ತುಮಕೂರು, [ಜೂನ್.06]: ಟಿಬಿ ಕಾಯಿಲೆಗೆ ಮನನೊಂದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು‌ ಜಿಲ್ಲೆ ಗುಬ್ಬಿ ತಾಲೂಕಿನ ಹಿಡಗೂರು ಗ್ರಾಮ ನಡೆದಿದೆ.

ಭವ್ಯ (24) ಮೃತ ದುರ್ದೈವಿ. ಇಂದು [ಗುರುವಾರ] ಮಧ್ಯಾಹ್ನ ಭವ್ಯ ಆಸ್ಪತ್ರೆ ಹೋಗಿ ಚಿಕಿತ್ಸೆ ಪಡೆದು ಮನೆಗೆ ಬಂದಿದಿದ್ದಾಳೆ. ಅದೇನು ತಿಳಿತೋ ಏನೋ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹಲವು ದಿನಗಳಿಂದ ಭವ್ಯ ಟಿಬಿ ಕಾಯಿಲೆ ಬಳಲುತ್ತಿದ್ದಳು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೇಲ್ನೊಟಕ್ಕೆ ತಿಳಿದುಬಂದಿದೆ.

ಸರಿಯಾಗಿ ಔಷಧಿ ತೆಗೆದುಕೊಂಡರೆ ಟಿಬಿ ಕಾಯಿಲೆ ಗುಣಮುಖವಾಗುತ್ತೆ. ಈ ಕಾಯಿಲೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಔಷಧಿಗಳನ್ನು ಸಹ ನೀಡಲಾಗುತ್ತದೆ. ಪ್ರತಿಯೊಂದು ರೋಗಕ್ಕೂ ಔಷಧಿಗಳಿದ್ದು, ಇರುವಷ್ಟು ದಿನ ಚಿಕಿತ್ಸೆ ಪಡೆಯುತ್ತಾ ಕುಟುಂಬದವರೊಂದಿಗೆ ಇರುವುದು ಒಳ್ಳೆಯದು. ಎಲ್ಲದಕ್ಕೂ ಸಾವು ಒಂದೇ ಪರಿಹಾರ ಅಲ್ಲ.