ಶೀಲ ಶಂಕಿಸಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಅತ್ತೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ ಅಳಿಯಂದಿರು ಕೊಲೆ ಮಾಡಿದ ಇಬ್ಬರು ಅಳಿಯಂದಿರು ಪೊಲೀಸರ ವಶಕ್ಕೆ ಕೌಟುಂಬಿಕ ಕಲಹ ಕಾರಣದಿಂದ ಅತ್ತೆಯ ಹತ್ಯೆ

ಮಂಡ್ಯ (ಜು.17): ಶೀಲ ಶಂಕಿಸಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ ಅತ್ತೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಇಬ್ಬರು ಅಳಿಯಂದಿರನ್ನು ಪೊಲೀಸರು ಬಂಧಿಸಿದ್ದಾರೆ. 

ಗ್ರಾಮದ ನಿವಾಸಿಗಳಾದ ಮೃತಳ ಅಳಿಯ ಅವಿನಾಶ್ ಮತ್ತು ಭಾವಿ ಅಳಿಯ ರವಿ ಕುಮಾರ್ ಬಂಧಿತರು. 

ಗ್ರಾಮ ಲೇ. ಶ್ರೀಧರ್ ಪತ್ನಿ ಲೀಲಾವತಿ (37) ಅವರನ್ನು ಜುಲೈ 9 ರಂದು ರಾತ್ರಿ ಆರೋಪಿಗಳಾದ ಅವಿನಾಶ ಮತ್ತು ರವಿಕುಮಾರ್ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ಶವವನ್ನು ಆಟೋದಲ್ಲಿ ಸಾಗಿಸಿ ತಾಲೂಕಿನ ಸಂಗಾಪುರ ಬಳಿ ಹಿನ್ನೀರಿನಲ್ಲಿ ನಿರ್ಮಿಸಿದ ಹೊಸ ಸೇತುವೆ ಬಳಿ ಕಾವೇರಿ ನದಿಗೆ ಬಿಸಾಡಿದ್ದರು. 

ಹರಪನಹಳ್ಳಿ: ರಾಡ್‌ನಿಂದ ತಲೆಗೆ ಹೊಡೆದು ಆರ್‌ಟಿಐ ಕಾರ್ಯಕರ್ತನ ಹತ್ಯೆ

ಕೊಲೆ ಮಾಡಿದ ನಂತರ ಆರೋಪಿಗಳು ಸಂಬಂಧಿಕರ ಮನೆಯಲ್ಲಿ ತಲೆ ಮರೆಸಿಕೊಂಡಿದ್ದರು. ಜುಲೈ 11 ರಂದು ಸೇತುವೆ ಬಳಿಯ ನೀರಿನಲ್ಲಿ ಲೀಲಾವತಿ ಶವ ಸಿಕ್ಕಿತ್ತು. 

ಗ್ರಾಮಾಂತರ ಪೊಲೀಸರು ಅಪರಿವಿತ ಮಹಿಳೆ ಶವ ಸಿಕ್ಕಿದ್ದು ವಾಸುದಾರರ ಮಾಹಿತಿಗಾಗಿ ಮೃತ ಮಹಿಳೆಯ ಫೊಟೊ ಸಹಿತ ಪತ್ರಿಕಾ ಪ್ರಕಟಣೆ ನೀಡಿದ್ದರು. ಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಫೊಟೊ ಗಮನಿಸಿದ ವಿಠಲಾಪುರ ಗ್ರಾಮಸ್ಥರು ಇದು ಲೀಲಾವತಿ ಎಂದು ಪೊಲೀಸರಿಗೆ ತಿಳಿಸಿದರು. 

ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಮೃತ ಲೀಲಾವತಿ ಇಬ್ಬರು ಅಳಿಯಂದಿರು ಘಟನೆ ನಡೆದ ದಿನದಿಂದ ನಾಪತ್ತೆಯಾಗಿರುವುದು ತಿಳಿಯಿತು.

ಇಬ್ಬರನ್ನು ಹೊಡಕೆಶೆಟ್ಟಿಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಗುರುವಾರ ಪತ್ತೆ ಮಾಡಿ ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದಾಗ ಮೃತ ಲೀಲಾವರಿ ಅವರೊಂದಿಗೆ ಕೌಟುಂಬಿಕ ಕಲಹ ನಡೆಯುತ್ತಿದ್ದು ನಡತೆ ಬಗ್ಗೆ ಶಂಕಿಸಿ ಈ ಕೃತ್ಯ ಎಸಗಿದ್ದಾರೆನ್ನಲಾಗಿದೆ.