ಮಹಿಳಾ ರಕ್ಷಣಾ ಕಾನೂನು ಪುರುಷರ ದ್ವೇಷಕ್ಕೆ ಬಳಕೆ : ಡಾ.ಟಿ.ಸಿ. ಪೂರ್ಣಿಮಾ

ಮಹಿಳೆಯರ ರಕ್ಷಣೆಗಾಗಿ ನೀಡಿರುವ ಕಾನೂನುಗಳನ್ನು ಪುರುಷರ ಮೇಲಿನ ದ್ವೇಷಕ್ಕೆ ಬಳಸಿಕೊಳ್ಳುವುದು ನಿಲ್ಲಬೇಕು ಎಂದು ಕೇಂದ್ರ ಸಂವಹನ ಇಲಾಖೆ ಉಪ ನಿರ್ದೇಶಕಿ ಡಾ.ಟಿ.ಸಿ. ಪೂರ್ಣಿಮಾ ಅಭಿಪ್ರಾಯಪಟ್ಟರು.

Women s protection law used to hate men  snr

  ಮೈಸೂರು :  ಮಹಿಳೆಯರ ರಕ್ಷಣೆಗಾಗಿ ನೀಡಿರುವ ಕಾನೂನುಗಳನ್ನು ಪುರುಷರ ಮೇಲಿನ ದ್ವೇಷಕ್ಕೆ ಬಳಸಿಕೊಳ್ಳುವುದು ನಿಲ್ಲಬೇಕು ಎಂದು ಕೇಂದ್ರ ಸಂವಹನ ಇಲಾಖೆ ಉಪ ನಿರ್ದೇಶಕಿ ಡಾ.ಟಿ.ಸಿ. ಪೂರ್ಣಿಮಾ ಅಭಿಪ್ರಾಯಪಟ್ಟರು.

ನಗರದ ಜೆಎಸ್‌ಎಸ್‌ ಆಸ್ಪತ್ರೆ ಆವರಣದ ಶ್ರೀ ರಾಜೇಂದ್ರ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರ ಘಟಕ ಮತ್ತು ಕದಳಿ ಮಹಿಳಾ ವೇದಿಕೆಯು ಭಾನುವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯನ್ನು ಅವರು ಉದ್ಘಾಟಿಸಿ ಉಪನ್ಯಾಸ ನೀಡಿದರು.

ಮಹಿಳೆಯರಿಗೆ ಇಂದು ಆಯ್ಕೆಯ ಹಕ್ಕು ಇದೆ. ಈ ಹಿಂದೆ ನಮ್ಮ ಸಾಂಸ್ಕೃತಿಕ ಪರಂಪರೆಯ ಮೇಲೆ ದಾಳಿ ಆಯಿತು. ಆದ್ದರಿಂದ ನಮ್ಮ ಪೂರ್ವಜರು ನಮ್ಮನ್ನು ರಕ್ಷಿಸಿದರು. ಆದರೆ ಸ್ತ್ರೀ ಸ್ವತಂತ್ರ್ಯಕ್ಕೆ ಅರ್ಹಳಲ್ಲ ಎಂಬ ತ್ರಿಪದಿಯ ಕೊನೆಯ ಸಾಲನ್ನು ಮಾತ್ರ ಹೇಳಿ ಪರಂಪರೆಯನ್ನು ಅವಮಾನಿಸಲಾಗುತ್ತಿದೆ ಎಂದರು.

ಆದರೆ ಸ್ವಾತಂತ್ರ್ಯ ಎಂಬುದು ಸ್ವೇಚ್ಛಾಚಾರದ ಸಂಕೇತವಲ್ಲ ಎಂಬುದು ಗೊತ್ತಿತ್ತು. ಆದರೆ ನಮ್ಮ ಭಾರತೀಯ ಸಂಸ್ಕೃತಿಯು ಮಹಿಳೆಗೆ ನೀಡಿದಷ್ಟುಆದ್ಯತೆಯನ್ನು ಬೇರೆ ಯಾವ ಸಂಸ್ಕೃತಿಯೂ ನೀಡಿಲ್ಲ. ಇತ್ತೀಚಿನ ದಿನಗಳಲ್ಲಿ ಪುರುಷರ ಮೇಲೆ ಮಹಿಳೆಯರು ನಡೆಸುವ ದಾಳಿ ಹೆಚ್ಚಾಗಿದೆ. ಮಹಿಳೆಯರು ತಮ್ಮ ಸಮಸ್ಯೆ ಪರಿಹಾರಕ್ಕೆ ಮತ್ತು ರಕ್ಷಣೆಗೆ ಮಾತ್ರ ಇರುವ ಕಾನೂನನ್ನು ಪುರುಷರ ಮೇಲೆ ದಾಳಿಗೆ ಬಳಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ಮಹಿಳೆಯರಿಗಾಗಿ ನೀಡಿದ ಕಾನೂನಿನ ಅಸ್ತ್ರ ದುರ್ಬಳಕೆ ಆಗಬಾರದು. ಏಕೆಂದರೆ ನಾನು ಮಹಿಳೆಯರ ಸಮಸ್ಯೆಗಳನ್ನು ಎಷ್ಟುನೋಡಿದ್ದೇನೋ, ಪುರುಷರ ಸಮಸ್ಯೆಯನ್ನೂ ಅಷ್ಟೇ ನೋಡಿದ್ದೇನೆ. ಧರ್ಮವನ್ನು ಆಧರಿಸಿ ನ್ಯಾಯ ನಿಲ್ಲಬೇಕು. ನಮ್ಮ ಸಾಂಸ್ಕೃತಿಕ ಜಗತ್ತಿನಲ್ಲಿ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾದ ಶಕ್ತಿ ಹೆಣ್ಣಿನಲ್ಲಿದೆ. ವಿಶ್ವಮಾತೆ ಎಂದು ಆಕೆಯನ್ನು ಕರೆಯುತ್ತೇವೆ ಎಂದರು.

