Asianet Suvarna News Asianet Suvarna News

ಆಲಮಟ್ಟಿ: ನದಿಗೆ ಹಾರಿದ ಮಹಿಳೆ, ಬುರ್ಖಾ​ದಿಂದ ಸಾವಿನ ದವಡೆಯಿಂದ ಪಾರು!

ಸಿನಿ​ಮೀಯ ರೀತಿ​ಯಲ್ಲಿ ಬದು​ಕು​ಳಿದ ಆತ್ಮಹತ್ಯೆಗೆ ಯತ್ನಿಸಿದ ಬುರ್ಖಾ​ಧಾರಿ ಮಹಿಳೆ| ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ನಡೆದ ಘಟನೆ|  ನೀರು ಪಾಲಾದ ಐದು ವರ್ಷದ ಮಗಳು|
 

Women Attempt to Suicide in Alamatti in Vijayapura District
Author
Bengaluru, First Published Jan 22, 2020, 11:27 AM IST
  • Facebook
  • Twitter
  • Whatsapp

ಆಲಮಟ್ಟಿ[ಜ.22]: ಇಲ್ಲಿನ ಪಾರ್ವತಿ ಕಟ್ಟಾರೈಲ್ವೆ ಸೇತುವೆ ಮೇಲಿಂದ ಚಲಿಸುತ್ತಿರುವ ರೈಲಿನಿಂದ ಕೃಷ್ಣಾ ನದಿಗೆ ಹಾರಿದ ಬುರ್ಖಾ​ಧಾರಿ ಮಹಿಳೆಯೊಬ್ಬಳು ಸಿನಿ​ಮೀಯ ರೀತಿ​ಯಲ್ಲಿ ಬದು​ಕು​ಳಿದ ಘಟನೆ ಮಂಗಳವಾರ ನಡೆದಿದೆ. ಆದರೆ ಅದೇ ಸಂದ​ರ್ಭ​ದಲ್ಲಿ ಆಕೆ ಎಸೆದ ತನ್ನ ಐದಾರು ವರ್ಷದ ಹೆಣ್ಣುಮಗು ಮೃತ​ಪ​ಟ್ಟಿದೆ.

ಅಂದಾಜು 28 ವರ್ಷದ ಮಹಿಳೆ ಮಂಗಳವಾರ ಮಧ್ಯಾಹ್ನ ರೈಲಿನಿಂದ ಸಾಯುವ ಉದ್ದೇಶದಿಂದ ಸೇತುವೆ ಮೇಲಿಂದ ಹಾರಿ​ದ್ದಾಳೆ. ಆದರೆ ಆಕೆ ಬುರ್ಖಾ ಧರಿ​ಸಿ​ದ್ದ​ರಿಂದ ಅದು ಗಾಳಿಯ ರಭಸಕ್ಕೆ ಬಲೂ​ನಿ​ನಂತೆ ಗಾಳಿ ​ತುಂಬಿ​ಕೊಂಡು ನೀರೊಳಗೆ ಆ ಮಹಿ​ಳೆ​ಯನ್ನು ತೇಲು​ವಂತೆ ಮಾಡಿದೆ. ತಕ್ಷಣವೇ ಅಲ್ಲಿಯೇ ಇದ್ದ ಮೀನುಗಾರರು ಆಕೆಯನ್ನು ತೆಪ್ಪದಲ್ಲಿ ನದಿಯ ದಡಕ್ಕೆ ಸುರ​ಕ್ಷಿ​ತ​ವಾಗಿ ಸಾಗಿ​ಸಿ​ದ್ದಾರೆ. ಆದರೆ ಆ ಮಹಿಳೆ ಪರಿ​ಪ​ರಿ​ಯಾಗಿ ಬೇಡಿ​ಕೊಂಡ ಕಾರಣ ಆಕೆ​ಯನ್ನು ಪೊಲೀ​ಸ​ರಿಗೆ ಒಪ್ಪಿ​ಸದೆ ಹಾಗೆ ಬಿಟ್ಟಿ​ದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಹಿಳೆ ನದಿಗೆ ಬೀಳುವ ಮುನ್ನ ತನ್ನ ಐದಾರು ವರ್ಷದ ಮಗ​ಳನ್ನೂ ಸಹಿತ ನದಿಗೆ ಎಸೆದಿದ್ದಾಳೆ. ಪುತ್ರಿ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ. ಆಕೆಯನ್ನು ದಂಡೆಗೆ ಕರೆ ತಂದ ಮೀನುಗಾರರಾದ ನಾಗರಾಜ ಕಟ್ಟಿಮನಿ, ಶಿವಾಜಿ ಸಾಳೆ ರಾಮಕೃಷ್ಣ ಸಾಳೆ ತೇಲುತ್ತಿದ್ದ ಮಹಿಳೆಯನ್ನು ದಂಡೆಗೆ ತಂದಿರುವುದಾಗಿ ತಿಳಿಸಿದರು. ಆಕೆ ಎಲ್ಲಿ​ಯ​ವಳು?, ಹೆಸ​ರೇನು? ಎಂಬ ಯಾವುದೇ ಮಾಹಿತಿ ಲಭ್ಯ​ವಿ​ಲ್ಲ.

ಈ ಕುರಿತು ಸ್ಥಳೀಯ ಪೊಲೀ​ಸ್‌ ಠಾಣೆ​ಯಲ್ಲಿ ಯಾವುದೇ ಪ್ರಕ​ರಣ ದಾಖ​ಲಾ​ಗಿಲ್ಲ.

Follow Us:
Download App:
  • android
  • ios