ಶಿವಮೊಗ್ಗ(ಫೆ. 04) ನಾಪತ್ತೆಯಾಗುವ ಯುವತಿಯರು ಪತ್ತೆಯಾದ ತಕ್ಷಣ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಬಹುತೇಕರು ಗರ್ಭಿಣಿಯಾಗುತ್ತಿರುವುದು ಕಂಡುಬರುತ್ತಿದೆ ಎಂಬ ಆತಂಕಕಾರಿ ಅಂಶ ಬಯಲಿಗೆ ಬಂದಿದೆ.

 ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಆತಂಕಕಾರಿ ಅಂಶ ಬಯಲಿಗೆ ಬಂದಿದೆ.  ಸಭೆಗೆ ಹಾಜರಿದ್ದ ಆಪ್ತಸಮಾಲೋಚಕರೊಬ್ಬರು ಆತಂಕದ ಅಂಶ ತೆರೆದಿಟ್ಟರು.

ಮಹಿಳೆ ಮತ್ತು ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾ ಸಂಸ್ಥೆಗಳು ನೀಡುವ ದೂರುಗಳ ಸಂದರ್ಭದಲ್ಲಿ ಎಫ್‌ಐಆರ್‌ ದಾಖಲಿಸಲು ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲವ್-ಸೆಕ್ಸ್-ದೊಖಾ: ಯುವತಿಯ ಪ್ರಾಣವನ್ನೇ ಬಲಿಪಡೆದ ಖಾಸಗಿ ಕ್ಷಣಗಳ ವಿಡಿಯೋ

ನಡೆಸಿ, ಜಿಲ್ಲೆಯಲ್ಲಿನ 37 ಮಕ್ಕಳ ಪಾಲನಾ ಸಂಸ್ಥೆಗಳಲ್ಲಿನ ಮೂಲಸೌಕರ್ಯ ಪರಿಶೀಲಿಸಬೇಕು. ಇಲ್ಲಿ ಮಕ್ಕಳ ಹಕ್ಕುಗಳ ಚ್ಯುತಿ ದೂರು ಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ದತ್ತು ಕೇಂದ್ರ ಸ್ಥಾಪಿಸುವ ಪ್ರಸ್ತಾವ ಅನುಮೋದನೆಗಾಗಿ ಸಮಿತಿ ಮುಂದಿರಿಸುವಂತೆ ಸೂಚನೆ ನೀಡಿದರು.

ಬಾಲ್ಯವಿವಾಹ ತಡೆ: ಜಿಲ್ಲೆಯಲ್ಲಿ ಬಾಲ್ಯವಿವಾಹ ತಡೆಗೆ ಕ್ರಮ ಕೈಗೊಳ್ಳಬೇಕು. ನಂತರ ಆ ಮಕ್ಕಳು ಶಾಲೆಗೆ ಹೋಗುವುದನ್ನು ಖಾತ್ರಿಪಡಿಸಿಕೊಳ್ಳ​ಬೇ​ಕು. ಬಾಲ್ಯ ವಿವಾಹ ತಡೆ ಕುರಿತು ದೇವಸ್ಥಾನ, ಮಸೀದಿ, ಕಲ್ಯಾಣ ಮಂಟಪದಲ್ಲಿ ಅರಿವು ಮೂಡಿಸಬೇಕು. ಜಿಲ್ಲೆಯಲ್ಲಿ 2019ನೇ ಸಾಲಿನಲ್ಲಿ ಬಾಲ್ಯ ವಿವಾಹ ಬಗ್ಗೆ 75 ದೂರು ಸ್ವೀಕರಿಸಲಾಗಿದ್ದು, 48 ಬಾಲ್ಯ ವಿವಾಹ ತಪ್ಪಿಸಲಾಗಿದೆ. ಇನ್ನುಳಿದಂತೆ 21 ಬಾಲಕಿಯರ ಹಾಗೂ 2 ಬಾಲಕರ ವಿವಾಹ ನಡೆದಿದ್ದು ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಕ್ಕಳ ಜಿಲ್ಲಾ ರಕ್ಷಣಾಧಿಕಾರಿ ಗಂಗಾಬಾಯಿ ಮಾಹಿತಿ ನೀಡಿದರು.

ಕೌಟುಂಬಿಕ ಹಿಂಸೆ ಪ್ರಕರಣ: ಜಿಲ್ಲೆಯಲ್ಲಿ ಕಳೆದ ಸೆಪ್ಟೆಂಬರ್‌ನಿಂದ ಡಿಸೆಂಬರೆಗೆ 118 ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಾಗಿದ್ದು, 55 ಪ್ರಕರಣ ಸಮಾಲೋಚನೆ ಮೂಲಕ ಇತ್ಯರ್ಥಪಡಿಸಲಾಗಿದೆ. ಪ್ರಕರಣ ಕೂಲಂಕುಶವಾಗಿ ಪರಿಶೀಲಿಸಿ ನೊಂದ ಮಹಿಳೆಗೆ ನ್ಯಾಯ ದೊರಕುವಂತೆ ನೋಡಿಕೊಳ್ಳಬೇಕು ಜಿಲ್ಲಾ​ಧಿ​ಕಾರಿ ಶಿವ​ಕು​ಮಾರ್‌ ತಿಳಿ​ಸಿ​ದ​ರು.

ಸ್ವಧಾರ ಗೃಹ ಪರಿಶೀಲನೆ: ಸಂಕಷ್ಟದಲ್ಲಿರುವ ಮಹಿಳೆಯರಿಗೆ ತಾತ್ಕಾಲಿಕ ಪುನರ್ವಸತಿ ನೀಡುವ ಸ್ವಧಾರ ಗೃಹ ಕಾರ್ಯವೈಖರಿ ಪರಿಶೀಲಿಸಬೇಕು. ಪುನರ್ವಸತಿ ಕಾರ್ಯಗಳು, ಸ್ವಾವಲಂಬಿಯಾಗಿ ಬದುಕಲು ಕೈಗೊಂಡಿರುವ ತರಬೇತಿ ಕಾರ್ಯಗಳ ಪರಿಶೀಲನೆ ನಡೆಸಬೇಕು ಎಂದು ಅವರು ಹೇಳಿದರು.

ಮಕ್ಕಳ ದತ್ತು ಪ್ರಕರಣ: ಮಕ್ಕಳ ದತ್ತು ಪ್ರಕರಣಗಳಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಪ್ರತಿ ಪ್ರಕರಣ ಮಕ್ಕಳ ಕಲ್ಯಾಣ ಸಮಿತಿ ಪರಿಶೀಲಿಸಬೇಕು ಎಂದು ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಈರಣ್ಣ ಪಾಂಚಾಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಯೋಜನಾ ನಿರ್ದೇಶಕ ವೀರಾಪುರ ಸೇರಿ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.