ತೀವ್ರ ಹೊಟ್ಟೆ ನೋವು: ಗೃಹಿಣಿ ಆತ್ಮಹತ್ಯೆ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 3, Aug 2018, 2:31 PM IST
Woman Commit Suicide for stomach pain
Highlights

ಹೊಟ್ಟೆ ನೋವು ತಾಳಲಾರದೇ ಗೃಹಿಣಿ ಆತ್ಮಹತ್ಯೆ! ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಾಳವಿಕಾ! ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಘಟನೆ! ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಚಿತ್ರದುರ್ಗ(ಆ.3): ಹೊಟ್ಟೆ ನೋವು ತಾಳಲಾರದೇ ಗೃಹಿಣಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆದಿದೆ.

ಇಲ್ಲಿನ ಕೊರಚರ ಹಟ್ಟಿಯ ಮಾಳವಿಕಾ ಎಂಬ ಗೃಹಿಣಿಯೇ ಹೊಟ್ಟೆ ನೋವು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಪತಿ ರವಿಕುಮಾರ್ ಕೆಲಸ ಮುಗಿಸಿ ಮನೆಗೆ ಬಂದಾಗ, ಪತ್ನಿ ಮಾಳವಿಕಾ ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ವೃತ್ತಿಯಿಂದ ಆಟೋ ಚಾಲಕರಾಗಿರುವ ರವಿಕುಮಾರ್, ಎಂದಿನಂತೆ ಸಂಜೆ ವೇಳಗೆ ಮನೆಗೆ ವಾಪಸ್ ಆದಾಗ, ಪತ್ನಿ ಮಾಳವಿಕಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಸುದ್ದಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸದ್ಯ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

loader