ಬೆಳಗಾವಿ: ಕೊರೋನಾ ಕಾಟಕ್ಕೆ ಆಸ್ಪತ್ರೆ ಎದುರು ಬಾಣಂತಿ ನರಳಾಟ
* ಬೆಡ್ ಸಿಗದೆ ಆ್ಯಂಬುಲೆನ್ಸ್‌ನಲ್ಲೇ ಪರದಾಡಿದ 13 ದಿನದ ಬಾಣಂತಿ
* ಬೆಳಗಾವಿ ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ನಡೆಸದ ಘಟನೆ
* ಮಗಳಿಗೆ ಒಂದ ಬೆಡ್ ಕೊಟ್ಟು ಪುಣ್ಯ ಕಟ್ಟಕೊಳ್ಳಿ ಎಂದು ಬೇಡಿಕೊಳ್ಳುತ್ತಿದ್ದ ತಾಯಿ
ಬೆಳಗಾವಿ(ಮೇ.09): ಕೊರೋನಾ ಸೃಷ್ಟಿಸುತ್ತಿರುವ ಅವಘಡಗಳಿಗೆ ಕೊನೆಯ ಇಲ್ಲದಂತಾಗಿದೆ. ಈ ಹೆಮ್ಮಾರಿಗೆ ಅದೆಷ್ಟೋ ಜನರು ನರಳುತ್ತಿದ್ದಾರೆ. ಶನಿವಾರ ಕೂಡಾ 13 ದಿನದ ಬಾಣಂತಿ ಕೂಡಾ ಬೆಡ್ ಸಿಗದೇ ಆ್ಯಂಬುಲೆನ್ಸ್‌ನಲ್ಲೇ ನರಳಾಡುತ್ತಿದ್ದ ದೃಶ್ಯ ಬಿಮ್ಸ್ ಬಳಿ ಕಂಡು ಬಂದಿದೆ.
ಜಿಲ್ಲೆಯ ರಾಮದುರ್ಗ ತಾಲೂಕಿನ ರಂಕನಕೊಪ್ಪ ಗ್ರಾಮದ ಮಾಯವ್ವ ಎಂಬ ಬಾಣಂತಿ ಮಗಳ ಕರುಳಿನಲ್ಲಿ ಬಾವು ಬಂದಿದೆ. ಕೋವಿಡ್ ಲಕ್ಷಣಗಳು ಕಂಡು ಬಂದಿದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ತಂದೆ, ತಾಯಿ, ಸಹೋದರ ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಿಗದೇ ನರಳಾಟ ನಡೆಸಿದ ದೃಶ್ಯ ಕಂಡು ಬಂದವು.
"
ಗೋಕಾಕ್‌ನಲ್ಲಿ ಇಂಗ್ಲೆಂಡ್ ಮಾದರಿ ಕೊರೋನಾ ಚಿಕಿತ್ಸೆ!
ಕಳೆದ ನಾಲ್ಕು ದಿನಗಳ ಹಿಂದೆ ಬಾಣಂತಿ ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗಾಗಿ ದಾಖಲುಗೊಂಡಿದ್ದಳು. ಆದರೆ ಯಾವಾಗ ಬಾಣಂತಿಗೆ ಕೊರೋನಾ ಲಕ್ಷಣಗಳು ಕಂಡು ಬಂದವೋ ಆಗ ಅಲ್ಲಿಯ ತಾಲೂಕು ವೈದ್ಯರು ಜಿಲ್ಲಾಸ್ಪತ್ರೆಗೆ ಹೋಗಿ ಎಂದು ಹೇಳಿದ ಕಾರಣಕ್ಕೆ ಅವರು ಆ್ಯಂಬುಲೆನ್ಸ್ ಮಾಡಿಕೊಂಡು ಜಿಲ್ಲಾಸ್ಪತ್ರೆಗೆ ಬಂದಿದ್ದರು. ಆದರೆ, ಎರಡ್ಮೂರು ಗಂಟೆಯಾದರೂ ಬಾಣಂತಿಗೆ ಬೆಡ್ ಸಿಗದೇ ಆ್ಯಂಬುಲ್ಸೆನ್ಸ್‌ನಲ್ಲಿ ನರಳುತ್ತಿದ್ದದ್ದು ಕಂಡು ಬಂದಿತು. ಬಾಣಂತಿ ತಾಯಿ ಮಾತ್ರ ಮಗಳಿಗೆ ಒಂದ ಬೆಡ್ ಕೊಟ್ಟು ಪುಣ್ಯ ಕಟ್ಟಕೊಳ್ಳಿ ಎಂದು ಬೇಡಿಕೊಳ್ಳುತ್ತಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona