Asianet Suvarna News Asianet Suvarna News

ಹೆಣ್ಣಿನ ಅಭಿರುಚಿಯನ್ನು ಗೌರವಿಸಬೇಕು: ಕೃಷ್ಣಪ್ಪ

ಸಮಾಜದ ಕಣ್ಣಾಗಿರುವ ಹೆಣ್ಣಿಗೆ ಗೌರವ ನೀಡಬೇಕು. ಅವಳ ಭಾವನೆಗೆ ಬೆಲೆ ನೀಡಬೇಕು. ಆಕೆಯ ಅಭಿರುಚಿಯನ್ನು ಗೌರವಿಸಿ ಪ್ರೋತ್ಸಾಹಿಸಬೇಕು. ಆಗಲೇ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಹೇಳಿದರು.

Womens taste should be respected: Krishnappa snr
Author
First Published Jan 13, 2024, 10:18 AM IST

  ತುರುವೇಕೆರೆ :  ಸಮಾಜದ ಕಣ್ಣಾಗಿರುವ ಹೆಣ್ಣಿಗೆ ಗೌರವ ನೀಡಬೇಕು. ಅವಳ ಭಾವನೆಗೆ ಬೆಲೆ ನೀಡಬೇಕು. ಆಕೆಯ ಅಭಿರುಚಿಯನ್ನು ಗೌರವಿಸಿ ಪ್ರೋತ್ಸಾಹಿಸಬೇಕು. ಆಗಲೇ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಹಿಳೆ ಎಲ್ಲಾ ಕ್ಷೇತ್ರಗಳಲ್ಲೂ ಸಮಾನವಾಗಿ ದುಡಿಯುತ್ತಿದ್ದಾಳೆ. ಹೆಚ್ಚು ವಿದ್ಯಾವಂತರಾಗುತ್ತಿರುವ ಮಹಿಳೆಯರು ಕುಟುಂಬದ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲೂ ಸಹಕಾರಿಯಾಗುತ್ತಿದ್ದಾರೆ. ಕುಟುಂಬದ ನಿರ್ವಹಣೆ ಹೆಣ್ಣಿನ ಕೈಲಿದ್ದರೆ ಸಂಸಾರ ಸುಖೀ ಸಂಸಾರವಾಗಿರುತ್ತದೆ. ಕುಟುಂಬದ ನಿರ್ವಹಣೆಯಲ್ಲಿ ಮಹಿಳೆಯರದ್ದು ಪಾತ್ರ ಹಿರಿದು. ಪುರುಷರು ತಮ್ಮ ಕುಟುಂಬದಲ್ಲಿರುವ ಮಹಿಳೆಯರ ಭಾವನೆಗೆ ಗೌರವ ನೀಡಿದಾಗ ಮಾತ್ರ ನೆಮ್ಮದಿಯ ವಾತಾವರಣ ಇರಲಿದೆ ಎಂದರು.

ಸಂಸ್ಥೆಯ ಜಿಲ್ಲಾ ನಿರ್ದೇಶಕಿ ದಯಾಶೀಲಾ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಮಾಜದ ಎಲ್ಲಾ ಸ್ಥರದ ಜನರಿಗೂ ವಿವಿಧ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಮಹಿಳೆಯರನ್ನು ಸಮಾಜಮುಖಿಯನ್ನಾಗಿಸಲು ಮುಂದಾಗಿದೆ. ಕಾನೂನು ಅರಿವು, ವಿದ್ಯಾರ್ಜನೆಯ ಕುರಿತು ಜಾಗೃತಿ, ಆರ್ಥಿಕ ಸಬಲೀಕರಣಕ್ಕೆ ಅಗತ್ಯವಿರುವ ಮಾಹಿತಿ ನೀಡುತ್ತಿದೆ. ಸಮಾಜದಲ್ಲಿ ಅಸಹಾಯಕರಾಗಿರುವ ವೃದ್ಧರು, ವಿದ್ಯಾರ್ಥಿಗಳಿಗೂ ನೆರವು ನೀಡುತ್ತಿದೆ ಎಂದು ಹೇಳಿದರು.

ಉಪನ್ಯಾಸಕಿ ರೂಪಾಶ್ರೀ ಈ ಸಂಧರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಕೀಲ ಪಿ.ಎಚ್. ಧನಪಾಲ್, ಇನ್ನರ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ಲತಾ ಪ್ರಸನ್ನ ಕುಮಾರ್, ಉಪನ್ಯಾಸಕ ಎಚ್.ಬಿ. ಪ್ರಕಾಶ್ ಸಂಧ್ಯಾ, ಕ್ಷೇತ್ರ ಯೋಜನಾಧಿಕಾರಿ ಯಶೋಧರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. 

Latest Videos
Follow Us:
Download App:
  • android
  • ios