ನಾವು ನಮ್ಮ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣವು ದುಡ್ಡಿನ ಶಿಕ್ಷಣವಾಗಿದೆಯೇ ಹೊರತು ಜ್ಞಾನ ಕೇಂದ್ರಿತವಾಗಿಲ್ಲ. ನಾವು ಗುಣಮಟ್ಟದ ಶಿಕ್ಷಣದ ಕಡೆಗೆ ನೋಡುತ್ತಿಲ್ಲ. ಆರ್ಥಿಕ ಸಮಾನತೆಗೆ ಆಯ್ದಕ್ಕಿ ಲಕ್ಕವ್ವ ಉತ್ತಮ ಉದಾಹರಣೆ. ಕೂಡಿಡಬಾರದು ಮತ್ತು ಕುಳಿತು ತಿನ್ನಬಾರದು ಎಂಬುದನ್ನು ಹೇಳಿಕೊಟ್ಟಮಹಾಶರಣೆ ಎಂದು ಅವರು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಂ.ಎ. ನೀಲಾಂಬಿಕಾ ಅವರನ್ನು ಸನ್ಮಾನಿಸಲಾಯಿತು. ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಕೆ.ಸಿ. ದಿವ್ಯಶ್ರೀ, ಶರಣ ಸಾಹಿತ್ಯ ಪರಿಷತ್ತು ನಗರಾಧ್ಯಕ್ಷ ಮ.ಗು. ಸದಾನಂದಯ್ಯ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ ಇದ್ದರು.

-- ಮಕ್ಕಳನ್ನು ಸಶಕ್ತಗೊಳಿಸಿ--

ತಾಯಿ ಆದವಳು ತನ್ನ ಮಗುವಿಗೆ ಅನ್ನ, ಹಾಲಿನ ಜೊತೆಗೆ ಮನೋಭಾವವನ್ನೂ ಉಣಿಸುತ್ತಾಳೆ. ಆ ಮನೋಭಾವದ ಮೂಲಕ ಮುಂದಿನ ಪೀಳಿಗೆಯಿಂದಲೂ ಭಾರತೀಯತೆ ಉಳಿಸಿಕೊಳ್ಳಬೇಕು. ಇದಕ್ಕಾಗಿ ಭವಿಷ್ಯದ ಮಕ್ಕಳನ್ನು ಸಶಕ್ತಗೊಳಿಸಬೇಕು. ಹೆಣ್ಣಿಗೆ ಈ ಜವಾಬ್ದಾರಿ ಹೆಚ್ಚಿದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯ- ಮನುಷ್ಯರ ನಡುವಿನ ಬಾಂಧವ್ಯಕ್ಕಿಂತಲೂ ದುಡ್ಡಿನ ಮೌಲ್ಯ ಹೆಚ್ಚಾಗುತ್ತಿದೆ. ಒಗ್ಗೂಡುವಿಕೆ ಕಡಿಮೆ ಆಗುತ್ತಿದೆ. ನಾವು ಈಗಿಂದಲೇ ಎಲ್ಲರೊಂದಿಗೆ ಬೆರೆಯುವ ಮತ್ತು ಒಗ್ಗೂಡುವ ಅಭ್ಯಾಸವನ್ನು ಮಕ್ಕಳಿಗೆ ಕಲಿಸಬೇಕು ಎಂದು ಡಾ.ಟಿ.ಸಿ. ಪೂರ್ಣಿಮಾ ಹೇಳಿದರು.

Latest Videos
Follow Us:
Download App:
  • android
  • ios