ಆಗದೆ ಅಚ್ಚರಿ ಮೂಡಿದೆ. ರಾಜ್ಯದಲ್ಲಿ ಗುರುವಾರವೇ ಮುಂಗಾರು ಪ್ರವೇಶವಾಗಿದ್ದರೂ ಅಷ್ಟಾಗಿ ಮಳೆಯೇ ಆಗಿರಲಿಲ್ಲ.

ಶುಕ್ರವಾರವಂತೂ ಬಿಸಿಲಿನ ವಾತಾವರಣವಿತ್ತು. ಇಡೀ ದಿನ ಹನಿ ಮಳೆಯೂ ಸುರಿದಿಲ್ಲ. ಬೇಸಗೆಯಂತೆ ಅಲ್ಪ ಸೆಕೆಯೂ ಆವರಿಸಿತ್ತು. ಇನ್ನೆರಡು ದಿನಗಳಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.