ಮೈಸೂರಿನಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ಶರನ್ನವರಾತ್ರಿಯ ಏಳನೇ ದಿನವಾದ ಶನಿವಾರ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅರಮನೆಯಲ್ಲಿ ಸರಸ್ವತಿ ಪೂಜೆ ನೆರವೇರಿಸಿದ್ದಾರೆ.

ಮೈಸೂರು(ಅ.06): ಶರನ್ನವರಾತ್ರಿಯ ಏಳನೇ ದಿನವಾದ ಶನಿವಾರ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅರಮನೆಯಲ್ಲಿ ಸರಸ್ವತಿ ಪೂಜೆ ನೆರವೇರಿಸಿದ್ದಾರೆ.

Add Asianetnews Kannada as a Preferred SourcegooglePreferred

ಶನಿವಾರ ಬೆಳಗ್ಗೆ 10.45 ರಿಂದ 11.15ರವರೆಗಿನ ಶುಭ ಲಗ್ನದಲ್ಲಿ ಯದುವೀರ್‌ ಅವರು ಕನ್ನಡಿ ತೊಟ್ಟಿಯಲ್ಲಿ ಸರಸ್ವತಿಪೂಜೆ ನೆರವೇರಿಸಿದರು. ವಿದ್ಯಾದೇವತೆ ಸರಸ್ವತಿ ಮಾತೆಯ ಭಾವಚಿತ್ರದ ಮುಂಭಾಗದಲ್ಲಿ ಗ್ರಂಥಭಂಡಾರ, ವೀಣೆಗಳನ್ನಿರಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ದಸರಾ ಪಾಸ್ ಗೊಂದಲ; ಇರೋದ್ರಲ್ಲೇ ಎಲ್ಲ ಸರಿದೂಗಿಸ್ಬೇಕು: ಸೋಮಣ್ಣ

ಖಾವಿಧಾರಿಯಾಗಿ ರಾಜವಂಶಸ್ಥ ಯದುವೀರ್‌ ಅವರು ರಾಜಪುರೋಹಿತರ ಸಮಕ್ಷಮದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಸರಸ್ವತಿ ಪೂಜೆ ನೆರವೇರಿಸಿದರು. ಬಳಿಕ ಮೈಸೂರು ರಾಜಮನೆತನದ ಕುಲದೇವತೆ ಚಾಮುಂಡೇಶ್ವರಿ ಅಮ್ಮನವರಿಗೂ ವಿವಿಧ ಬಗೆಯ ಆರತಿಗಳನ್ನು ಬೆಳಗಿ, ವಿಶೇಷ ಪೂಜೆ ಸಲ್ಲಿಸಿದರು. ಸಂಜೆ ಖಾಸಗಿ ದರ್ಬಾರ್‌ ನಡೆಸಿದ್ದಾರೆ.

ಗಜಪಡೆ ಹಾಗೂ ಪೊಲೀಸ್ ತುಕಡಿಗಳಿಗೆ ತಾಲೀಮು ನಡೆದಿದ್ದು, ಇತರ ಆಚರಣೆಗಳೂ ಸಂಭ್ರಮದಿಂದ ನಡೆಯುತ್ತಿವೆ.

ಮೈಸೂರು: ಗಜಪಡೆ, ಪೊಲೀಸ್ ತುಕಡಿ ತಾಲೀಮು