ಮದ್ದೂರು (ಫೆ.03):  ದುಷ್ಕರ್ಮಿಗಳು ಗೃಹಣಿಯನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ಪಟ್ಟಣದ ಸರ್‌ ಎಂ.ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮಂಗಳವಾರ ನಡೆದಿದೆ.

ವಿವಿ ನಗರ 9ನೇ ಕ್ರಾಸ್‌ ನಿವಾಸಿ ಬಿಳಿಯಪ್ಪ ಪತ್ನಿ ಪೂರ್ಣಿಮಾ(39) ಅವರ ಕೈಕಾಲು ಕಟ್ಟಿಅತ್ಯಾಚಾರ ನಡೆಸಿದ ನಂತರ ತಲೆದಿಬ್ಬಿನಿಂದ ಉರುಸಿಗಟ್ಟಿಸಿ ಸಾಯಿಸಿ ಪರಾರಿಯಾಗಿದ್ದಾರೆ.

ಮೂಲತಃ ಚನ್ನೇಗೌಡ ಬಡಾವಣೆಯಲ್ಲಿ ವಾಸವಾಗಿದ್ದ ಬಿಳಿಯಪ್ಪ ಹಾಗೂ ಪೂರ್ಣಿಮಾ ದಂಪತಿ ಸ್ವಂತ ಮನೆ ನಿರ್ಮಾಣ ಮಾಡುತ್ತಿದ್ದ ಕಾರಣ 11 ತಿಂಗಳಿಂದ ಸರ್‌ ಎಂ.ವಿಶ್ವೇಶ್ವರಯ್ಯ 9ನೇ ಕ್ರಾಸ್‌ನ ರಾಮೇಗೌಡರ ಮೇಲಂತಸ್ತಿನ ಮನೆಯಲ್ಲಿ ಮಗ ದೀಕ್ಷಿತ್‌ ಉ.ಪ್ರಜ್ವಲ್‌ ಜತೆ ವಾಸವಾಗಿದ್ದರು.

ಕಾಲೇಜಲ್ಲಿ ಲವ್ ಮಾಡಿದ್ರು : ಸಲುಗೆಯಿಂದ ಇದ್ದು ಲೈಂಗಿಕ ದೌರ್ಜನ್ಯ ಎಸಗಿ ಈಗ ಹೀಗ್ ಮಾಡೋದಾ..?

ಮಧ್ಯಾಹ್ನ ದುಷ್ಕರ್ಮಿಗಳು ಆಕೆಯ ಕೈ ಕಾಲು ಕಟ್ಟಿಅತ್ಯಾಚಾರ ನಡೆಸಿ, ಪಾತ್ರೆಗಳಿಂದ ಹಲ್ಲೆ ಮಾಡಿದ್ದಾರೆ. ನಂತರ ತಲೆದಿಬ್ಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಡಿವೈಎಸ್ಪಿ ಶಿವಪ್ರಸಾದ್‌, ಸಿಪಿಐ ಕೆ.ಆರ್‌.ಪ್ರಸಾದ್‌, ಪಿಎಸ್‌ಐ ದಿಲೀಪ್‌ಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶ್ವಾನದಳ, ಬೆರಳಚ್ಚು ತಂಡ ಪರಿಶೀಲಿಸಿತು. ಪೂರ್ಣಿಮಾ ಕೊಲೆ ಹಿನ್ನೆಲೆಯಲ್ಲಿ ಇಡೀ ಬಡಾವಣೆಯಲ್ಲಿ ಜನರು ನೆರೆದಿದ್ದರು. ಪೊಲೀಸರು ಚದುರಿಸಿ ನಿಯಂತ್ರಿಸಿದ್ದಾರೆ. ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.