ಯಾದಗಿರಿ: ಚಿಕಿತ್ಸೆ ಸಿಗದೆ ಆ್ಯಂಬುಲೆನ್ಸ್‌ನಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಮಹಿಳೆ
* ಕೋವಿಡ್ ಆಸ್ಪತ್ರೆಯೆದುರು ನಿಂತರೂ ಅಡ್ಮಿಟ್ ಮಾಡಿಕೊಳ್ಳದ ವೈದ್ಯರು
* ಕೋವಿಡ್-ಕರಾಳ ದಿನಗಳು
* ಯಾದಗಿರಿ ನಗರದಲ್ಲಿ ನಡೆದ ಘಟನೆ
ಆನಂದ್ ಎಂ. ಸೌದಿ
ಯಾದಗಿರಿ(ಆ.19): ಕೋವಿಡ್ ಆಸ್ಪತ್ರೆಯೆದುರು ಹೋಗಿ ನಿಂತರೂ ನಮ್ಮ ಗೋಳು ಯಾರೂ ಕೇಳಲಿಲ್ಲ.. ಯಾರಾದ್ರೂ ಬಂದು ಮೊದಲು ಪೇಶಂಟ್‌ನನ್ನ ಒಳಗೆ ಕರೆದುಕೊಂಡು ಹೋಗಿ ಅಂತ ಅತ್ತು ಕರೆದ್ರೂ ಅಲ್ಲಿ ಯಾರೂ ಬರ್ಲೇ ಇಲ್ಲ. ಸುಮಾರು ಅರ್ಧಗಂಟೆಗಳ ಕಾಲ ಅಮ್ಮ ಅಂಬ್ಯಲೆನ್ಸ್‌ನಲ್ಲೇ ಒದ್ದಾಡಿ ಪ್ರಾಣ ಬಿಟ್ರು!
ಜುಲೈ 29, 2020 ರ ಬೆಳಗಿನ ಜಾವ ಯಾದಗಿರಿ ಕೋವಿಡ್ ಆಸ್ಪತ್ರೆಯೆದುರು ಆಕ್ರಂದನ ಮುಗಿಲು ಮುಟ್ಟಿತ್ತು. ಆ್ಯಂಬುಲೆನ್ಸ್‌ನಲ್ಲೇ ಪ್ರಾಣಬಿಟ್ಟ ಮಹಿಳೆಯೊಬ್ಬಳಿಗಾಗಿ ಸಂಬಂಧಿಕರು ಕಣ್ಣೀರು ಹಾಕುತ್ತಿದ್ದರು. ತಾಯಿಯನ್ನು ಕಳೆದುಕೊಂಡ ದುಖಃದ ಜೊತೆಗೆ ಚಿಕಿತ್ಸೆ ನೀಡಲು ವೈದ್ಯರಾರಯರೂ ಮುಂದೆ ಬರಲಿಲ್ಲ. ಕನಿಷ್ಠ ಆ್ಯಂಬುಲೆನ್ಸ್‌ನಿಂದ ಕೆಳಗಿಳಿಸಿ, ಆಸ್ಪತ್ರೆಯೊಳಗೆ ಕರೆದೊಯ್ದು ಚಿಕಿತ್ಸೆಯನ್ನಾದರೂ ನೀಡಿದ್ದರೆ ಬದುಕುತ್ತಿದ್ದರೇನೋ ಎಂಬ ಆಕ್ರೋಶ ಹೊರಹೊಮ್ಮಿತ್ತು.
