ಗದಗ(ಏ.08): ಕೋವಿಡ್‌ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಯಶವಂತಪುರ-ವಿಜಯಪುರ-ಯಶವಂತರಪುರ ಗಾಡಿ ನಂ. 06541/06542 ಏ. 10ರಿಂದ ಪುನಃ ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶ್‌ ಸಿಂಗ್‌ ಬ್ಯಾಳಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈಲು ಪ್ರಾರಂಭಿಸಲು ಅನೇಕ ಬಾರಿ ಮನವಿ ನೀಡಲಾಗಿತ್ತು. ಸದ್ಯ ರೈಲು ಸಂಚಾರ ಪ್ರಾರಂಭವಾಗಿದ್ದು, ಈ ಗಾಡಿ ಗದಗ-ಬೆಟಗೇರಿಯಿಂದ ಬೆಳಗ್ಗೆ 7ಕ್ಕೆ ಹೊರಡಲಿದೆ. 

ವೈರಸ್‌ ಕಾಟ: ಕೊರೋನಾ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ, ಸಚಿವ ಪಾಟೀಲ್‌

ಇದು ಎಕ್ಸ್‌ಪ್ರೆಸ್‌ ಗಾಡಿ ಆಗಿರುವುದರಿಂದ ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್‌ ದೊರೆಯುವಂತೆ ಮಾಡಿದರೆ ಅನುಕೂಲವಾಗುತ್ತದೆ ಎಂದು ಬ್ಯಾಳಿ ಮನವಿ ಮಾಡಿದ್ದಾರೆ.