ಶಹಾಪುರ ತಾಲೂಕಿನ ಸಗರ ಗ್ರಾಮದ ಆಯೇಶಾ ಬೀ ಸಾವು ಅವರ ಕುಟುಂಬವನ್ನು ಈಗಲೂ ಆಘಾತದಲ್ಲಿರಿಸಿದೆ. ಎಲ್ಲರಂತೆ ಸಾಮಾನ್ಯವಾಗಿದ್ದ ಅವರು ಜ್ವರದ ಕಾರದಿಂದ ಖಾಸಗಿ ಆಸ್ಪತ್ರೆಗೆ ಹೋದಾಗ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ತಿಳಿಸಿದರು. ಶಹಾಪುರದಲ್ಲಿ ರಾತ್ರಿ ಚಿಕಿತ್ಸೆ ನೀಡಿದ ನಂತರ ಆ್ಯಂಬುಲೆನ್ಸ್‌ನಲ್ಲಿ ಯಾದಗಿರಿ ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಬಂದರು.
ಯಾದಗಿರಿ: ಲಸಿಕೆ ಪಡೆಯಲು ಜನರ ಹಿಂದೇಟು, ವ್ಯಾಕ್ಸಿನ್ ಡ್ರೈವ್ ಹೆಚ್ಚಿಸಲು ಹರಸಾಹಸ
ಆದರೆ, ಆ್ಯಂಬುಲೆನ್ಸ್‌ನಿಂದ ಹೊರಗಿಳಿಸಲು ಅಥವಾ ರೋಗಿಯ ಸ್ಥಿತಿಗತಿ ಅರಿಯಲು ಅರ್ಧಗಂಟೆ ವರೆಗೆ ಯಾರೂ ಬಾರದಿರುವುದು ನಮಗೆ ಆಘಾತವಾಯ್ತು ಎಂದ ಪುತ್ರ ಮುಬಾರಕ್, ಉಸಿರಾಟದ ವ್ಯವಸ್ಥೆ (ಆಕ್ಸಿಜನ್)ಯಿದ್ದ ಅಂಬ್ಯುಲೆನ್ಸ್‌ನಲ್ಲಿ ಅದು ಕಮ್ಮಿಯಾಗತೊಡಗಿತು. ಆಗ, ಅಮ್ಮನಿಗೆ ಮತ್ತಷ್ಟೂತೊಂದರೆ ಕಾಣಿಸಿಕೊಂಡಾಗ ಆಸ್ಪತ್ರೆಯೊಳಗೆ ಹೋಗಿ ಯಾರಾದರೂ ಸಹಾಯಕ್ಕೆ ಬನ್ನಿ ಎಂದರೂ ಬರಲಿಲ್ಲ. ಅಲ್ಲಿಂದಿಲ್ಲಿಗೆ ಓಡಾಡಿದ್ರೂ ಪ್ರಯೋಜನ ಆಗ್ಲಿಲ್ಲ. ಅಂಬ್ಯುಲೆನ್ಸ್‌ನಲ್ಲಿನ ಆಕ್ಸಿಜನ್ ಮುಗಿಯುವ ಹಂತ ತಲುಪಿತ್ತಿ, ಉಸಿರಾಡಲು ಕಷ್ಟವಾಗಿದ್ದರಿಂದ ಒದ್ದಾಡಿ ಒದ್ದಾಡಿದ ಅಮ್ಮ ನನ್ನ ಕಣ್ಣೆದುರೇ ಕೊನೆಯುಸಿರೆಳದರು ಎಂದು ಕಣ್ಣೀರಾದರು.
ನಾವು ಆಸ್ಪತ್ರೆಗೆ ಹೋಗಿದ್ದಾಗ ಆರಂಭದಲ್ಲೇ ಅಡ್ಮಿಟ್ ಮಾಡಿದ್ದರೆ ಅಮ್ಮ ಬದುಕುತ್ತಿದ್ದರೇನೋ. ಆಸ್ಪತ್ರೆಯ ನಿರ್ಲಕ್ಷ್ಯ ತಾಯಿಯನ್ನು ಬಲಿ ಪಡೆಯಿತು ಎಂದು ಆಯೇಶಾ ಬೀ ಪುತ್ರ ಮುಬಾರಕ್ ತಿಳಿಸಿದ್ದಾರೆ.